Bigg Boss Kannada: ಸೀಸನ್ 9 ಓಟಿಟಿಯಲ್ಲಿ ಬರಲ್ಲ ಎಂದ ವಾಹಿನಿ ಮುಖ್ಯಸ್ಥರು!

First Published | Dec 5, 2021, 11:56 AM IST

ಬಿಗ್ ಬಾಸ್ ಹೊಸ ಸೀಸನ್ ಓಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹರಿದಾಡುತ್ತಿರುವ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ ವಾಹಿನಿ ಮುಖ್ಯಸ್ಥರು. ಕಿಚ್ಚನ ಟಿವಿಯಲ್ಲಿ ನೋಡಿ.... 
 

ಶೀಘ್ರದಲ್ಲಿ ಬಿಗ್ ಬಾಸ್ ಸೀಸನ್ 9 ಕನ್ನಡ ಶುರುವಾಗಲಿದ್ದು, ಓಟಿಟಿಯಲ್ಲಿ ಪ್ರಸಾರವಾಗುತ್ತದೆ ಎಂದು ಹೇಳಲಾಗಿತ್ತು. ಪ್ರಸಾರದ ಬಗ್ಗೆ ವಾಹಿನಿ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. 

'ಕನ್ನಡ ಮಾರ್ಕೆಟ್‌ ಅಷ್ಟು ದೊಡ್ಡದಲ್ಲ. ಹೀಗಾಗಿ ನಾವು ಚಾನೆಲ್‌ನಲ್ಲಿ ಪ್ರಸಾರ ಮಾಡಬೇಕು ಅಂದುಕೊಂಡೆವು. ಮುಂದಿನ ಸೀಸನ್‌ನ ನಾವು ಪ್ಲಾನ್ ಮಾಡಬೇಕಿದೆ' ಎಂದು ಖಾಸಗಿ ಸಂದರ್ಶನದಲ್ಲಿ ಪರಮೇಶ್ವರ ಗುಂಡ್ಕಲ್ ಅವರು ಮಾತನಾಡಿದ್ದಾರೆ. 

Tap to resize

'ನಾವು 9ನೇ ಸೀಸನ್ ಪ್ಲಾನ್ ಮಾಡಬೇಕಿದೆ, ಮೂರನೇ ಅಲೆ ಪ್ರಮಾಣ ಎಷ್ಟಿರುತ್ತದೆ ಗೊತ್ತಿಲ್ಲ. ಕಳೆದ ವರ್ಷ ತರ ಶೋನ ಮತ್ತೆ ಮಧ್ಯದಲ್ಲಿ ನಿಲ್ಲಿಸುವುದಕ್ಕೆ ಆಗುವುದಿಲ್ಲ' 

'ಒಂದು ಶೋಗೆ ತಯಾರಿ ಮಾಡುವುದಕ್ಕೆ ನಾನು 100 ದಿನಗಳ ತಯಾರಿ ಮಾಡಿಕೊಳ್ಳಬೇಕಿದೆ. ನಮ್ಮ ತಂಡ ರೆಡಿಯಾಗಿದೆ ಹೀಗಾಗಿ ತಯಾರಿ ಬಗ್ಗೆ ನಮ್ಮ ತಂಡಕ್ಕೆ ಚಿಂತೆ ಇಲ್ಲ' 

ಬಿಗ್ ಬಾಸ್ ಕನ್ನಡ ಪ್ರತಿ ಸೀಸನ್‌ಗಳನ್ನು ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರೆ. ಪ್ರತಿ ವೀಕೆಂಡ್ ಕಾರ್ಯಕ್ರಮದಲ್ಲೂ ಸುದೀಪ್ ಧರಿಸುವ ಔಟ್‌ಫಿಟ್‌ ವೈರಲ್ ಆಗುತ್ತದೆ. 

ಒಂದು ಸೀಸನ್‌ನಲ್ಲಿ ಸೆಲೆಬ್ರಿಟಿಗಳು ಇದ್ದರೆ ಮತ್ತೊಂದು ಸೀಸನ್‌ನಲ್ಲಿ ಜನ ಸಾಮಾನ್ಯರು ಇರುತ್ತಾರೆ. ಈವರೆಗೂ ಕೇವಲ ಎರಡು ಸೀಸನ್‌ನಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿ ಒಟ್ಟಿಗೆ ಇದ್ದಿದ್ದು.

Latest Videos

click me!