Exclusive: ಅರಿಷಿಣ ಶಾಸ್ತ್ರದಲ್ಲಿ ಮಿಂದೆದ್ದ Anchor Anushree, ರೋಶನ್‌ ಫೋಟೋಗಳಿವು!

Published : Aug 27, 2025, 11:15 PM ISTUpdated : Aug 28, 2025, 10:01 AM IST

Anchor Anushree Marriage: ತುಟಿಯಂಚಲ್ಲಿ ನಗು ಇಟ್ಟುಕೊಂಡು, ಪಟ ಪಟ ಅಂತ ಮಾತನಾಡುತ್ತ, ವೇದಿಕೆ ಮೇಲಿದ್ದವರಿಗೆ ಧೈರ್ಯವನ್ನು ತುಂಬಿ, ಆಗಾಗ ಕಾಲೆಳೆದು ಲವಲವಿಕೆಯಿಂದ ನಿರೂಪಣೆ ಮಾಡುವ ಕನ್ನಡದ ನಂ 1 ನಿರೂಪಕಿ ಅನುಶ್ರೀ ಅವರಿಗೆ ಈಗ ಮದುವೆ ಸಂಭ್ರಮ.  

PREV
15

ಇಷ್ಟು ವರ್ಷವಾದರೂ ಅನುಶ್ರೀ ( Anchor Anushree Marriage ) ಯಾಕೆ ಮದುವೆ ಆಗಿಲ್ಲ? ಯಾವಾಗ ಮದುವೆ ಆಗ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಈಗ ಅನುಶ್ರೀ ಅವರು ರೋಶನ್‌ ಎನ್ನುವವರ ಜೊತೆ ಮದುವೆ ಆಗುತ್ತಿದ್ದಾರೆ. ಗೌರಿ ಗಣೇಶ ಚತುರ್ಥಿಯಂದು ಅನುಶ್ರೀ ಹಾಗೂ ರೋಶನ್‌ ಅವರ ಅರಿಷಿಣ ಶಾಸ್ತ್ರದ ಕಾರ್ಯಕ್ರಮ ನಡೆದಿದೆ. ಸಂಗೀತ್‌, ಮೆಹೆಂದಿ ಎಲ್ಲವನ್ನು ಬಹಳ ಖಾಸಗಿಯಾಗಿ ಮಾಡಿಕೊಳ್ಳಲಾಗಿದೆ.

25

ಅಂದಹಾಗೆ 37 ವರ್ಷದ ಅನುಶ್ರೀ ಅವರು ಉದ್ಯಮಿ ರೋಶನ್‌ ಎನ್ನುವವರನ್ನು ಮದುವೆ ಆಗುತ್ತಿದ್ದಾರೆ. ಇವರು ಡಾ ರಾಜ್‌ಕುಮಾರ್‌ ಕುಟುಂಬದ ಸಂಬಂಧಿಕರು ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ಅನುಶ್ರೀ ಅವರೇ ಮಾಹಿತಿ ಕೊಡಬೇಕಿದೆ.

35

ಅನುಶ್ರೀ ಅವರು ಉದ್ಯಮಿ ರೋಶನ್‌ ಎನ್ನುವವರನ್ನು ಮದುವೆ ಆಗುತ್ತಿದ್ದಾರೆ. ಇವರು ಡಾ ರಾಜ್‌ಕುಮಾರ್‌ ಕುಟುಂಬದ ಸಂಬಂಧಿಕರು ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ಅನುಶ್ರೀ ಅವರೇ ಮಾಹಿತಿ ಕೊಡಬೇಕಿದೆ.

ಒಂದು ತಿಂಗಳ ಹಿಂದೆ ಅನುಶ್ರೀ ಹಾಗೂ ರೋಶನ್‌ ಮದುವೆ ಆಗುವ ವಿಷಯ ರಿವೀಲ್‌ ಆಗಿತ್ತು. ಆದರೆ ಈ ಬಗ್ಗೆ ಅವರು ರಿಯಾಕ್ಷನ್‌ ಕೊಟ್ಟಿರಲಿಲ್ಲ. ಇನ್ನು ‘ಮಹಾನಟಿ ಸೀಸನ್‌ 2’ ಶೋನಲ್ಲಿ ನಿರ್ದೇಶಕ ತರುಣ್‌ ಸುಧೀರ್‌, ಸೋನಲ್‌ ಮೊಂಥೆರೋ ಕೂಡ ಸಾಕಷ್ಟು ಬಾರಿ ಅನುಶ್ರೀಗೆ ಶೀಘ್ರದಲ್ಲಿ ಮದುವೆ ಆಗಲಿದೆ ಎಂದು ಸುಳಿವು ಕೊಟ್ಟಿದ್ದರು.

45

ಅನುಶ್ರೀ ಅವರು ಕಳೆದ ವರ್ಷದಿಂದಲೇ ಮುಂದಿನ ವರ್ಷ ಮದುವೆ ಆಗ್ತೀನಿ ಅಂತ ಹೇಳಿದ್ದರು. ಈ ವರ್ಷ ಕೂಡ ಇದೇ ವರ್ಷ ಆಗ್ತೀನಿ ಅಂತ ಹೇಳಿದ್ದರು. ಇವರ ಮದುವೆ ಫಿಕ್ಸ್‌ ಆಗಿ ಒಂದು ವರ್ಷ ಆಗಿದೆ ಎಂದು ಹೇಳುವುದುಂಟು. ಈ ಬಗ್ಗೆ ಅನುಶ್ರೀ ಮಾಹಿತಿ ಕೊಡಬೇಕಿದೆ.

55

ಅಂದಹಾಗೆ ಬೆಂಗಳೂರಿನಲ್ಲಿ ಆಗಸ್ಟ್‌ 28ರಂದು ಅನುಶ್ರೀ ಹಾಗೂ ರೋಶನ್‌ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.

Read more Photos on
click me!

Recommended Stories