ಕೈಯಲ್ಲಿ ಧಮ್ಮು, ಕಣ್ಣಲ್ಲಿ ಬೆಂಕಿ ಕಿಡಿ… ಅಮೃತಾ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

First Published | Apr 10, 2024, 5:17 PM IST

ಕನ್ನಡ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಹೊಸದಾಗಿ ಫೋಟೋ ಶೂಟ್ ಮಾಡಿಸಿದ್ದು, ಆ ವಿಲನ್ ಲುಕ್ ನಲ್ಲೂ ಅದ್ಭುತವಾಗಿ ಕಾಣಿಸುತ್ತಿರುವ ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡ ಸಂಪಿಗೆ ಸೀರಿಯಲ್ ನಲ್ಲಿ ವಿಲನ್ ಸಾಧನಾ ಆಗಿ ಸಖತ್ ಆಗಿ ನಟಿಸುತ್ತಿರುವ ನಟಿ ಅಮೃತಾ ರಾಮಮೂರ್ತಿ (Amrutha Rammurthy), ಇದೀಗ ತಮ್ಮ ಹೊಸ ವಿಲನ್ ಲುಕ್ ಫೋಟೋ ಶೂಟ್ ಮೂಲಕ ಭಾರಿ ಸದ್ದು ಮಾಡ್ತಿದ್ದಾರೆ. 
 

ಇತ್ತೀಚೆಗೆ ನಟಿ ಅಮೃತಾ ರಾಮಮೂರ್ತಿಯವರು ಹೊಸ ಫೋಟೋ ಶೂಟ್ (Photoshoot) ಅನ್ನು, ರಾಕೇಶ್ ಫೋಟೋಪೀಡಿಯಾ ಅದ್ಭುತವಾಗಿ ಮಾಡಿದ್ದಾರೆ. ಫೋಟೋಗಳ ಸೀರಿಸ್‌ಗಳನ್ನು ಅವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕಣ್ಣಲ್ಲೇ ಮಾತನಾಡೋದು ಒಂದು ಕಲೆಯಾದ್ರೆ, ಅಮೃತಾ ರಾಮಮೂರ್ತಿ ಪಿಕಾಸೋ ಎಂದು ರಾಕೇಶ್ ಕ್ಯಾಪ್ಶನ್ ಕೂಡ ನೀಡಿದ್ದಾರೆ. 
 

Tap to resize

ಖಂಡಿತವಾಗಿಯೂ ಅಮೃತಾ ಅವರದ್ದು ಕಣ್ಣುಗಳನ್ನು ನೋಡುತ್ತಿದ್ದರೆ ಒಬ್ಬರನ್ನು ಕೊಂದೇ ಬಿಡುವುದೇನೋ ಎನಿಸುತ್ತದೆ, ಅದಕ್ಕಾಗಿಯೇ ಹೆಚ್ಚಾಗಿ ವಿಲನ್ ರೋಲ್ ಗಳೇ ಅಮೃತಾರನ್ನು ಅಪ್ಪಿಕೊಂಡು ಬರುತ್ತವೆ, ಇದೀಗ ಮಾಡಿಸಿದ ಫೋಟೋ ಶೂಟ್ ನಲ್ಲೂ ಅಮೃತಾ ಮಹಾ ವಿಲನ್ ನಂತೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. 
 

ಕಪ್ಪು ಬಣ್ಣದ ಕಾಟನ್ ಸೀರೆ, ಅದಕ್ಕೆ ಗ್ರೇ ಬಣ್ಣದ ಬ್ಲೌಸ್, ಮೆಟಲ್ ನಿಂದ ಮಾಡಿದ ಹೆವಿ ನೆಕ್ಲೆಸ್, ಹಾರ, ಇಯರಿಂಗ್ಸ್, ಬಳೆಗಳನ್ನು ಧರಿಸಿದ್ದು, ಕಣ್ಣಿಗೆ ಕಾಡಿಗೆ ಹಚ್ಚಿದ್ದು, ಕೈಯಲ್ಲಿ ಧಮ್ಮು, ಕಣ್ಣಲ್ಲಿ ಬೆಂಕಿಯ ಕಿಡಿ ಹತ್ತಿಸಿ, ಅಬ್ಬಬ್ಬಾ ಎನ್ನುವಂತೆ ಫೋಸ್ ಕೊಟ್ಟಿದ್ದಾರೆ. 
 

ಬೀಡಿ ಎಳೆದು ಮುಖದ ತುಂಬಾ ಹೊಗೆ ಬಿಡುವಂತೆ, ಅಮಲು ಏರಿ ಕಣ್ಣುಗಳೇ ತಿರುಗಿದಂತೆ, ಕೈಯಲ್ಲಿ ಕೋಲು ಹಿಡಿದು ಭಾರಿ ಖಳನಟಿಯಂತೆ ಹೀಗೆ ಒಂದೋ ಎರಡೋ, ಹಲವು ಫೋಟೋ ಶೂಟ್ ಮಾಡಿಸಿದ್ದು, ಅಮೃತಾ ಕಿಲ್ಲರ್ ಲುಕ್ ಗೆ ಅಭಿಮಾನಿಗಳು ಫಿದಾ ಆಗ್ಬಿಟ್ಟಿದ್ದಾರೆ. 
 

ಮೇಡಂ ನೀವು ಬೆಂಕಿ ಥರಾ ಕಾಣ್ತಿದೀರಿ, ನಟ ಭಯಂಕರಿ, ಚಿಂದಿ ಚಿತ್ರಾನ್ನ ಫುಲ್ ಫೈರ್, ವಿಲನ್ ರೋಲ್ ಗೆ (villain role) ಪರ್ಫೆಕ್ಟ್ ಆಯ್ಕೆ, ಆ ಕಣ್ಣುಗಳು ಬೆಂಕಿಯುಂಡೆ ಉಗುಳುತ್ತಿವೆ, ವಿಭಿನ್ನ ಫೋಟೋ ಶೂಟ್ ಅಂದ್ರೆ ಹೀಗಿರಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 
 

ಅಮೃತಾ ಕಾಮೆಂಟ್ ಬಾಕ್ಸ್ ಪೂರ್ತಿಯಾಗಿ ಫೈರ್ ಇಮೋಜಿಗಳಿಂದ ತುಂಬಿ ಹೋಗಿದೆ. ಅಮೃತಾ ಕಿಲ್ಲಿಂಗ್ ಎಕ್ಸ್ ಪ್ರೆಶನ್ ನೋಡಿ, ಹಲವು ಜನ ಹುಚ್ಚರಾಗ್ಬಿಟ್ಟಿದ್ದಾರೆ. ಅಮೃತಾ ಪತಿ ರಘು, ನಟಿ ಅಂಕಿತಾ ಅಮರ್, ನೇಹಾ ಗೌಡ ಸಹ ಕಾಮೇಂಟ್ ಮಾಡಿ ಇದು ಅದ್ಭುತ ಫೋಟೋ ಶೂಟ್ ಅಂದ್ರೆ ಎಂದು ಹೇಳಿದ್ದಾರೆ. 
 

ಮಿ. ಆಂಡ್ ಮಿಸಸ್ ರಂಗೇಗೌಡ, ಕುಲವಧು, ಕಸ್ತೂರಿ ನಿವಾಸ, ಮೇಘ ಮಯೂರಿ ಸೀರಿಯಲ್ ಗಳಲ್ಲಿ ಮಿಂಚಿದ ಅಮೃತಾ ಸದ್ಯ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ಸುಮನಾಳನ್ನು ಕೊನೆಯಾಗಿಸಲು ಕಾಯುತ್ತಿರುವ ವಿಲನ್ ಸಾಧನಾ ಆಗಿ ಮಿಂಚುತ್ತಿದ್ದಾರೆ. 
 

Latest Videos

click me!