ದೊಡ್ಡಮ್ಮ ಹೇಳಿದ ಮಾತುಗಳು ದೀಪಿಕಾ ದಾಸ್‌ಗೆ ನಾಟಿವೆ. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ “ಹೊಸ ಕಲಾವಿದರನ್ನು ಬೆಳೆಸುವ ಜನರು ಕಲಾವಿದರಿಗೆ ಮೊದಲು ಬೆಲೆಯನ್ನು ಕೊಡೋದನ್ನು ಕಲಿತಿರಬೇಕು. ಇಲ್ಲಿಯವರೆಗೆ ನಾನು ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ, ಮುಂದೆ ಕೂಡ ಬರೋದಿಲ್ಲ. ಕೆಲವರಿಗೆ ಬೆಲೆಯನ್ನು ಕೊಡ್ತೀವಿ ಎಂದಮಾತ್ರಕ್ಕೆ, ಯಾರನ್ನು ಕಂಡು ಯಾರಿಗೂ ಭಯ ಇರೋದಿಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಅಥವಾ ಪುಷ್ಪಮ್ಮ ಆದರೂ ಸರಿ. ನಮ್ಮ ಚಿತ್ರರಂಗದ ಸ್ಟಾರ್ ಅವರಿಗೆ ಗೌರವ ಕೊಡ್ತೀನಿ. ನಾನು ದೊಡ್ಡ ನಟಿ ಅಲ್ಲ, ಏನೂ ಸಾಧನೆ ಮಾಡಿಲ್ಲ, ಆದರೆ ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ” ಎಂದು ಅವರು ಹೇಳಿದ್ದಾರೆ.