ಸುಷ್ಮಾ ಅವರದು ಕನ್ನಡ ಕಿರುತೆರೆಗೆ ಅತ್ಯಂತ ಪರಿಚಿತ ಹೆಸರು .ಸ್ವಚ್ಛ ಕನ್ನಡದ ಮಾತಿನ ಶೈಲಿಯೇ ಇವರ ನಿರೂಪಣೆಯ ಗೆಲುವು.ಅಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಇವರು ‘ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಭಾವನಾ ಪಾತ್ರಧಾರಿಯಾಗಿ ಗಮನ ಸೆಳೆದು ಆ ಧಾರಾವಾಹಿಯ ಮೂಲಕ ಮನೆ ಮಾತಷ್ಟೇ ಅಲ್ಲ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು.