'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು, ಲಚ್ಚಿ ಎಂದು ಜನಪ್ರಿಯತೆ ಪಡೆದ ಕಲಾವಿದೆ ರಶ್ಮಿ ಪ್ರಕಾರ್.
ರಶ್ಮಿ (Rashmi Prabhakar) ಅವರು ತಮ್ಮ ಬಹು ಕಾಲದ ಗೆಳೆಯ ನಿಖಿಲ್ (Nikhil) ಜೊತೆ ಏಪ್ರಿಲ್ 25ರಂದು ಮದುವೆ ಆಗಲಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಮಾತನಾಡಲು Q&A ಮಾಡಿದಾಗ ಎಲ್ಲರೂ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ '25.04.2022' ಎಂದು ಬರೆದು ಎಲ್ಲರಿಗೂ ತಿಳಿಸಿದ್ದಾರೆ.
ರಶ್ಮಿ ಮದುವೆಗೆ ಶಾಪಿಂಗ್ ಶುರು ಮಾಡಿದ್ದಾಳಂತೆ. ಮಾಂಗಲ್ಯದಿಂದ ಹಿಡಿದು ಕುಟುಂಬಸ್ಥರಿಗೆ ಬಟ್ಟೆ ತೆಗೆಯುತ್ತಿರುವುದನ್ನೆಲ್ಲಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ (Instagram Story) ಹಂಚಿಕೊಳ್ಳುತ್ತಿದ್ದಾರೆ.
ನಿಶ್ಚಿತಾರ್ಥದ ವಿಡಿಯೋವೊಂದನ್ನು ಹಂಚಿಕೊಂಡಿರುವ ರಶ್ಮಿ ಅದರಲ್ಲಿ ನಿಖಿಲ್ ಜೊತೆ ನಾನ್ ಸ್ಟಾಪ್ ಮಾತನಾಡಿದ್ದಾರೆ. 'ನಿಮ್ಮ ಬೆಸ್ಟ್ ಫ್ರೆಂಡ್‌ನ ಮದುವೆ, ಆದರೆ ನೀವು ಹೀಗೆ ನಾನ್ ಸ್ಟಾಪ್ ಮಾತನಾಡುತ್ತಲೇ ಇರಬಹುದು', ಎಂದು ಬರೆದುಕೊಂಡಿದ್ದಾರೆ.
ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡು, 'ಕಣ್ಣಲ್ಲೇ ಪರಿಚಯ. Falling for him wasn't really falling at all, ಇದು ಹೇಗೆ ಅಂದ್ರೆ ನೀವು ಸಡನ್ ಆಗಿ ಮನೆಯೊಳಗೆ ನಡೆದು ನೋಡಿದರೆ ಅದು ನಿಮ್ಮ ಮನೆಯಾಗಿರುತ್ತದೆ,' ಎಂದು ಬರೆದುಕೊಂಡಿದ್ದಾರೆ.
ರಶ್ಮಿ ಅವರು ನಿಶ್ಚಿತಾರ್ಥದ ಮುಂಚೆಯೂ ಫೋಟೋಶೂಟ್ ಮಾಡಿಸಿದ್ದರು, ಈಗ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋ ಹಂಚಿಕೊಳ್ಳುತ್ತಿದ್ದಾರೆ.