ಹಿಂದಿ ಸೀರಿಯಲ್’ನಿಂದ ಹೊರಬಿದ್ರಾ ಕನ್ನಡತಿ Ashika Padukone… ಪೋಸ್ಟ್ ವೈರಲ್ !

Published : Feb 11, 2026, 06:04 PM IST

Ashika Padukone: ಇತ್ತೀಚೆಗಷ್ಟೆ ಹಿಂದಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ತೆಲುಗು ಕಿರುತೆರೆಯ ಜನಪ್ರಿಯ ನಟಿ, ಕನ್ನಡತಿ ಆಶಿಕಾ ಪಡುಕೋಣೆ ಹಿಂದಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಸತ್ಯವೋ ಎನ್ನುವ ಬಗ್ಗೆ ಮಾಹಿತಿ ಇಲ್ಲ.

PREV
16
ಆಶಿಕಾ ಪಡುಕೋಣೆ

ಕನ್ನಡ ಕಿರುತೆರೆಯಲ್ಲಿ ನಟನೆಯನ್ನು ಆರಂಭಿಸಿ, ಬಳಿಕ ತೆಲುಗು ಕಿರುತೆರೆಯಲ್ಲಿ ನಟಿಸಿ, ಜನಪ್ರಿಯತೆ ಪಡೆದ ನಟಿ ಆಶಿಕಾ ಪಡುಕೋಣೆ. ತೆಲುಗಿನ ಜನಪ್ರಿಯ ಧಾರಾವಾಹಿ ‘ತ್ರಿನಯನಿ’ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಂಡಿದ್ದರು ಆಶಿಕಾ. ಅಲ್ಲಿಂದ ಹಿಂದಿ ಧಾರಾವಾಹಿಯೂ ಎಂಟ್ರಿ ಕೊಟ್ಟಿದ್ದರು.

26
ಹಿಂದಿ ಕಿರುತೆರೆಗೆ ಅದ್ಧೂರಿ ಎಂಟ್ರಿ

ಕನ್ನಡ ಕಿರುತೆರೆ ನಟಿಯರು ಹಿಂದಿ ಕಿರುತೆರೆಗೆ ಎಂಟ್ರಿ ಕೊಡೋದು ತುಂಬಾನೆ ಕಡಿಮೆ. ಆದರೆ ಆಶಿಕಾ ಕನ್ನಡದಿಂದ ತೆಲುಗಿಗೆ, ತೆಲುಗಿನಿಂದ ಸೀದಾ ಹಿಂದಿ ಸೀರಿಯಲ್ ಮೂಲಕ ಹಿಂದಿ ಕಿರುತೆರೆಗೆ ಅದ್ಧೂರಿಯಾಗಿಯೇ ಎಂಟ್ರಿ ಕೊಟ್ಟರು. ಎರಡು ತಿಂಗಳಿಂದ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

36
ಶಹಜಾದಿ ಹೈ ತೂ ದಿಲ್​ ಕೀ

ಸದ್ಯ ಆಶಿಕಾ ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ‘ಶಹಜಾದಿ ಹೈ ತೂ ದಿಲ್​ ಕೀ’ ಧಾರಾವಾಹಿಯಲ್ಲಿ ನಾಯಕಿ ಆಗಿ ನಟಿಸುತ್ತಿದ್ದಾರೆ. ಈ ಕಥೆ ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ‘ಶಾರದೆ’ ಕಥೆಯನ್ನೇ ಹೋಲುತ್ತದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿ ಪ್ರಕಾರ ಆಶಿಕಾ ಧಾರಾವಾಹಿಯಿಂದ ಔಟ್ ಆಗಿದ್ದಾರಂತೆ.

46
ಏನು ಹೇಳುತ್ತಿದೆ ವೈರಲ್ ಪೋಸ್ಟ್?

ಶಹಜಾದಿ ಹೈ ತೂ ದಿಲ್​ ಕೀ ಧಾರಾವಾಹಿಯಲ್ಲಿ ಆಶಿಕಾ ಪಡುಕೋಣೆ ನಟಿಸುತ್ತಿದ್ದ ಪಾತ್ರವನ್ನು ಇನ್ನು ಮುಂದೆ ಮೇಘಾ ಚಕ್ರವರ್ತಿ ಮಾಡಲಿದ್ದಾರೆ ಎನ್ನುವ ವರದಿ ಲಭ್ಯವಿದೆ ಎಂದು ವೈರಲ್ ಪೋಸ್ಟ್ ತಿಳಿಸಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

56
ವೀಕ್ಷಕರು ಏನು ಹೇಳುತ್ತಿದ್ದಾರೆ?

ಈ ಸುದ್ದಿ ನೋಡಿ ವೀಕ್ಷಕರು ಶಾಕ್ ಆಗಿದ್ದು, ಈ ರೀತಿ ಕಾಮೆಂಟ್ ಮಾಡಿದ್ದಾರೆ

  • ದಕ್ಷಿಣ ಭಾರತದ ತಾರೆ ಆಶಿಕಾರನ್ನು ಬದಲಾಯಿಸುವುದಾದರೆ ಅವರನ್ನು ಏಕೆ ಆಯ್ಕೆ ಮಾಡಿದ್ದು? ತೆಲುಗು ಹಿನ್ನೆಲೆಗೆ ಅವರು ಸೂಕ್ತವಾಗಿ ಹೊಂದಿಕೆಯಾಗಿದ್ದರು.
  • ಪಾತ್ರ ಬದಲಾಯಿಸಬೇಡಿ ದೀಪಾ ಪಾತ್ರಕ್ಕೆ ಆಶಿಕಾ ಪರ್ಫೆಕ್ಟ್ ಆಯ್ಕೆ
  • ಸೀರಿಯಲ್ ಫ್ಲಾಪ್ ಆಗುತ್ತಿದ್ದಂತೆ ನಾಯಕಿಯನ್ನು ಬದಲಾಯಿಸೋದು ಯಾಕೆ ಎಂದು ಜನ ಕೇಳಿದ್ದಾರೆ. ಇದು ಆಶಿಕಾಗೆ ಮಾಡಿದ ಅವಮಾನ ಅಂತಾನು ಹೇಳಿದ್ದಾರೆ.
66
ಆಶಿಕಾ ಪಡುಕೋಣೆ ಪೋಸ್ಟ್

ಇನ್ನು ಇದೆಲ್ಲಾ ಊಹಾಪೋಹಗಳ ಮಧ್ಯೆ, ಆಶಿಕಾ ಪಡುಕೋಣೆ ಸೀರಿಯಲ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಸ್ಟೋರಿ ನೋಡಿದ್ರೆ, ಶೂಟಿಂಗ್ ಸೆಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ರೆ ನಿಜಾ ಯಾವುದು? ಕಾದು ನೋಡಬೇಕಷ್ಟೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories