Modeling: ಪ್ರತಿಷ್ಠಿತ ಅವಾರ್ಡ್‌ ಪಡೆದ ಕಿರುತೆರೆ ನಟ, ನಟಿಯರಿವರು!

First Published | Feb 20, 2022, 4:20 PM IST

ಸೋಷಿಯಲ್ ಮೀಡಿಯಾ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದವರೂ ಇದ್ದಾರೆ. ಆದರೆ ಕನ್ನಡ ಕಿರುತೆರೆಯಲ್ಲಿ ಕಾಲಿಟ್ಟ ಅನೇಕ ನಟ, ನಟಿಯರು ಮಾಡಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.
 

ಅರ್ಚನಾ: 2013ರಲ್ಲಿ ಮಿಸ್ ಕರ್ನಾಟಕ ಪ್ರಶಸ್ತಿ ಪಡೆದ ನಟಿ ಅರ್ಚನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದ ಜರ್ನಿಯಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಅಭಿನವ್ ವಿಶ್ವನಾಥನ್: ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯನಾಗಿ ಮಿಂಚುತ್ತಿರುವ ನಟ ಅಭಿನವ್ 2019ರಲ್ಲಿ ಮಿ. ಇಂಡಿಯಾ ಎರಡನೇ ಸ್ಥಾನ ಪ್ರಶಸ್ತಿ ಪಡೆದುಕೊಂಡು, ಮಾಡಲಿಂಗ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ.

Tap to resize

ಸ್ವಾತಿ ಹೆಚ್‌.ವಿ.:  ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಸ್ವಾತಿ 2009ರಲ್ಲಿ ಮಿಸ್ ಕರ್ನಾಟಕ ಅವಾರ್ಡ್ ಪಡೆದುಕೊಂಡಿದ್ದಾರೆ. 

ರಮೋಲಾ: ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ರಮೋಲಾ ಮಾಡಲಿಂಗ್‌ನಲ್ಲಿ ಹೆಸರು ಮಾಡಿ ಅನೇಕ ಪ್ರಶಸ್ತಿ ಪಡೆದುಕೊಂಡು, ಸೋಷಿಯಲ್ ಮೀಡಿಯಾ ಮೂಲಕ ಧಾರಾವಾಹಿಗೆ ಆಯ್ಕೆ ಆಗಿದ್ದರು.

ದಿಲೀಪ್ ಶೆಟ್ಟಿ: ಇಂಟರ್‌ನ್ಯಾಷನಲ್ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಮಿಸ್ಟರ್ ದುಬೈ 2015 ಪ್ರಶಸ್ತಿ ಪಡೆದುಕೊಂಡಿರುವ ನಟ ದಿಲೀಪ್‌ ಶೆಟ್ಟಿ ಲಕ್ಷ್ಮಿ ಬಾರಮ್ಮ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಶರಣ್ಯಾ ಶೆಟ್ಟಿ: ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸಿರುವ ಶರಣ್ಯಾ ಕಾಲೇನ್‌ನಲ್ಲಿ ಕಲ್ಚರಲ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕ Ramp showಗಳನ್ನು ನೋಡಿ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

Latest Videos

click me!