ಶ್ರೀರಸ್ತು ಶುಭಮಸ್ತು, ರಾಧಾ ರಮಣ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯ ರಾಧಾ ಮಿಸ್ ಎಂದೇ ಜನಪ್ರಿಯತೆ ಪಡೆದಿರುವ ಶ್ವೇತಾ ಪ್ರಸಾದ್ ಈಗ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
26
ಸೋಷಿಯಲದ ಮೀಡಿಯಾದಲ್ಲಿ ಸೌದಿ ಅರೇಬಿಯಾ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತಿದ್ದಾರೆ. 'ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನಿಸಲ್ಪಟ್ಟಿದ್ದು ಬಹಳ ಖುಷಿ ನೀಡಿದೆ'
36
ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಲಿನ ಪ್ರವಾಸೋದ್ಯಮ ಪ್ರಾಧಿಕಾರ ಈ ಕೆಲಸ ಮಾಡುತ್ತಿದೆ. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳನ್ನು ಮರೆಯಲಾಗದು. ಈ ಪ್ರವಾಸ ನನಗೆ ಒಂದು ಹೊಸ ಅನುಭವ ನೀಡಿದೆ'
46
'ಅಲ್ಲಿನ ರಿಯಾದ್, ಅಲುಲಾ, ಜೇಡಾ ಮೂರು ಹೆಸರಾಂತ ನಗರಗಳಿಗೆ ಭೇಟಿ ನೀಡಿ ಬಂದೆ. ರಿಯಾದ್‌ನಲ್ಲಿ ಸೌದಿ ಅರೇಬಿಯಾ ಅತಿ ಎತ್ತರದ ಕಟ್ಟಡ ಕಿಂಗ್ ಡಂ ಟವರ್‌ಗೆ ಭೇಟಿ ನೀಡಿದ್ದೆ'
56
ಬುರ್ಜ್ ಖಲೀಫಾಗಿಂತ ಎತ್ತರ ಕಟ್ಟಡವನ್ನು ಅಲ್ಲಿ ನಿರ್ಮಿಸಿದ್ದಾರೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರರಾದವರಲ್ಲಿ ಶ್ವೇತಾ ಪ್ರಸಾದ್ ಮೊದಲಿಗರಾಗಿದ್ದಾರೆ.
66
'ಟ್ರಾಫಿಕ್ ನಿಯಂತ್ರಣಕ್ಕೆ ದಿ ಲೈನ್ ಎಂಬ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಮಹಿಳೆಯರು ಬುರ್ಖಾ ಧರಿಸುತ್ತಾರೆ ಅಲ್ಲಿನ ಮಹಿಳೆಯರು ಹೊರಗಡೆ ಓಡಾಡುವುದಿಲ್ಲ ಎಂದುಕೊಂಡಿದ್ದೆ ಆದ್ರೆ ಅಲ್ಲಿ ಬುರ್ಖಾವನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಆರಾಮಾಗಿ ಹೊರಗಡೆ ಓಡಾಡಿಕೊಂಡು ಇದ್ದಾರೆ' ಎಂದು ಬರೆದುಕೊಂಡಿದ್ದಾರೆ.