ಮದುವೆ ಫೋಟೋ ವಿಡಿಯೋ ಇಲ್ಲದಂತೆ ಸುಟ್ಟು ಹೋಗಿದೆ: ನಟಿ ಸುನೇತ್ರಾ ಕಣ್ಣೀರು

First Published Apr 26, 2024, 4:04 PM IST

ವಿಭಿನ್ನವಾಗಿ ನಡೆದ ಮದುವೆಯಾ ಒಂದು ಫೋಟೋ ಮತ್ತು ವಿಡಿಯೋ ಇಲ್ಲ ಎಂದು ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ ರಮೇಶ್. 

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ಸುನೇತ್ರಾ ಮತ್ತು ರಮೇಶ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಈ ಜೋಡಿ ಆಫ್‌ ಸ್ಕ್ರೀನ್‌ನಲ್ಲೂ ಸಖತ್ ಕಾಮಿಡಿ ಮಾಡುತ್ತಾರೆ. 

ಇತ್ತೀಚಿಗೆ ನಡೆದ ಜೋಡಿ ನಂ 1 ಕಾರ್ಯಕ್ರಮದಲ್ಲಿ ತಮ್ಮ ಮದುವೆ ಒಂದೂ ಫೋಟೋ ಮತ್ತು ವಿಡಿಯೋ ಇಲ್ಲ ಎಂದು ಸುನೇತ್ರಾ ಕಣ್ಣೀರಿಟ್ಟಿದ್ದರು. 

ಬೆಂಗಳೂರಿನಲ್ಲಿ ಲೈವ್‌ ಎಡಿಟಿಂಗ್‌ ನಡೆದ ಮೊದಲ ಮದುವೆ ನಮ್ಮದು. ಆರತಕ್ಷತೆಯನ್ನು ವಿಭಿನ್ನವಾಗಿ ಮಾಡಬೇಕು ಎಂದು ಮದುವೆ ಮನೆಯ ಬಾಗಿನಿನಲ್ಲಿ ರಮೇಶ್ ಮತ್ತು ನಾನು ನಿಂತುಕೊಂಡು ಮಾತನಾಡಿಸುತ್ತಿದ್ವಿ 

ಅಲ್ಲಲ್ಲಿ ಟೇಬಲ್ ಹಾಕಿದ್ವಿ ನಾವು ಆ ಟೇಬಲ್ ಬಳಿ ಹೋಗಿ ಎಲ್ಲರನ್ನು ಮಾತನಾಡಿಸಿಕೊಂಡು ಫೋಟೋ ಕ್ಲಿಕ್ ಮಾಡಿಸಿಕೊಳ್ಳುತ್ತಿದ್ವಿ. ವಿಭಿನ್ನ ಶೈಲಿಯಲ್ಲಿ ನಡೆಯಿತ್ತು ಎಂದು ಜೀವನದಲ್ಲಿ ಈ ಘಟನೆ ಮರೆಯುವುದಿಲ್ಲ' ಎಂದು ಸುನೇತ್ರಾ ಮಾತನಾಡಿದ್ದಾರೆ. 

ಮದುವೆ ಫೋಟೋ ನೋಡಲು ಪ್ರತಿಯೊಬ್ಬರಿಗೂ ಕ್ಯೂರಿಯಾಸಿಟಿ ಮತ್ತು ಖುಷಿ ಇರುತ್ತದೆ ಆದರೆ ನಮ್ಮ ಮದುವೆ ಸಂಪೂರ್ಣ ಕವರೇಜ್ ಮಾಡಿದವರ ಫೋಟೋ ಸ್ಟುಡಿಯೋ ಸುಟ್ಟಿಹೋಗುತ್ತದೆ. 

ಏನೋ ಶಾರ್ಟ್‌ ಸರ್ಕ್ಯೂಟ್ ಆಗಿ ಇಡೀ ಸ್ಟುಡಿಯೋದಲ್ಲಿ ಸಂಪೂರ್ಣ ವಸ್ತು ಸುಟ್ಟಿದೆ. ನಮ್ಮ ಜೊತೆ ಬೇರೆ ಜೋಡಿಗಳ ಫೋಟೋ ಮತ್ತು ವಿಡಿಯೋ ಇಲ್ಲದಂತೆ ಆಗಿದೆ.

ಮದುವೆಯಲ್ಲಿ ಯಾರೆಲ್ಲ ಇದ್ದರು ಅವರ ಬಾಯಿಂದ ನಮ್ಮ ಮದುವೆ ಹೇಗಿತ್ತು ಎಂದು ಕೇಳಬೇಕು ಏಕೆಂದರೆ ಒಂದು ಫೋಟೋ ಕೂಡ ಇಲ್ಲ. ಆದರೆ ನಮ್ಮ ಸ್ನೇಹಿತರು ರೀಲ್‌ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ ಒಂದೆರಡು ಫೋಟೋಗಳಿಗೆ ಅಷ್ಟೆ' ಎಂದು ಸುನೇತ್ರಾ ಕಣ್ಣೀರಿಟ್ಟಿದ್ದಾರೆ.

click me!