ಪಾತ್ರಗಳಿಗೆ ಜೀವ ತುಂಬಿ ನಟಿಸುವ ಅದ್ಭುತ ನಟ ನಾಗೇಂದ್ರ ಶಾ… ಇವರ ಮಗಳು ಕೂಡ ನಟಿ

Published : May 19, 2026, 10:49 PM IST

Nagendra Sha: ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯ ನಟರಾಗಿ, ನಿರ್ದೇಶಕರಾಗಿ, ಬರಹಗಾರರಾಗಿಯೂ ಗುರುತಿಸಿಕೊಂಡ ಪ್ರತಿಭಾನ್ವಿತ, ಬಹುಮುಖ ಪ್ರತಿಭೆ ನಾಗೇಂದ್ರ ಶಾ, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.

PREV
16
ನಾಗೇಂದ್ರ ಶಾ

ನಾಗೇಂದ್ರ ಹೆಸರು ಹೇಳಿದರೆ ಕಿರುತೆರೆ ವೀಕ್ಷಕರಿಗೆ ಅಷ್ಟು ಶೀಘ್ರದಲ್ಲಿ ಗೊತ್ತಾಗೋದಿಲ್ಲ. ಆದರೆ ಅಣ್ಣಯ್ಯ ಧಾರಾವಾಹಿಯ ವೀರಭದ್ರ ಎಂದರೆ ಖಂಡಿತವಾಗಿಯೂ ಗೊತ್ತಾಗುತ್ತೆ ಅಲ್ವಾ? ತಮ್ಮ ಅಭಿನಯದ ಮೂಲಕ ಜನ ಆ ಪಾತ್ರವನ್ನು ಇಷ್ಟಪಡದೇ ಇರುವಂತೆ ಮಾಡಿದ ಅಭಿನಯ ಭಯಂಕರ ಇವರು.

26
ಪಾತ್ರಗಳಿಗೆ ಪರಕಾಯ ಪ್ರವೇಶ

ನಾಗೇಂದ್ರ ಶಾ ಕನ್ನಡ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಸಹ ಗುರುತಿಸಿಕೊಂಡವರು. ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ, ನೆಗೆಟಿವ್ ರೋಲ್ ಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಹೆಚ್ಚಿಗೆ ಜನಪ್ರಿಯತೆ ತಂದುಕೊಟ್ಟು ಜನ ಗುರುತಿಸುವಂತೆ ಮಾಡಿದ್ದು, ಕಿರುತೆರೆ.

36
ಪಾರು ಸೀರಿಯಲ್ ಮೂಲಕ ಜನಪ್ರಿಯತೆ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿಯಲ್ಲಿ ಪಾರು ತಂದೆಯಾಗಿ, ಅಖಿಲಾಂಡೇಶ್ವರಿ ಮನೆಯಲ್ಲಿ ನಂಬಿಕಸ್ಥ ಕಾರ್ ಡ್ರೈವರ್ ಹನುಮಂತುವಾಗಿ ನಾಗೇಂದ್ರ ಶಾ ಅಭಿನಯಿಸಿದ್ದರು. ಅಪ್ಪನಾಗಿ ಇವರ ಪಾತ್ರ ಅದ್ಭುತವಾಗಿ ಮೂಡಿ ಬಂದಿತ್ತು.

46
ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರ

ಪಾಸಿಟಿವ್ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಾಗೇಂದ್ರ ಶಾ ಇದೀಗ ಅಣ್ಣಯ್ಯ ಧಾರಾವಾಹಿಯಲ್ಲೂ ಪಾರು ತಂದೆ ವೀರಭದ್ರನಾಗಿ ನೆಗೆಟೀವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಂತಹ ಕೆಡಿಯ ಪಾತ್ರ ಎಂದರೆ ಜನ ನೋಡಿದರೆ ಬಾಯಿ ತುಂಬಾ ಬಯ್ಯಬೇಕು ಅಂತಹ ಪಾತ್ರ ನಾಗೇಶ್ ಅವರದ್ದು.

56
ನಿರ್ದೇಶಕರು ನಿರ್ಮಾಪಕರೂ ಹೌದು

ಇನ್ನು ನಾಗೇಂದ್ರ ಶಾ ಅವರು ಸಣ್ಣ ಪಾತ್ರದಿಂದ ಹಿಡಿದು ದೊಡ್ಡ ಪಾತ್ರದವರೆಗೂ ಯಾವುದೇ ಪಾತ್ರ ಕೊಟ್ಟರೂ ಅದ್ಭುತವಾಗಿ ಮಾಡುವ ನಟ ಮಾತ್ರ ಅಲ್ಲ, ಇವರು ನಿರ್ದೇಶಕರೂ ಹೌದು, ಸೀರಿಯಲ್ ನಿರ್ದೇಶನ ಮಾಡಿದ್ದಾರೆ, ಜೊತೆಗೆಕಥೆಯನ್ನೂ ಕೂಡ ಬರೆದಿದ್ದಾರೆ. ಕಲಿಯೋದಕ್ಕೆ ವಯಸ್ಸು ಮುಖ್ಯ ಅಲ್ಲ ಎನ್ನುವ ಇವರು, ಕಂಪ್ಯೂಟರ್ , ಟೈಪಿಂಗ್, ಕೀ ಬೋರ್ಡ್ ಎಲ್ಲಾ ಕಲಿತಿರೋದು 50 ವರ್ಷಗಳ ಬಳಿಕವೇ.

66
ನಾಗೇಂದ್ರ ಶಾ ಮಗಳು ಕೂಡ ನಟಿಯೇ

ಹೌದು ನಾಗೇಂದ್ರ ಶಾ ಪುತ್ರಿ, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚಿದವರು, ಡ್ಯಾನ್ಸ್, ರಿಯಾಲಿಟಿ ಶೋ ಮಾಡೆಲಿಂಗ್ ನಲ್ಲಿ ಹೆಸರು ಮಾಡಿದವರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಅವೇರ್ ನೆಸ್ ಕೊಡುವ ಹಾಗೂ ಕಾಮಿಡಿ ವಿಡೀಯೋಗಳನ್ನು ರೀಲ್ಸ್ ಗಳ ಮೂಲಕವೇ ಜನಪ್ರಿಯತೆ ಪಡೆದಿರುವ ಕಾವ್ಯಾ ಶಾ ಅವರ ತಂದೆ ಇವರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories