ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅಭಿಮಾನಿಗಳಿಗೆ ಭಾರೀ ಕಿರುಕುಳ!

Published : Apr 11, 2024, 05:16 PM ISTUpdated : Apr 11, 2024, 05:25 PM IST

ಬೆಂಗಳೂರು (ಏ.11): ಕನ್ನಡದಲ್ಲಿ 2017-18ನೇ ಸಾಲಿನಲ್ಲಿ ಅತಿಹೆಚ್ಚು  ಫೇಮಸ್ ಆಗಿದ್ದ ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅವರ 11 ವರ್ಷದಿಂದ ಬಳಸುತ್ತಿರುವ  ಫೇಸ್‌ಬುಕ್‌ ಐಡಿ ಹಾಗೂ ಇನ್‌ಸ್ಟಾಗ್ರಾಂ ಐಡಿಯನ್ನು ಸೈಬರ್ ವಂಚಕರು ಹ್ಯಾಕ್‌ ಮಾಡಿದ್ದಾರೆ. ಅಭಿಮಾನಿಗಳಿಗೆ ತಪ್ಪು ಸಂದೇಶ ಹೋಗುವಂತೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.  

PREV
16
ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅಭಿಮಾನಿಗಳಿಗೆ ಭಾರೀ ಕಿರುಕುಳ!

ರಾಧಾ ರಮಣ ಧಾರಾವಾಹಿಯ ಮೂಲಕ ಕರ್ನಾಟಕದ ಪ್ರತಿ ಮನೆ ಮನೆಗೂ ಮಾತಾದ ನಾಯಕ ಎಂದರೆ ಅದು ಸ್ಕಂದ ಅಶೋಕ್ ಅವರು. ಆದರೆ, ಎಲ್ಲರಿಗೂ ರಮಣ ಎಂತಲೇ ಪ್ರಸಿದ್ಧಿ ಆಗಿದ್ದರು.
 

26
Shwetha Skanda Ashok Radhe Shyama Radha ramana

ಒಂದೊಂದೇ ಹಂತ ದಾಟುತ್ತಾ ಬೆಳೆಯುತ್ತಿರುವ ಕನ್ನಡ ನಟ ಈಗ ತೆಲುಗು-ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟರಾಗಿದ್ದಾರೆ. ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 

36

ಸ್ಕಂದ ಅಶೋಕ್ ಕಳೆದ 11 ವರ್ಷಗಳಿಂದ ಬಳಸುತ್ತಿದ್ದ ಫೇಸ್‌ಬುಕ್‌ ಖಾತೆ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸುತ್ತಿದ್ದರು. ಆದರೆ, ಸೈಬರ್ ವಂಚಕರು ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.
 

46

ಸ್ಕಂದ ಅಶೋಕ್ ಅವರ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಅವರ ಲಕ್ಷಾಂತರ ಫಾಲೋವರ್ಸ್‌ಗಳಿಗೆ ಬೆಂಗಳೂರು, ಚೆನ್ನೈ ಹಾಗೂ ನೈಜೀರಿಯಾದಲ್ಲಿ ಕೆಲಸದ ಅವಕಾಶವಿದ್ದು, ನೋಂದಣಿ ಮಾಡಿಸಿಕೊಳ್ಳುವಂತೆ ಸಂದೇಶ ಹರಿಬಿಡುತ್ತಿದ್ದಾರೆ. 
 

56
ದಿ ವ್ಯಾಲಿ ಇಂಟರ್‌ ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂಖ್ಯೆ ಅಥವಾ ಲಿಂಕ್‌ ಅನ್ನು ಓಪನ್ ಮಾಡಿದವರಿಂದ ಹಣ ಪಾವತಿಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಸ್ಕಂದ ಅಶೋಕ್ ಅವರು ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

66

ಇನ್ನು ಸ್ಲಂದ ಅಶೋಕ್ ಅವರು ಕನ್ನಡ ಕಿರಿತೆರೆಯಿಂದ ಹೊರ ಭಾಷೆಗೆ ಕಾಲಿಟ್ಟ ನಂತರ ಅವರ ಅದೃಷ್ಟ ಕೈ ಹಿಡಿದಿದೆ. ಕೆಲವು ವರ್ಷಗಳ ಹಿಂದೆ ಮಾಲಿವುಡ್‌ನಲ್ಲಿ 'ಬೆಸ್ಟ್‌ ನ್ಯೂ ಫೇಸ್ ಆಫ್‌ ದಿ ಇಯರ್ ಅವಾರ್ಡ್' ಪಡೆದುಕೊಂಡಿದ್ದರು.

Read more Photos on
click me!

Recommended Stories