ಕಿರುತೆರೆಯ ಸ್ಟಾರ್ ನಟರ ಸುಂದರಿ ಹೆಂಡ್ತೀರು…ಹೀಗಿದ್ದಾರೆ ನೋಡಿ…

First Published | Jan 21, 2023, 8:03 PM IST

ಕಿರುತೆರೆಯ ಸಿರಿಯಲ್ ನಟರ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಆದ್ರೆ ಅವರ ಹೆಂಡ್ತೀರ ಬಗ್ಗೆ ಗೊತ್ತಾ? ನಿಮಗೆ. ನಮ್ಮ ನಟರ ಹೆಂಡ್ತಿರೂ ಕೂಡ ತಾವು ಯಾವ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಷ್ಟು ಸುಂದರಿಯಾಗಿದ್ದಾರೆ. ಬನ್ನಿ ನಮ್ಮ ಕಿರುತೆರೆ ಸ್ಟಾರ್ ನಟರ ಸುಂದರಿ ಹೆಂಡ್ತೀರನ್ನೊಮ್ಮೆ ನೋಡೋಣ. 
 

ವಿಜಯ್ ಸೂರ್ಯ (Vijay Suriya)

ಅದೆಷ್ಟೋ ಸಿರಿಯಲ್ ಮಾಡಿದ್ದರೂ ಇಂದಿಗೂ ಅಗ್ನಿ ಸಾಕ್ಷಿಯ ಸಿದ್ದಾರ್ಥ್ ಆಗಿ ಗುರುತಿಸಿಕೊಂಡಿರುವ ಡಿಂಪಲ್ ಬಾಯ್ ವಿಜಯ್ ಸೂರ್ಯ ಅವರ ಹೆಂಡ್ತಿ ಕೂಡ ವಿಜಯ್ ಅಷ್ಟೇ ಮುದ್ದಾಗಿರೋ ಡಿಂಪಲ್ ಇರೋ ಸುಂದರಿ ಚೈತ್ರ. ಚೈತ್ರ ಸಾಫ್ಟ್ ವೇರ್ ಇಂಜಿನಿಯರ್. ಇವರಿಬ್ಬರದು ಅರೇಂಜ್ ಮ್ಯಾರೇಜ್. ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾರೆ ವಿಜಯ್ ಸೂರ್ಯ. 
 

ರಿತ್ವಿಕ್ ಮಠದ  (Ritvvik Mathada)

'ಗಿಣಿರಾಮ' ಧಾರಾವಾಹಿಯಲ್ಲಿ ಶಿವರಾಮನ ಪಾತ್ರದಲ್ಲಿ ಖಡಕ್ ಉತ್ತರ ಕರ್ನಾಟಕದ ಭಾಷೆ ಮಾತನಾಡಿ, ಅದ್ಭುತವಾದ ನಟನೆಯಿಂದ ಗಮನಸೆಳೆದಿರುವ ನಟ ರಿತ್ವಿಕ್ ಮಠದ ಹೆಂಡ್ತಿ ಇವರು. ಇವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಹೆಂಡ್ತಿ ಹೆಸರು ಸುಮನ್, ಇವರು ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜಿನಿಯರ್ ಆಗಿದ್ದಾರೆ.

Tap to resize

ರಕ್ಷಿತ್ ಗೌಡ (Raksh Gowda)

ಪುಟ್ಟ ಗೌರಿ ಮದುವೆ, ನಂತರ ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸಿ ಮನೆ ಮಗನಾಗಿರುವ ರಕ್ಷಿತ್ ಗೌಡ ಮನದನ್ನೆಯನ್ನು ಪ್ರೀತಿಸಿ ವರಿಸಿದ್ದಾರೆ. ತಿಪಟೂರಿನ ಹುಡುಗಿಯಾಗಿರೋ ಅನುಷಾ ಮತ್ತು ರಕ್ಷ್ ಸುಮಾರು 12 ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

ನಿನಾದ್ ಹರಿತ್ಸಾ (Ninad Haritsa)

ನಾಗಿಣಿ 2 ಸೀರಿಯಲ್ ನಲ್ಲಿ ತ್ರಿಶೂಲ್ ಆಗಿ ನಟಿಸಿರುವ ನಟ ನಿನಾದ್ ಹರಿತ್ಸಾ ತಮ್ಮ ಗೆಳತಿ ರಮ್ಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಮ್ಯಾ ತುಂಬಾನೆ ಸುಂದರವಾಗಿದ್ದಾರೆ. ಸೀರಿಯಸ್, ಸಿನಿಮಾ ನಂಟಿಲ್ಲದ ರಮ್ಯಾರನ್ನು ನಿನಾದ್ ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿದ್ದರು, ಕಳೆದ ವರ್ಷವಷ್ಟೆ ಈ ಜೋಡಿ ಸಪ್ತಪದಿ ತುಳಿಯಿತು.

ಕಾರ್ತಿಕ್ ಜಯರಾಂ  (Kartik Jayaram)

ಕಿರುತೆರೆಯ ಫೆವರಿಟ್ ನಟ ಜೆಕೆ ಆಲಿಯಾಸ್ ಕಾರ್ತಿಕ್ ಜಯರಾಂ ಯಾವಾಗ್ಲೂ ತಮ್ಮ ಮದ್ವೆ ಗಾಸಿಪ್ ನಿಂದಲೇ ಸುದ್ದಿಯಾಗುತ್ತಿದ್ದರು. ಇವರು ತಮ್ಮ ಪ್ರೇಮಿಯಾಗಿರುವ ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತ್ ಜೊತೆ  ಇರೋ ಪೋಟೋ ಆಗಾಗ ಹಂಚಿ ಕೊಳ್ಳುತ್ತಾರೆ. ರಿಲೇಷನ್‌ಶಿಪ್ ಸ್ಟೇಟಸ್ ಬಗ್ಗೆ ಡೌಟಿದೆ.. ಅಪರ್ಣಾ ಹೇಳಿ ಕೇಳಿ ಫ್ಯಾಷನ್ ಡಿಸೈನರ್, ಇವರು ಸ್ಟೈಲಿಶ್ ಆಗಿರೋದರ ಜೊತೆಗೆ ಡ್ರೆಸ್ಸಿಂಗ್ ಕೂಡ ಟ್ರೆಂಡಿಯಾಗಿದೆ. 

ಚಂದು ಗೌಡ

ಇತ್ತೀಚೆಗಷ್ಟೆ ತಂದೆಯಾಗಿರುವ ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್ ಗಳಲ್ಲೂ ಮಿಂಚುತ್ತಿರುವ ನಟ ಚಂದು ಗೌಡ. ಇವರು ಸಹ ತಮ್ಮ ಗೆಳತಿ ಶಾಲಿನಿ ನಾರಾಯಣ್ ಅವರನ್ನು ಮದುವೆಯಾಗಿದ್ದಾರೆ. ಶಾಲಿನಿ ಯಾವ ಹೀರೋಯಿನ್ ಗಳಿಗೆ ಕಮ್ಮಿ ಇಲ್ಲ ಎನ್ನುವಷ್ಟು ಸುಂದರಿಯಾಗಿದ್ದಾರೆ. 

ಜಗನ್ (Jagan Chandrashekar)

ಕನ್ನಡ ಕಿರುತೆರೆ ಪ್ರಿಯರ ನೆಚ್ಚಿನ ನಟ ಜಗನ್ ಚಂದ್ರಶೇಖರ್ ಪತ್ನಿ ರಕ್ಷಿತಾ ಮುನಿಯಪ್ಪ. ಬಹಳ ವರ್ಷಗಳ ಕಾಲ ಪ್ರೀತಿಸಿ, ಹಸೆಮಣೆ ಏರಿದ್ದರು. ದುಬೈನಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿರುವ ರಕ್ಷಿತಾ ಕಿರುತೆರೆ ಸ್ಟಾರ್ ಜಗನ್ ಅವರ ಸ್ಟೈಲಿಶ್ ಹೆಂಡ್ತಿ ಅಂದ್ರೆ ತಪ್ಪಾಗಲ್ಲ. 

ಭವಾನಿ ಸಿಂಗ್ (Bhavani singh)

ಕನ್ನಡದ ‘ರಕ್ಷಾ ಬಂಧನ, ಚರಣ ದಾಸಿ, ಸುಬ್ಬುಲಕ್ಷ್ಮಿ ಸಂಸಾರ ಸಿರಿಯಲ್ ಖ್ಯಾತಿಯ ನಟ ಭವಾನಿ ಸಿಂಗ್ ಅವರ ಪತ್ನಿ ಪಂಕಜಾ ಶಿವಣ್ಣ ಸುಂದರಿ. ಇವರು ಕೂಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಪಂಕಜಾ ಮತ್ತು ಭವಾನಿ ಸಿಂಗ್ ಪ್ರೀತಿಸಿ ಮದುವೆಯಾಗಿದ್ದರು. 

Latest Videos

click me!