ರಾತ್ರಿ ಓನರ್‌ ಜೊತೆ ಬಂದ್ರೆ ಎಕ್ಸ್‌ಟ್ರಾ ದುಡ್ಡು ಕೊಡ್ತಾರೆ; ಹೋಟೆಲ್‌ನಿಂದ ಓಡಿ ಬಂದು ಕಣ್ಣೀರಿಟ್ಟ ಅನುಪಮಾ ಗೌಡ

First Published | May 13, 2024, 10:38 AM IST

ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳು ಎದುರಿಸುವ ಕಷ್ಟಗಳ ಬಗ್ಗೆ ವಿವರಿಸಿದ ಅನುಪಮಾ ಗೌಡ. ಈಗಲೂ ಕಾಸ್ಟಿಂಗ್ ಕೌಚ್ ಇದ್ಯಾ? 

ಕನ್ನಡ ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ತಮ್ಮ ಬಣ್ಣದ ಜರ್ನಿಯಲ್ಲಿ ಸುಮಾರು ಎರಡು ಕಲ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರಂತೆ. ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಈಗ ಕಾಸ್ಟಿಂಗ್ ಕೌಚ್‌ ಬಗ್ಗೆ ಎಲ್ಲೂ ಇಲ್ಲ ನಾನು ಕೇಳಿಲ್ಲ ಆದರೆ ಮೀ ಟೂ ಮೋಮೆಂಟ್ ಶುರುವಾದ ಮೇಲೆ ಎಲ್ಲವೂ ಸೈಲೆಂಟ್ ಆಗಿಬಿಟ್ಟಿದೆ ಎಂದು ಅನುಪಮಾ ಗೌಡ ಹೇಳಿದ್ದಾರೆ. 

Tap to resize

 ಆದರೆ ನನಗೆ ಒಮ್ಮೆ ಕರೆ ಬಂತು. ಒಬ್ರು ನಿರ್ದೇಶಕರು ನಿರ್ಮಾಪಕರು ಕರೆ ಮಾಡಿ ನಿಮಗೆ ಸ್ಟೋರಿ ಹೇಳಿಬೇಕು ಆದರೆ ನೀವು ಸ್ವಲ್ಪ ಅಡ್ಜಸ್ಟ್‌ ಮಾಡಿಕೊಳ್ಳಬೇಕು ಅಂದ್ರು. 

ಅಕ್ಕ ಸೀರಿಯಲ್ ಮಾಡುವ ಸಮಯದಲ್ಲಿ ನಡೆದ ಘಟನೆ. ಹೊಸ ತಂಡದ ಜೊತೆ ಆದ ಮಾತುಕತೆ ಅದಿಕ್ಕೆ ನೇರವಾಗಿ ಆಗಲ್ಲ ಸಿನಿಮಾ ಮಾಡಲ್ಲ ಎಂದೆ. 

ಅದಕ್ಕೂ ಮುನ್ನ ದುಬೈ ಕಾರ್ಯಕ್ರಮವೊಂದು ಹೋಸ್ಟ್‌ ಮಾಡಿದ್ದೆ. ಮೀಟಿಂಗ್ ಅಂತ ಹೇಳಿ ಕಾಫಿ ಡೇಗೆ ಕರೆದರು, ಅನುಮಾನದಲ್ಲಿ ಆ ಜಾಗಕ್ಕೆ ಭೇಟಿ ಕೊಟ್ಟಿ.

ಮಾತಿನ ನಡುವೆ ನೀವು ಓನರ್‌ ಜೊತೆ ಡಿನ್ನರ್‌ಗೆ ಬರಬೇಕಾಗುತ್ತದೆ ಅಂದ್ರು. ನಾನು ಯಾಕೆ ಓನರ್ ಜೊತೆ ಬರಬೇಕು ಎಂದು ಕೇಳಿದ್ದಕ್ಕೆ. ಗೊತ್ತಲ್ಲಾ ಇದಕ್ಕಿಂತ ಜಾಸ್ತಿ ದುಡ್ಡು ಕೊಡ್ತಾರೆ ಅಂದ್ರು.

ಡಿನ್ನರ್‌ಗೆ ಹೋದ್ರೆ ಯಾಕೆ ಎಕ್ಸಟ್ರಾ ದುಡ್ಡು ಕೊಡ್ತಾರೆ ಅಂದೆ. ಅಯ್ಯೋ ಎಷ್ಟೋಂದು ಜನ ಮಾಡ್ತಾರೆ ನೀವು ಏನು ಅಂದುಬಿಟ್ಟರು. ಕೆಲವರ ಹೆಸರು ಕೇಳಿ ಬಿಟ್ಟರು. ನಾನು ರಿವೀಲ್ ಮಾಡಲ್ಲ.

ಆ ಮಾತುಕತೆ ನಡೆದ ಮೇಲೆ ನಾನು ಮೊದಲು ಕಾಫಿ ಡೇಯಿಂದ ಹೊರ ಬಂದು. ನಾನು ಎಷ್ಟು ಕಣ್ಣೀರಿಟ್ಟಿದ್ದೀನಿ ಎಂದು ನನ್ನ ಸ್ನೇಹಿತರಿಗೆ ಮಾತ್ರ ಗೊತ್ತು. 

Latest Videos

click me!