ಬಣ್ಣದ ಲೋಕಕ್ಕೆ ಕಾಲಿಡುವುದು ಸ್ವಲ್ಪ ಕಷ್ಟ. ಆದರೆ ಕಾಲಿಟ್ಟ ಮೇಲೆ ಅಲ್ಲೇ ಉಳಿದುಕೊಳ್ಳುವುದು ಮತ್ತೊಂದು ಸಾಹಸ. ನಟನಾಗಿ ಕೆಲವು ವರ್ಷಗಳ ಕಾಲ ಮಾತ್ರ ಫೇಮ್ ಇರುತ್ತದೆ. ಆದರೆ ನಿರ್ಮಾಪಕರಾಗಿ ಸದಾ ಜೀವಿಸುತ್ತಾರೆ. ನಿರ್ಮಾಪಕರಾಗಿರುವ ನಟ, ನಟಿಯರಿವರು.
ರಮೇಶ್ ಅರವಿಂದ್: ನಟ ರಮೇಶ್ ಅರವಿಂದ್ (Ramesh Aravind) ಬಿಗ್ ಬಜೆಟ್ ಸಿನಿಮಾಗಳು ಮಾತ್ರವಲ್ಲದೇ ಧಾರಾವಾಹಿಗಳನ್ನೂ ನಿರ್ಮಿಸುತ್ತಾರೆ. ನಂದಿನಿ (Nandini) ಎರಡನೇ ಭಾಗ ನಿರ್ಮಾಣ ಮಾಡಿದ ರಮೇಶ್, ಸದ್ಯ ಸುಂದರಿ (Sundari) ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ.
ಸ್ವಪ್ನ ಕೃಷ್ಣ: ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸ್ವಪ್ನ (Swapna Krishna) ಸುಬ್ಬಲಕ್ಷ್ಮಿ ಸಂಸಾರ ನಿರ್ಮಾಣ ಮಾಡಿದ್ದಾರೆ ಹಾಗೂ ಈಗ ಸತ್ಯ (Sathya) ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ (Pailwan) ಚಿತ್ರವನ್ನೂ ಸ್ವಪ್ನ ಅವರೇ ನಿರ್ಮಾಣ ಮಾಡಿದ್ದು.
47
ದಿಲೀಪ್ ರಾಜ್: ಆರ್‌ಜೆ ಆಗಿ ಕೆಲಸ ಮಾಡಿದ ದಿಲೀಪ್ (Dilip Raj) ವಿದ್ಯಾ ವಿನಾಯಕ, ಪಾರು (Paru) ಮತ್ತು ಹಿಟ್ಲರ್ ಕಲ್ಯಾಣ (Hitlery Kalyana) ನಿರ್ಮಾಣ ಮಾಡುತ್ತಿದ್ದಾರೆ.
57
ನಿರ್ಮಲಾ ಚೆನ್ನಪ್ಪ: ರಾಜ್ಯ ಪ್ರಶಸ್ತಿ ಪಡೆದಿರುವ ನಟಿ ನಿರ್ಮಲಾ ಚೆನ್ನಪ್ಪ (Niramapa Chennappa) ಅವರು ಕನ್ನಡ ಸಂಗೀತ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾರೆ. ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್‌ನಲ್ಲಿ ಹೆಚ್ಚಾಗಿ ಅವಕಾಶ ನೀಡುತ್ತಾರೆ.
67
ಜಗನ್ನಾಥ್ ಚಂದ್ರಶೇಖರ್: ಸೀತಾ ವಲ್ಲಭ ಧಾರಾವಾಹಿಯಲ್ಲಿ ನಟಿಸುವಾಗ ಜಗನ್, 'ರಕ್ಷಾ ಬಂಧನ' ನಿರ್ಮಾಣ ಮಾಡಿದ್ದರು, ಆನಂತರ ಈಗ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಲಕ್ಷಣ ಧಾರಾವಾಹಿಯಲ್ಲಿಯೂ ನಟಿಸಿ, ನಿರ್ಮಾಣದ ಹೊಣೆಯೂ ಹೊತ್ತಿದ್ದಾರೆ.
77
ರಕ್ಷ್: ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಾ ನಟ ವೇದಾಂತ್ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಂಪೂರ್ಣ ನಿರ್ಮಾಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.