Come Back: ದೊರೆಸಾನಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ರೂಪಿಕಾ!

First Published | Nov 15, 2021, 5:02 PM IST

ವಿಭಿನ್ನ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮತ್ತೆ ಕಮ್‌ ಬ್ಯಾಕ್ ಮಾಡಿದ ನಟಿ ರೂಪಿಕಾ. ದೀಪಿಕಾ ಪಾತ್ರ ನೋಡಲು ರೆಡಿ ನಾ? 

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗುತ್ತಿದೆ. 'ದೊರೆಸಾನಿ' (Dorasaani) ಧಾರಾವಾಹಿಯಲ್ಲಿ ನಟಿ ರೂಪಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಮಿಲನ್ ಪ್ರಕಾಶ್ (Milana Prakash) ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ರೂಪಿಕಾಗೆ ಜೋಡಿಯಾಗಿ ಪೃಥ್ವಿ ರಾಜ್‌ (Prithvi Raj) ನಟಿಸುತ್ತಿದ್ದಾರೆ. 

Tap to resize

'ಕೆಲವರಿಗೆ ಗೊತ್ತಿಲ್ಲ ನಾನು ವೃತ್ತಿ ಜೀವನ ಶುರು ಮಾಡಿದ್ದು ಬದುಕು, ಬೆಳ್ಳಿ ಚುಕ್ಕಿ, ಅವಳ ಮನೆ ಧಾರಾವಾಹಿ ಮೂಲಕ ಆನಂತರ ಚೆಲುವಿನ ಚಿತ್ತಾರ (Cheluvin Chittara) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, 'ಎಂದು ನಟಿ ರೂಪಿಕಾ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. 

'ಇತ್ತೀಚಿನ ದಿನಗಳಲ್ಲಿ ಕಿರುತೆರೆ ದೊಡ್ಡ ಬದಲಾವಣೆ ಕಂಡಿದೆ. ನನ್ನ ಮೊದಲು ಅವಕಾಶ ಕೊಟ್ಟ ಜಾಗಕ್ಕೆ ಮತ್ತೆ ಬರುವುದಕ್ಕೆ ಸಂತೋಷವಾಗುತ್ತಿದೆ,' ಎಂದು ಹೇಳಿದ್ದಾರೆ. 

'ಮನೆಯ ಮುದ್ದಿನ ಮಗಳು ದೀಪಿಕಾ (Deepika) ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ. ಎಲ್ಲರನ್ನೂ ಆಕೆ ಗೌರವಿಸುತ್ತಾಳೆ. ಅದರಲ್ಲೂ ತಂದೆ ಅಂದರೆ ಪ್ರಪಂಚ.'

'ವಿದ್ಯಾಭ್ಯಾಸ ಮುಗಿಸಿ ಮನೆ ನೋಡಿಕೊಳ್ಳಲು ಕೆಲಸ ಹುಡುಕುತ್ತಿರುತ್ತಾಳೆ. ಈ  ನಡುವೆ ಪ್ರೀತಿಯಲ್ಲಿ ಬಿದ್ದು ಕತೆಗೆ ದೊಡ್ಡ ತಿರುವು ಸಿಗುತ್ತದೆ,' ಇದು ದೊರೆಸಾನಿಯ ಪಾತ್ರದ ವಿಶೇಷ.

ಇತ್ತೀಚಿಗೆ 3rd ಕ್ಲಾಸ್ ಸಿನಿಮಾದಲ್ಲಿ ಕಾಣಿಸಿಕೊಂಡ ರೂಪಿಕಾ ಡೈಮೆಂಡ್ ಕ್ರಾಸ್‌ ರಿಲೀಸ್‌ಗೆ ಕಾಯುತ್ತಿದ್ದಾರೆ. ತಮಿಳಿನ Chill Broದಲ್ಲಿ ನಟಿಸಿದ್ದಾರೆ.

Latest Videos

click me!