ಧಾರಾವಾಹಿಯಲ್ಲಿ ಅಮ್ಮನ ಪಾತ್ರ, ರಿಯಲ್ ಲೈಫಲ್ಲಿ ಫುಲ್ ಸ್ಟೈಲಿಷ್!

Suvarna News   | Asianet News
Published : Feb 27, 2022, 04:38 PM IST

ಕಿರುತೆರೆಯಲ್ಲಿ ಹೆಚ್ಚಾಗಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ನಟಿಯರು ರಿಯಲ್ ಲೈಫಲ್ಲಿ ಎಷ್ಟು ಯಂಗ್ ಆ್ಯಂಡ್ ಸ್ಟೈಲಿಷ್ ಗೊತ್ತಾ? ಇವ್ರು ನೋಡಿ ರಿಯಲ್ ಮಮ್ಮಿ ದಿವಾ.....  

PREV
15
ಧಾರಾವಾಹಿಯಲ್ಲಿ ಅಮ್ಮನ ಪಾತ್ರ, ರಿಯಲ್ ಲೈಫಲ್ಲಿ ಫುಲ್ ಸ್ಟೈಲಿಷ್!

ಸ್ವಾತಿ ಹೆಚ್‌.ವಿ: ಕನ್ಯಾಕುಮಾರಿ ಧಾರಾವಾಹಿಯಲ್ಲಿ ಇಬ್ಬರು ಮಕ್ಕಳ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸ್ವಾತಿ ರಿಯಲ್‌ ಲೈಫ್‌ನಲ್ಲಿ ಕನ್ಯೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹಾಟ್‌ ಫೋಟೋಗಳು ಹುಡುಗರ ನಿದ್ದೆಗೆಡಿಸುತ್ತವೆ. 

25

ವಾಣಿಶ್ರೀ: ಕನ್ನಡ ಸಿನಿಮಾರಂಗದಲ್ಲಿ ಮಿಂಚಿರುವ ವಾಣಿಶ್ರೀ ಕಿರುತೆರೆಯಲ್ಲಿ ಹೆಚ್ಚಾಗಿ ತಾಯಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವಿಭಿನ್ನ ಶೈಲಿಯ ಸೀರೆಗಳನ್ನು ಧರಿಸುವ ವಾಣಿ ಇನ್‌ಸ್ಟಾಗ್ರಾಂನಲ್ಲಿ ಮಗಳನ್ನು ಮೀರಿಸುವಷ್ಟು ಫಾಲೋವರ್ಸ್ ಹೊಂದಿದ್ದಾರೆ. ಹಾಗೂ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

35

ಯಮುನಾ ಶ್ರೀನಿಧಿ: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಚರಣ್‌ ತಾಯಿಯಾಗಿ ಬಡ ಕುಟುಂಬದ ಜೀವನ ಹೇಗಿದೆ ಎಂದು ತೋರಿಸಿಕೊಡುವ ಯಮುನಾ ರಿಯಲ್‌ ಲೈಫ್‌ನಲ್ಲಿ ಸಖತ್ ಮಾರ್ಡನ್. ಯಾವ ನಟಿಗೂ ಕಡಿಮೆ ಇರೋಲ್ಲ, ಇವರು ಶೇರ್ ಮಾಡುವ ಫೋಟೋಗಳು. ಸಮಾಜಮುಖಿ ಕಾರ್ಯಗಳಲ್ಲೂ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. 

45

ಜೋತಿ ಕಿರಣ್: ಸಿಲ್ಲಿ ಲಿಲ್ಲಿಯಲ್ಲಿ ಗಮನ ಸೆಳೆದ ಜೋತಿ ತಾಯಿ ಪಾತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಮಗಳ ಆಗಮನದ ನಂತರ ದೇಹದ ತೂಕ ಹೆಚ್ಚಾದಾಗ ತುಂಬಾನೇ ಸರಳವಾಗಿ ಡಯಟ್ ಮತ್ತು ವರ್ಕೌಟ್ ಮಾಡಿ 15-20 ಕೆಜಿ ತೂಕ ಇಳಿಸಿಕೊಂಡು, ಈಗ ಇನ್ನೂ ಯಂಗ್ ಆಗಿ ಮಿಂಚುತ್ತಿದ್ದಾರೆ. 

55

ಹರಿಣಿ ಶ್ರೀಕಾಂತ್: ಮಿಥುನರಾಶಿ ಧಾರಾವಾಹಿಯಲ್ಲಿ ಇಬ್ಬರು ಗಂಡು ಮಕ್ಕಳ ತಾಯಿ ಆಗಿರುವ ಹರಿಣಿ ಸಾಕಷ್ಟು ಸಿನಿಮಾಗಳು ಮತ್ತು ಧಾರಾವಾಹಿಯಲ್ಲಿ ನಟಿಸಿದ್ದಾರೆ. ತುಂಬಾನೇ ಚಾರ್ಮಿಂಗ್ ಆಗಿರುವ ಹರಿಣಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories