ತಾಯಿಯನ್ನು ಮದುವೆಯಾಗಲು ಹೋಗಿ ಮಗಳನ್ನು ವರಿಸಿದ ರಾಹುಲ್‌ ಮಹಾಜನ್‌

Published : Jan 21, 2023, 03:42 PM IST

ರಾಹುಲ್‌ ಮಹಾಜನ್‌ (Rahul Mahajan) ಕಿರುತೆರೆಯ ಚಿರಪರಿಚಿತ ಮುಖ. ಅಷ್ಟೇ ಅಲ್ಲ ಅವರ ವೈಯಕ್ತಿಕ ಜೀವನವೂ ಅಷ್ಟೇ ಫೇಮಸ್‌. ಕೇಂದ್ರ ಮಾಜಿ ಸಚಿವ, ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್‌ ಹಿಂದೆ ಪೈಲಟ್‌ ಆಗಿದ್ದರು. ಹಲವು ರಿಯಾಲಿಟ್‌ ಶೋಗಳಲ್ಲಿ ಕಾಣಿಸಿಕೊಂಡಿರುವ ರಾಹುಲ್‌ ಈ ಬಾರಿ ಸ್ಮಾರ್ಟ್ ಜೋಡಿಯಲ್ಲಿ ತಮ್ಮ ಮೂರನೇ ಪತ್ನಿ ಜೊತೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಾಹುಲ್‌ ತಮ್ಮ ಹಿಂದಿನ ಮದುವೆಗಳು ಮತ್ತು ಹಲವು ವಿಷಯಗಳ ಬಗ್ಗೆ ಮತಾನಾಡಿದ್ದಾರೆ.

PREV
112
 ತಾಯಿಯನ್ನು ಮದುವೆಯಾಗಲು ಹೋಗಿ ಮಗಳನ್ನು ವರಿಸಿದ ರಾಹುಲ್‌ ಮಹಾಜನ್‌

ಇತ್ತೀಚೆಗೆ ಬಿಡುಗಡೆಯಾದ ರಿಯಾಲಿಟಿ ಶೋ ಸ್ಮಾರ್ಟ್ ಜೋಡಿಯಲ್ಲಿ ಮೊದಲು ದೃಢಪಡಿಸಿದ ಸ್ಪರ್ಧಿಗಳು ರಾಹುಲ್ ಮಹಾಜನ್ ಮತ್ತು ಅವರ ಪತ್ನಿ ನಟಾಲಿಯಾ.. ವಾರಾಂತ್ಯದಲ್ಲಿ ಪ್ರಥಮ ಪ್ರದರ್ಶನಗೊಂಡ ಈ ರಿಯಾಲಿಟಿ ಶೋನಲ್ಲಿ ದಂಪತಿ ಮೊದಲ ಬಾರಿಗೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಂಡರು.

212

ಕಿರುತೆರೆಗೆ ಪಾದಾರ್ಪಣೆ ಮಾಡಿದಾಗ, ರಾಹುಲ್ ಜೊತೆಗಿನ ತನ್ನ ಮದುವೆ, ಅವರು ಹೇಗೆ ಭೇಟಿಯಾದರು, ಕುಟುಂಬ ಯೋಜನೆ ಮತ್ತು ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು ಮಿಸೆಸ್ ರಾಹುಲ್ ಉತ್ತರಿಸಿದ್ದಾರೆ. 

312

ಅದೇ ಸಮಯದಲ್ಲಿ ರಾಹುಲ್ ತನ್ನ ಮೂರನೇ ಮದುವೆಯ ಬಗ್ಗೆ ಇಷ್ಟು ಸುಂದರ ವಧುವನ್ನು ಕಂಡರೆ ಯಾರಿಗೆ ಮದುವೆಯಾಗಲು ಇಷ್ಟವಾಗುವುದಿಲ್ಲ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.


 

412

ರೆಸ್ಟೊರೆಂಟ್‌ನಲ್ಲಿ ಇಬ್ಬರು ಮೊದಲ ಬಾರಿ  ಭೇಟಿಯಾಗಿದ್ದನ್ನು ರಾಹುಲ್ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ರಾಹುಲ್‌ ಜೊತೆ ಸ್ನೇಹಿತೆಯನ್ನು ಮ್ಯಾಚ್‌ ಮಾಡಲು ನಟಾಲಿಯಾ ಬಂದಿದ್ದರು ಎಂದು ಹೇಳಿದ್ದಾರೆ.

512

ಅಷ್ಟೇ ಅಲ್ಲ  ಒಂದಾನೊಂದು ಕಾಲದಲ್ಲಿ, ನಾನು ಅವನನ್ನು (ರಾಹುಲ್) ನನ್ನ ತಾಯಿಯೊಂದಿಗೆ ಮದುವೆ ಮಾಡಿಸಲು ಪ್ರಯತ್ನಿಸಿದೆ ಎಂಬ ವಿಷಯವನ್ನೂ ನಟಾಲಿಯಾ ಬಹಿರಂಗ ಪಡಿಸಿದ್ದಾರೆ.

612

ತನ್ನ ತಾಯಿ ತುಂಬಾ ಚಿಕ್ಕವಳು. ಅವಳು ನನಗೆ ನಾಲ್ಕು ವರ್ಷಕ್ಕಿಂತ ಹಿರಿಯಳು. ಆದ್ದರಿಂದ ನಟಾಲಿಯಾ ತನ್ನ ತಾಯಿಯೊಂದಿಗೆ ನನ್ನನ್ನು ಹೊಂದಿಸಲು ಯತ್ನಿಸಿದ್ದಳು. ಏಕೆಂದರೆ ವಯಸ್ಸಿನ ಅಂತರವೇನೂ ಅಷ್ಟಿರಲಿಲ್ಲ. ನಟಾಲಿಯಾ ಮತ್ತು ನನಗೆ 18 ವರ್ಷಗಳ ವಯಸ್ಸಿನ ಅಂತರವಿದೆ ಎಂದು ರಾಹುಲ್‌ ತಮ್ಮ ಸಂಬಂಧದ ಬಗ್ಗೆ ಮತ್ತಷ್ಟು ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. 

712

ನನ್ನ ತಾಯಿ ಹಾಟ್‌ ಆಗಿದ್ದಾರೆ ಎಂದು ನಟಾಲಿಯಾ ಹೇಳಿದಾಗ 'ನಟಾಲಿಯಾ ತಾಯಿಯ ವಯಸ್ಸಿನವಳಾಗಿದ್ದಾಗ ಅವಳು ಕೂಡ ಹಾಟ್ ಆಗಿ ಕಾಣಿಸುತ್ತಾಳೆ ಎಂದು ನಾನು ಇವಳನ್ನು ಮದುವೆಯಾಗುವ ಐಡಿಯಾ ಮಾಡಿದೆ,' ಎಂದು ರಾಹುಲ್ ಹೇಳಿದ್ದಾರೆ

812

'ಹಿಂದಿನ ಎರಡು ಮದುವೆಗಳು ತುಂಬಾ ಶಾರ್ಟ್ ಟೈಮ್‌ನದ್ದಾಗಿತ್ತು. ಅವು ಮದುವೆಗಿಂತ ಶಾರ್ಟ್ ಟರ್ಮ್ ರಿಲೇಶನ್ ಶಿಪ್‌ನಂತಿದ್ದ ಕಾರಣ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಕೆಲವೇ ತಿಂಗಳಲ್ಲಿ, ಅದನ್ನು ಮದುವೆ ಎಂದು ಕರೆಯಲು ಮನಸ್ಸು ಬಾರಲಿಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ, ಇದು ಮದುವೆಯಲ್ಲ. ಮದುವೆಯು ಆಳವಾದ ವಿಷಯವಾಗಿದೆ' ಎಂದು ನಟಾಲಿಯಾ ಹೇಳಿದ್ದಾರೆ

912

ರಾಹುಲ್ ಮಹಾಜನ್‌ ಈ ಹಿಂದೆ  ಶ್ವೇತಾ ಸಿಂಗ್ ಮತ್ತು ಡಿಂಪಿ ಗಂಗೂಲಿ ಅವರನ್ನು ಮದುವೆಯಾಗಿದ್ದರು. ಎರಡು ಮದುವೆ ಮತ್ತು ಡಿವೋರ್ಸ್‌ ನಂತರ ರಾಹುಲ್‌ ಮೂರನೇ ಬಾರಿ ರಷ್ಯಾದ ಮಾಡೆಲ್‌  ನಟಾಲಿಯಾ ಅವರನ್ನು 2018ರಲ್ಲಿ ಮದುವೆಯಾದರು.

1012

ನೀವು ನಾಲ್ಕನೇ ಬಾರಿಗೆ ಮದುವೆಯಾಗುತ್ತೀರಾ ಎಂದು ರಾಹುಲ್ ಅವರನ್ನು ಕೇಳಿದಾಗ 'ಹೌದು, ನಾನು ನಾಲ್ಕನೇ ಬಾರಿಗೆ ಮದುವೆಯಾಗುತ್ತೇನೆ ... ಮತ್ತೊಮ್ಮೆ ನಟಾಲಿಯಾ ಜೊತೆ. ಚಾನೆಲ್‌ ಅವರು ನಮಗೆ ಮದುವೆ ಮಾಡಿ ಕೊಡುತ್ತಾರೆ ಎಂದು ರಾಹುಲ್‌ ಉತ್ತರಿಸಿದ್ದಾರೆ

1112

ಫ್ಯಾಮಿಲಿ ಪ್ಲಾನಿಂಗ್‌ ಬಗ್ಗೆ ಕೇಳಿದ್ದಾಗ ನನಗೆ ಅಂತಹ ಸುಂದರ ಹೆಂಡತಿ ಇದ್ದಾಳೆ, ನಾವು 10-12 ಮಕ್ಕಳನ್ನು ಹೊಂದಬೇಕು ಎಂದು ರಾಹುಲ್ ಹೇಳಿದ್ದಾರೆ ಆದರೆ ನಟಾಲಿಯಾ ಖಂಡಿತವಾಗಿಯೂ, ನಾವು ದತ್ತು ತೆಗೆದುಕೊಳ್ಳಬಹುದು ಎಂದು ಪ್ರತಿಕ್ರಿಯಸಿದರು.

1212

ರಿಯಾಲಿಟಿ ಶೋ ಎಂಟರ್ಟೈನರ್ ಮತ್ತು ಮಾಜಿ ಪೈಲಟ್ ರಾಹುಲ್‌ ಮಹಾಜನ್‌ ಅವರು ಬಿಗ್ ಬಾಸ್ 2, ಬಿಗ್ ಬಾಸ್ ಹಲ್ಲಾ ಬೋಲ್ ಮತ್ತು ಬಿಗ್ ಬಾಸ್ 14 ರಂತಹ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು.

Read more Photos on
click me!

Recommended Stories