ಸೀರಿಯಲ್ಲಲ್ಲಿ ಭಾಗ್ಯ ಕಾರು ನೋಡಿ ಬಿಲ್ಡಪ್ ಅಂದ್ರೆ, ರಿಯಲ್ ಆಗಿ ಕಾರು ಖರೀದಿಸಿದ ಸುಷ್ಮಾಗೆ ಭೇಷ್ ಅಂದ್ರು!

Published : Jul 06, 2024, 03:57 PM IST

ಭಾಗ್ಯಲಕ್ಷ್ಮೀ ಸೀರಿಯಲಿನಲ್ಲಿ ಭಾಗ್ಯ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಸುಷ್ಮಾ ರಾವ್ ತಮ್ಮ ಬರ್ತ್ ಡೇ ಸಂಭ್ರಮದಂದು ಕಾರು ಖರೀದಿಸಿದ್ದಾರೆ. ಧಾರಾವಾಹಿಯೊಬ್ಬಳು ಏನೂ ಗೊತ್ತಿಲ್ಲದ ಹೆಣ್ಣಾಗಿ, ಸಾಧನೆಯ ಮೆಟ್ಟಿಲು ಹತ್ತುತ್ತಿರುವ ಭಾಗ್ಯಾ, ರೀಯಲ್ ಲೈಫಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ತಾವೇ ಗಿಫ್ಟ್ ಕೊಟ್ಟುಕೊಂಡು ಸಂಭ್ರಮಿಸಿದ್ದಾರೆ. 

PREV
17
ಸೀರಿಯಲ್ಲಲ್ಲಿ ಭಾಗ್ಯ ಕಾರು ನೋಡಿ ಬಿಲ್ಡಪ್ ಅಂದ್ರೆ, ರಿಯಲ್ ಆಗಿ ಕಾರು ಖರೀದಿಸಿದ ಸುಷ್ಮಾಗೆ ಭೇಷ್ ಅಂದ್ರು!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯಲ್ಲಿ ಭಾಗ್ಯ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವ ನಟಿ ಸುಷ್ಮಾ ರಾವ್. ತಮ್ಮ ಅಧ್ಬುತ ನಟನೆಯಿಂದ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.

27

ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪೈವ್ ಸ್ಟಾರ್ ಹೊಟೇಲಿನಲ್ಲಿ ಚೀಫ್ ಶೆಫ್ ಆಗಿ ಉದ್ಯೋಗ ಪಡೆದಿದ್ದು, ಆಕೆಗೆ ಅದ್ಧೂರಿ ಅಭಿನಂದನೆ ಕೂಡ ನಡೆದಿದೆ. ಅಷ್ಟೇ ಅಲ್ಲ ಆಕೆಗೆ ಓಡಾಡೋಕೆ ಕಾರು ಕೂಡ ನೀಡಿದ್ದಾರೆ ಹೊಟೇಲಿನವರು. ಇದನ್ನ ನೋಡಿ ವೀಕ್ಷಕರು ಇಷ್ಟೆಲ್ಲ ಬಿಲ್ಡಪ್ ಬೇಕಾ. ಒಂದು ಒತ್ತು ಶ್ಯಾವಿಗೆ ಮಾಡಿದ್ದಕ್ಕೆ ಇದೆಲ್ಲಾ ಯಾಕೆ, ಬೆಂಗಳೂರಲ್ಲಿ ಕ್ಯಾಬ್, ರಿಕ್ಷಾ ಯಾವುದೂ ಇಲ್ವೇ ಎಂದು ಎಂದು ಜನ ಏನೇನೋ ಹೇಳಿ ತಮಾಷೆ ಮಾಡಿದ್ರು. 
 

37

ಇದೆಲ್ಲಾ ರೀಲ್ ಜೀವನದ ಕಥೆ ಆಯ್ತು ಬಿಡಿ. ಈವಾಗ ಭಾಗ್ಯ ಆಲಿಯಾಸ್ ಸುಷ್ಮಾ ರಾವ್ (Sushma Rao) ಅವರ ರಿಯಲ್ ಲೈಫ್ ಕಥೆ ಕೇಳೋಣ. ಸೀರಿಯಲ್ ನಲ್ಲಿ ಭಾಗ್ಯಾಳಿಗೆ ಕಾರು ನೀಡಿದ್ದನ್ನು ನೋಡಿ ಬಿಲ್ಡಪ್ ಎಂದಿದ್ದ ಜನರೇ ಈಗ ಭಾಗ್ಯ ಅಂದ್ರೆ ಸುಷ್ಮಾ ರಾವ್ ಗೆ ಭೇಷ್ ಹೇಳ್ತಿದ್ದಾರೆ, ಅಲ್ಲದೇ ಕಂಗ್ರಾಜ್ಯುಲೇಶನ್ ಕೂಡ ತಿಳಿಸುತ್ತಿದ್ದಾರೆ. ಯಾಕೆ ಗೊತ್ತಾ? 

47

ಸುಷ್ಮಾ ರಾವ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಮ್ಮ ಹುಟ್ಟುಹಬ್ಬದಂದು ಹುಂಡೈ ಕ್ರೇಟಾ ಕಾರನ್ನು ಸುಷ್ಮಾ ರಾವ್ ಖರೀದಿಸಿದ್ದಾರೆ. ಆ ಮೂಲಕ ಸುಷ್ಮಾ ದುಬಾರಿ ಕಾರಿನ ಒಡತಿಯಾಗಿದ್ದಾರೆ. ಸುಷ್ಮಾ ರಾವ್ ಅವರ ಸಾಧನೆಗಾಗಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. 
 

57

ಜುಲೈ 1ರಂದು ಸುಷ್ಮಾ ರಾವ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾಗ್ಯಲಕ್ಷ್ಮಿ ತಂಡದ ಜೊತೆ ಸೆಟ್ ನಲ್ಲಿ ಜೊತೆಯಾಗಿ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅಲ್ಲಿನ ಮುದ್ದಾದ ವಿಡಿಯೋವನ್ನು ಸೋಶಿಯಲ್ ಮೀಡೀಯಾದಲ್ಲಿ ನಟಿ ಹಂಚಿಕೊಂಡಿದ್ದರು. ಅದರ ಜೊತೆಗೆ ತಾವು ಕಾರು ಹರೀದಿಸಿದ ವಿಡೀಯೋ ತುಣುಕು ಸಹ ಶೇರ್ ಮಾಡಿದ್ದಾರೆ. 

67

ಕಳೆದ ಇಪ್ಪತ್ತು ವರ್ಷಗಳಿಂದ ಕನ್ನದ ಕಿರುತೆರೆಯಲ್ಲಿ ಮಿಂಚುತ್ತಿರುವ ಸುಷ್ಮಾ ರಾವ್, 10 ವರ್ಷದ ನಂತರ ಭಾಗ್ಯಲಕ್ಷ್ಮೀ ಮೂಲಕ ನಟನೆಗೆ ರೀಎಂಟ್ರಿ ಕೊಟ್ಟಿದ್ದು, ಭಾಗ್ಯ ಆಗಿ ತುಂಬಾನೆ ಜನಪ್ರಿಯತೆ ಗಳಿಸಿದ್ದಾರೆ. ಇದೇ ಸಮಯದಲ್ಲಿ ತಮ್ಮ ಈ ವರ್ಷದ ಬರ್ತ್ ಡೇಗೆ ತಮಗೆ ತಾವು ಹುಟ್ಟುಹಬ್ಬದ ಗಿಫ್ಟ್ ಕೊಟ್ಟು ಸಂಭ್ರಮಿಸಿದ್ದಾರೆ ಸುಷ್ಮಾ ರಾವ್. 

77

ಸುಷ್ಮಾ ರಾವ್ ಹುಟ್ಟು ಹಬ್ಬದ ದಿನ ಹುಂಡೈ ಕ್ರೇಟಾ ಕಾರು ಖರೀದಿಸಿದ್ದಾರೆ. ಹುಂಡೈ ಕ್ರೇಟಾ (Hundai Creta) ಕಾರಿನ ಪ್ರೈಝ್ ರೇಂಜ್‌ 10 - 20 ಲಕ್ಷ ರೂಪಾಯಿ ಆಗಿದೆ. ಈ ಕಾರು ಖರೀದಿಸುವ ಮೂಲಕ ನಟಿ ದುಬಾರಿ ಕಾರಿನ ಒಡತಿಯಾಗಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories