ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ರ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ನಟಿ ಅಕ್ಷತಾ ಕುಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾರ್ಚ್ 27ರಂದು ಬೆಳಗಾವಿಯಲ್ಲಿ ಅಕ್ಷತಾ ಮತ್ತು ಅವಿನಾಶ್ ಮದುವೆಯಾಗಿದ್ದಾರೆ. ಇದು ಕುಟುಂಬಸ್ಥರು ನಿಶ್ಚಯಿಸಿರುವ ಮದುವೆ ಎನ್ನಲಾಗಿದೆ.
ಮದುವೆ ಫೋಟೋ ಹಂಚಿಕೊಂಡ ಅಕ್ಷತಾ 'Miss to Mrs' ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್ಸ್‌ನಲ್ಲಿ ವಿಶ್ ಮಾಡುತ್ತಿದ್ದಾರೆ.
ಗೋಲ್ಡನ್ ಬಣ್ಣದ ರೇಶ್ಮೆ ಸೀರೆಯಲ್ಲಿ ಅಕ್ಷತಾ ಮಿಂಚಿದ್ದಾರೆ. ಕ್ರೀಮ್ ಬಣ್ಣ ಶೆರ್ವಾನಿ ಧೋತಿ ಪ್ಯಾಂಟ್‌ನಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದಾರೆ.
ಅಕ್ಷತಾ ಅವರ ವಸ್ತ್ರವನ್ನು ವಸ್ತ್ರಾ ಹುಬ್ಳಿ ಡಿಸೈನ್ ಮಾಡಿದ್ದಾರೆ, ಭರತ್ ಪಾದ್ಯಾ ಫೋಟೋ ಕ್ಲಿಕ್ ಮಾಡಿದ್ದಾರೆ ಹಾಗೂ ಪ್ರಿಯಾಂಕಾ ಮೇಕಪ್ ಮಾಡಿದ್ದಾರೆ.
ಖಾಸಗಿ ಕಂಪನಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅವಿನಾಶ್ ಜೊತೆ ಅಕ್ಷತಾ ಫೆಬ್ರವರಿ ತಿಂಗಳಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಅಕ್ಷತಾ ಸ್ನೇಹಿತೆಯರು ಸೇರಿಕೊಂಡು ಬೀಚ್ ಸೈಡ್‌ನಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಜೊತೆ ಸ್ನೇಹಿತೆಯರ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ.