ಜೈಲಿನಿಂದ ಹೊರಬಂದು ಯುಗಾದಿ ಆಚರಿಸಿದ ಸೋನು ಗೌಡ: ಅಮ್ಮನ ಸೀರೆಯುಟ್ಟು ಮಿಂಚಿದ ರೀಲ್ಸ್ ರಾಣಿ!

First Published | Apr 10, 2024, 4:21 PM IST

ಬಿಗ್ ಬಾಸ್ ಮನೆಯಲ್ಲಿ ಸುದ್ದಿಯಾಗಿದ್ದ ಸೋನು ಶ್ರೀನಿವಾಸ್‌ ಗೌಡ, ಇದೀಗ ಜಾಮೀನು ಷರತ್ತು ಪೂರೈಸಿದ ನಂತರ ಜೈಲಿನಿಂದ ಬಿಡುಗಡೆಯಾದ ಬಳಿಕ ಸಂತೋಷವಾಗಿ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.
 

ಬಿಗ್ ಬಾಸ್ ಒಟಿಟಿ​ ಸ್ಪರ್ಧಿಯಾಗಿದ್ದ ಸೋನು ಗೌಡ ಜೈಲಿನಿಂದ ಹೊರಬಂದ ಮೇಲೆ ತುಂಬಾನೇ ಸರಳವಾಗಿ ಸೀರೆಯುಟ್ಟಕೊಂಡು ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಈ ನಟಿ ಹಬ್ಬದ ದಿನದಂದು ಫೋಟೋಶೂಟ್‌ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ನಟಿ ಸೋನು ಶ್ರೀನಿವಾಸ್ ಗೌಡ ಪಿಂಕ್‌ ಆರೆಂಜ್‌ ಮಿಶ್ರಿತ  ಸೀರೆಯನ್ನು ಹಾಕಿಕೊಂಡು ಅದಕ್ಕೆ ಗುಲಾಬಿ ಬ್ಲೌಸ್‌ ಧರಿಸಿದ್ದರು. ಹಾಗೆಯೇ ಹೇರ್ ಫ್ರೀಯಾಗಿ ಬಿಟ್ಟುಕೊಂಡು ನೆಕ್ಲೆಸ್ ಧರಿಸಿ ಮತ್ತು ಝುಮುಕಿ ಕೂಡ ಹಾಕಿಕೊಂಡಿದ್ದರು. ಹಣೆಗೆ ಸಿಂಪಲ್‌ ಆಗಿ ಸಣ್ಣ ಬೊಟ್ಟು ಇಟ್ಟುಕೊಂಡಿದ್ದರು.

Tap to resize

ನಟಿ ಸೋನು ಗೌಡ ಯುಗಾದಿ ಹಬ್ಬದಂದು ಸೀರೆಯಲ್ಲಿ ಪೋಟೋಶೂಟ್‌ ಮಾಡಿಸಿ ಅದನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಕ್ಯಾಪ್ಶನ್‌ನಲ್ಲಿ ಯುಗಾದಿ ಹಬ್ಬದ ಶುಭಾಷಯವನ್ನು ತಿಳಿಸಿದ್ದಾರೆ. ಹಾಗೆಯೇ ಈಕೆ ಉಟ್ಟ ಸೀರೆ ತನ್ನ ಅಮ್ಮನದು ಎಂದು ಬರೆದುಕೊಂಡಿದ್ದಾರೆ.

ನಟಿ ಸೋನು ಗೌಡ ಫೋಟೋಸ್‌ ವೈರಲ್‌ ಆಗಿದ್ದು, ಈ ಪೋಸ್ಟ್‌ಗೆ 30  ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಕಾಮೆಂಟ್‌ ಬಾಕ್ಸ್‌ನಲ್ಲಿ ಕೆಲವು ನೆಟ್ಟಿಗರು ರೆಡ್ ಹಾರ್ಟ್ ಹಾಗೂ ಫೈರ್ ಎಮೋಜಿಗಳನ್ನು ಕಾಮೆಂಟಿಸಿದ್ದಾರೆ.

ನಟಿ ಸೋನು ಗೌಡಗೆ ನೆಟ್ಟಿಗರು ಕಮೆಂಟ್‌ ವಿಭಾಗದಲ್ಲಿ ʻಹ್ಯಾಪಿ ಯುಗಾದಿ ಹಬ್ಬದ ಶುಭಾಶಯಗಳು ಸೋನು … ಬೇವು ಬೆಲ್ಲ ತಿಂದು ಸಿಹಿಯಾಗಿ ಇರೋಣʼ ಎಂದು ಬರೆದಿದ್ದಾರೆ. ಮತ್ತೊಬ್ಬರು ʻಸೋನು ಗೌಡ ಉಟ್ಟಿದ್ದ ಸೀರೆ ಇಷ್ಟವಾಗಿದೆ. ನಿಮ್ಮ ಸೀರೆ ಲುಕ್ ಸೂಪರ್ ಆಗಿದೆ ʼ ಎಂದು ಹೊಗಳಿದ್ದಾರೆ.

ಸೋನು ಗೌಡ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ.

ಟಿಕ್ ಟಾಕ್ , ರೀಲ್ಸ್ ಮೂಲಕ ಫೇಮಸ್ ಆಗಿರೋ ಸೋನು ಶ್ರೀನಿವಾಸ್ ಗೌಡ, ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದರು.

ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಬೇಕಾಯ್ತು. 11 ದಿನಗಳ ನಂತರ ಈಕೆ ಸೆರೆಮನೆ ವಾಸ ಮುಕ್ತಾಯವಾಗಿ ತಮ್ಮ ಮನೆಗೆ ವಾಪಸ್ಸು ಬಂದಿದ್ದಾರೆ.

Latest Videos

click me!