ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ರಂಗಭೂಮಿ ಕಲಾವಿದೆ ಪ್ರಿಯಾ ಶಠಮರ್ಷಣ ಅಭಿನಯಿಸುತ್ತಿದ್ದಾರೆ. ಡವಲ್ ಶೇಡ್ ಭಾರ್ಗವಿ ಪಾತ್ರ ವೀಕ್ಷಕರ ಗಮನ ಸೆಳೆದಿದೆ.
ಸಿಎಸ್ ಚಂದ್ರಶೇಖರ್ ಸಹೋದರಿಯಾಗಿ ಭಾರ್ಗವಿ ಸೈಲೆಂಟ್ ಆಗಿರುತ್ತಾರೆ ಆದರೆ ಲಕ್ಷಣ ಮಗಳು ಎಂದು ತಿಳಿಯುತ್ತಿದ್ದಂತೆ ವಿಲನ್ ಆಗಿ ಬದಲಾಗುತ್ತಾರೆ.
ಸುಮಾರು 14 ವರ್ಷಳ ಕಾಲ ರಂಗಭೂಮಿಯಲ್ಲಿ ಪ್ರಿಯಾ ತೊಡಗಿಸಿಕೊಂಡಿದ್ದಾರೆ. ಕಿರುತೆರೆ ಲೋಕಕ್ಕೆ ಕಾಲಿಟ್ಟು 5 ವರ್ಷಗಳಾಗಿದೆ. ರಾಮಾ ರಾಮಾ ರೇ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ಚೇಸ್ ಹಾಗೂ ನಿರ್ದೇಶಕ ಮಂಸೋರೆಯವರ 19-2-21 ಹೆಸರಿನ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ನಟನೆ ಮಾತ್ರವಲ್ಲ ಒಂದಲ್ಲಾ ಎರಡಲ್ಲಾ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ.
ಸಿನಿಮಾ, ಧಾರಾವಾಹಿ ಮತ್ತು ಕಾಸ್ಟ್ಯೂಮ್ ಡಿಸೈನಿಂಗ್ ಬಿಟ್ಟು ರಂಗಭೂಮಿಯಲ್ಲಿ ಏಕವ್ಯಕ್ಯಿ ನಾಟಕ ಮಾಡಬೇಕು ಅನ್ನುವ ಯೋಜನೆ ಕೂಡ ಹೊಂದಿದ್ದಾರೆ. ಹೀಗಾಗಿ ಮಹಿಳ ಪ್ರಧಾನ ಕಥೆಯುಳ್ಳ ಸ್ಕ್ರಿಪ್ಟ್ ಹುಡುಕಿದ್ದಾರಂತೆ.
ಭಾರ್ಗವಿ ಪಾತ್ರದಿಂದ ಒಳ್ಳೆ ಒಳ್ಳೆ ಅಫರ್‌ಗಳು ಬರುತ್ತಿದೆ. ಒಂದು ಸಿನಿಮಾ ಮಾಡುವಾಗ ಒಂದು ಧಾರಾವಾಹಿಯಲ್ಲಿ ಮಾತ್ರ ನಟಿಸಲು ಸಾಧ್ಯ. ಜೀ ಕನ್ನಡ ಸತ್ಯ ಧಾರಾವಾಹಿಯಲ್ಲೂ ಒಂದು ಅತಿಥಿ ಪಾತ್ರ ನಿರ್ವಹಿಸಿದ್ದೇನೆ ಎಂದು ಪ್ರಿಯಾ ಹೇಳಿದ್ದಾರೆ.