ನಿರೂಪಣೆ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ನಿರೂಪಣೆ ಅನ್ನುವ ಟೈಂ ಇತ್ತು. ಯಾವುದೇ ಸರ್ಕಾರಿ ಕಾರ್ಯಕ್ರಮವಿದ್ದರೂ ಅಲ್ಲಿ ಕನ್ನಡದ ಕಂಪನ್ನು ಬೀರುತ್ತಿದ್ದವರು ಅಪರ್ಣಾ. ಅವರ ಕನ್ನಡ ಬಳಕೆ, ಉಚ್ಛಾರ, ಏರಿಳಿತ ಎಲ್ಲವೂ ಅದ್ಭುತ. ಕನ್ನಡವನ್ನು ಕೇಳಬೇಕು ಎಂದರೆ ಅಪರ್ಣಾ ಬಾಯಲ್ಲಿ ಕೇಳಬೇಕು ಎನ್ನುವ ಮಾತಿತ್ತು. ನಿರೂಪಣೆ, ಧಾರಾವಾಹಿ, ಸಿನಿಮಾ, ಕಾಮಿಡಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಜಾ ಟಾಕೀಸ್ ನಲ್ಲಿ ವರಲಕ್ಷ್ಮೀಯಾಗಿ ಮಾಡುವ ಕಾಮಿಡಿ ಸಿಕ್ಕಾಪಟ್ಟೆ ಫೇಮಸ್. ಅಪರ್ಣಾ ಅವರ ಜರ್ನಿ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.