ಮಿಂಚಾಗಿ ನೀನು ಬರಲು… ಎನ್ನುತ್ತಾ ಬೆಸ್ಟ್ ಫ್ರೆಂಡ್ ಆಗಿರೋ ಗಂಡನಿಗೆ ಹೀಗೆ ವಿಶ್ ಮಾಡಿದ್ರು ವೈಷ್ಣವಿ ಗೌಡ

Published : Aug 26, 2025, 08:12 PM IST

ನಟಿ ವೈಷ್ಣವಿ ಗೌಡ ಅವರ ಪತಿ ಅನುಕೂಲ್ ಮಿಶ್ರಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಬ್ಬರ ಸುಂದರವಾದ ಫೋಟೊಗಳನ್ನು ಶೇರ್ ಮಾಡಿ ಮುದ್ದಾಗಿ ವಿಶ್ ಮಾಡಿದ್ದಾರೆ.

PREV
17

ಸೀತಾ ರಾಮ ಧಾರಾವಾಹಿ(Seetha Raama Serial) ನಟಿ ವೈಷ್ಣವಿ ಗೌಡ ಅವರ ಪತಿ ಅನುಕೂಲ್ ಮಿಶ್ರಾ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ಮುದ್ದಾದ ವಿಡಿಯೋ ಶೇರ್ ಮಾಡಿ ಶುಭ ಕೋರಿದ್ದಾರೆ.

27

ಅಗ್ನಿ ಸಾಕ್ಷಿ ಮತ್ತು ಸೀತಾ ರಾಮ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ವೈಷ್ಣವಿ ಗೌಡ (Vaishnavi Gowda) ಏಪ್ರಿಲ್ 14ರಂದು ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿರುವ ಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

37

ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆ ವೈಷ್ಣವಿ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಮನಾಲಿ, ಕಾಶ್ಮೀರ್ ಹನಿಮೂನ್ ಗೂ ಹೋಗಿ ಬಂದಿದ್ದಾರೆ ಬೆಡಗಿ.

47

ಇದೀಗ ಗಂಡನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುದ್ದಾದ ರೀಲ್ಸ್ ಶೇರ್ ಮಾಡಿರುವ ವೈಷ್ಣವಿ ಗೌಡ, ಹ್ಯಾಪಿ ಬರ್ತ್ ಡೇ ಬೆಸ್ಟ್ ಫ್ರೆಂಡ್, ನನ್ನ ಪತಿ, ಯಾವಾಗಲೂ ನಗುತಿರಿ ಎಂದು ಬರೆದುಕೊಂಡಿದ್ದಾರೆ. (Happy birthday my best friend, My husband A keep smiling)

57

ಮದುವೆಯಾದ ಬಳಿಕ ಇದೇ ಮೊದಲ ಬಾರಿ ಗಂಡನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದು ತುಂಬಾನೆ ಸ್ಪೆಷಲ್ ಆಗಿದೆ. ತಮ್ಮ ರೀಲ್ಸ್ ವಿಡೀಯೋಗೆ ನಟಿ ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಎನ್ನುವ ಹಾಡನ್ನು ಸಹ ಹಾಕಿದ್ದು, ಆ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

67

ಮದುವೆ ಬಳಿಕ ವೈಷ್ಣವಿ ನಟನೆಯಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿದ್ದು, ಫೋಟೊಗಳು, ರೀಲ್ಸ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಯೂಟ್ಯೂಬ್ ವಿಡೀಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

77

ಇತ್ತೀಚೆಗಷ್ಟೇ ನಟಿ ತಮ್ಮ ಪತಿ ಜೊತೆ ಡ್ಯಾನ್ಸ್ ಮಾಡಿದ ರೀಲ್ಸ್ ಹಂಚಿಕೊಂಡಿದ್ದರು. ಕನ್ನಡದ ಸದ್ಯದ ಜನಪ್ರಿಯ ಹಾಡುಗಳಲ್ಲಿ ಒಂದಾದ ಬಂದರೋ ಬಂದರು ಭಾವ ಬಂದರು ಹಾಡಿಗೆ ತುಂಬಾ ದಿನಗಳ ಬಳಿಕ ಜೊತೆ ಸಿಕ್ಕ ಪತಿ ಜೊತೆ ರೀಲ್ಸ್ ಮಾಡಿದ್ದರು. ಇದನ್ನು ಜನ ಮೆಚ್ಚಿಕೊಂಡಿದ್ದರು.

Read more Photos on
click me!

Recommended Stories