ಲೈಫ್‌ಬಾಯ್‌ನ ಸಾಕಷ್ಟು ಫೇಮಸ್ ಜಾಹೀರಾತುಗಳು ಬಂದಿವೆ. ಅದರಲ್ಲಿ ತೀರಾ ಇತ್ತೀಚೆಗೆ ಸಖತ್ ವೈರಲ್ ಆಗಿದ್ದು, ಬಂಟಿ ನಿನ್ನ ಸಾಬೂನು ಸ್ಲೋ ನಾ ಎಂದು ಹೇಳುವ ಹುಡುಗಿಯ ಜಾಹೀರಾತು ಮೂಲಕ.
ಲೈಫ್ ಬಾಯ್ ಸಾಬೂನಿನ ಜಾಹೀರಾತುಗಳ ಪೈಕಿ ನಿಮಗೆ, 'ಬಂಟಿ ನಿನ್ನ ಸಾಬೂನು ಸ್ಲೋ ನಾ.. ' ಎಂದು ಹೇಳುವ ಹುಡುಗಿಯ ಜಾಹೀರಾತು ನೆನಪಿರಬೇಕಲ್ಲ.
214
ಆ ಜಾಹೀರಾತಿನಲ್ಲಿ ನಟಿಸಿದ್ದ ಹುಡುಗಿಯ ಹೆಸರು ಅವನೀತ್ ಕೌರ್. ಅಂದು ಬರೀ ಜಾಹೀರಾತುಗಳಲ್ಲಿ ನಟಿಸುತ್ತಿದ್ದ ಅವನೀತ್ ಕೌರ್ ಈಗ ಹಾಟ್ ಬ್ಯೂಟಿ.
314
ಇನ್ಸ್‌ಟಾಗ್ರಾಮ್‌ನಲ್ಲಿ 32.1 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಅವನೀತ್ ಕೌರ್ ಅವರ ಲವ್ ಕೀ ಅರೇಂಜ್ ಮ್ಯಾರೇಜ್ ಸಿನಿಮಾ ಇತ್ತೀಚೆಗೆ ಜೀ 5ನಲ್ಲಿ ಬಿಡುಗಡೆಯಾಗಿದೆ.
414
ಅದರೊಂದಿಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಲುಕ್‌ಅನ್ನು ಅಭಿಮಾನಿಗಳಿಗೆ ಪ್ರದರ್ಶನ ಮಾಡುತ್ತಲೇ ಇರುತ್ತಾರೆ.
514
ಅವನೀತ್ ಕೌರ್ ಬರೀ ಲೈಫ್‌ಬಾಯ್ ಹುಡುಗಿಯಾಗಿ ಫೇಮಸ್ ಆಗಿರಲಿಲ್ಲ. ಅದರೊಂದಿಗೆ ಕ್ಲಿನಿಕ್ ಪ್ಲಸ್, ಹೀರೋ ಸ್ಪ್ಲೆಂಡರ್ ಹಾಗೂ ಕೊಕಾ ಕೋಲಾ ಜಾಹೀರಾತುಗಳಲ್ಲಿಯೂ ನಟಿಸಿದ್ದರು.
614
ಜಾಹೀರಾತುಗಳಷ್ಟೇ ಅಲ್ಲ, ಅವನೀತ್ ಅನೇಕ ಧಾರವಾಹಿಗಳು ಮತ್ತು ಸಿನಿಮಾಗಳ ಭಾಗವಾಗಿದ್ದಾರೆ. ಗ್ಲಾಮರ್ ಜಗತ್ತಿನಲ್ಲಿ ಅವರ ಪಯಣ ಎಲ್ಲಿಂದ ಆರಂಭವಾಯಿತು ಅನ್ನೋದರ ವಿವರ ಇಲ್ಲಿದೆ.
714
ಅವರು 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್' ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಆದರೆ. ಸೆಮಿ-ಫೈನಲ್ ಸುತ್ತಿನ ಮುನ್ನವೇ ಅವರು ಶೋನಿಂದ ನಿರ್ಗಮಿಸಿದರು.
814
ಇದಾದ ನಂತರ ಅವನೀತ್ 'ಡ್ಯಾನ್ಸ್ ಕೀ ಸೂಪರ್ ಸ್ಟಾರ್ಸ್' ಚಿತ್ರದಲ್ಲೂ ಕಾಣಿಸಿಕೊಂಡರು. ಇದರ ನಂತರ, ಅವರು 'ಮೇರಿ ಮಾ' ಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು, ಇದರಲ್ಲಿ ಜಿಲ್ಮಿಲ್ ಎಂಬ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು.
914
ಇದರ ನಂತರ, ಅವರು 'ತೇಡೆ ಹೈ ಪರ್ ತೇರೆ ಮೇರೆ ಹೈ' ಭಾಗವಾಗಿದ್ದರು. ಮತ್ತು 2012 ರಲ್ಲಿ ಅವರು 'ಝಲಕ್ ದಿಖ್ಲಾ ಜಾ 5' ಗೆ ಎಂಟ್ರಿ ಪಡೆದುಕೊಂಡಿದ್ದರು.
1014
ಇದರ ನಂತರ, ಅವರು 'ಸಾವಿತ್ರಿ' ಚಿತ್ರದಲ್ಲಿ ರಾಜಕುಮಾರಿ ದಮಯಂತಿ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ನಂತರ 'ಏಕ್ ಮುತ್ತಿ ಆಸ್ಮಾನ್' ನಲ್ಲಿ ಪಾಖಿಯಾಗಿ ಕಾಣಿಸಿಕೊಂಡರು.
1114
2017 ರಲ್ಲಿ, ಅವರು 'ಚಂದ್ರ ನಂದಿನಿ' ಚಿತ್ರದಲ್ಲಿ ರಾಜಕುಮಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಸಿದ್ಧಾರ್ಥ್ ನಿಗಮ್ ಎದುರು 'ಅಲ್ಲಾದ್ದೀನ್ - ನಾಮ್ ತೋ ಸುನಾ ಹೋಗಾ' ಚಿತ್ರದಲ್ಲಿನ ಮಲ್ಲಿಗೆ ಪಾತ್ರದಿಂದ ಜನಪ್ರಿಯರಾಗಿದ್ದರು.
1214
ಇದಾದ ಬಳಿಕ ‘ಕಿಚನ್ ಚಾಂಪಿಯನ್’ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅವನೀತ್ ತನ್ನ ಪ್ರತಿಭೆಯು ಕಾರಣದಿಂದಾಗಿ ಸಿನಿಮಾಗಳಲ್ಲಿ ದೊಡ್ಡ ಅವಕಾಶ ಪಡೆದುಕೊಂಡಿದ್ದರು.
1314
ಅವನೀತ್ ಕೌರ್, ರಾಣಿ ಮುಖರ್ಜಿಯವರ 'ಮರ್ದಾನಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ಮೀರಾ ಪಾತ್ರದಲ್ಲಿ ಕಾಣಿಸಿಕೊಂಡರು.
1414
ಇದರ ನಂತರ ಅವನೀತ್‌ಗೆ 'ಕರೀಬ್ ಕರೀಬ್ ಸಿಂಗಲ್' ಮತ್ತು 'ಮರ್ದಾನಿ 2' ನಲ್ಲಿ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. ಟಿಕ್‌ಟಾಕ್‌ನಲ್ಲೂ ತಮ್ಮ ಹಾಟ್ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದರು. ಟಿಕ್‌ಟಾಕ್ ಭಾರತದಲ್ಲಿ ಬ್ಯಾನ್ ಆಗುವ ಮುನ್ನ. 1.5 ಮಿಲಿಯನ್ ಫಾಲೋವರ್‌ಗಳನ್ನು ಈಕೆ ಹೊಂದಿದ್ದರು.