ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮ (Radhe Shyam) ಧಾರಾವಾಹಿಯಿಂದ ನಟಿ ಅಶ್ವಿನಿ ಗೌಡ ಹೊರ ಬಂದು, ವೀಕ್ಷಕರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಪ್ರತಿಮಾ ದೇವಿ ಪಾತ್ರದಲ್ಲಿ ಖಡಕ್ ಮಹಿಳೆಯಾಗಿ ಅಶ್ವಿನಿ ಗೌಡ (Ashwini Gowda) ಅಭಿನಯಿಸುತ್ತಿದ್ದರು. ಧಾರಾವಾಹಿಗೆ ಗುಡ್ ಬೈ ಹೇಳುತ್ತಿರುವ ವಿಚಾರವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲವಂತೆ.
ಕೆಲವು ಮೂಲಗಳ ಪ್ರಕಾರ ಈ ನಿರ್ಧಾರಕ್ಕೆ ವೈಯಕ್ತಿಕ ಕಾರಣ ಎನ್ನಲಾಗಿದೆ. ಆದರೆ ಇನ್‌ಸ್ಟಾಗ್ರಾಂನಲ್ಲಿ (Instagram) ವಿಮಾನ ನಿಲ್ದಾಣದಲ್ಲಿ ನಿಂತ್ಕೊಂಡು ಹೈದರಾಬಾದ್ ಕರೆಯುತ್ತಿದೆ. ಹೊಸ ವೆಂಚ್ಯುರ್ ಶುರು ಎಂದು, ಬರೆದುಕೊಂಡಿದ್ದಾರೆ.
ಅಶ್ವಿನಿ ಪಾತ್ರಕ್ಕೆ ಇದೀಗ ಅಭಿನಯಾ ಎಂಟ್ರಿ ಕೊಟ್ಟಿದ್ದಾರೆ. ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಅಭಿನಯ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. ರಾಧೆ ಶ್ಯಾಮ ತಂಡದ ಜೊತೆಯೂ ಅಭಿನಯ ಈಗಾಗಲೇ ಚಿತ್ರೀಕರಣ ಶುರು ಮಾಡಿದ್ದಾರೆ.
9 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಶ್ವಿನಿ ಗೌಡ ಸಖತ್ ಸ್ಟೈಲಿಷ್ ಆಗಿರುವ ಫೋಟೋಗಳನ್ನು ಹಂಚಿಕೊಂಡು, ಇನ್ನೂ ಯಂಗ್ ಆಗಿ ಮಿಂಚುತ್ತಿದ್ದಾರೆ.
ರಾಧೆ ಶ್ಯಾಮ ಧಾರಾವಾಹಿಯಲ್ಲಿ ರಾಧೆ ಸುತ್ತ ಸುತ್ತುವ ಕಥೆ ಇದು. ನೇರ ನುಡಿಯ ಬುದ್ಧಿವಂತ ಹುಡುಗಿ ರಾಧೆ. ಊರಲ್ಲಿ ಏನೇ ತಪ್ಪಾದರೂ ಸರಿ ಮಾಡಲು ಮುಂದಾಗಿರುತ್ತಾಳೆ.ಈಗಾಗಲೇ ಈ ಸೀರಿಯಲ್ 100 ಸಂಚಿಕೆ ಪೂರೈಸಿದೆ.