'ಲಕ್ಷಣ' ಧಾರಾವಾಹಿ ನಟಿ ಶ್ವೇತಾ ಧರಿಸುವ ಉಡುಪುಗಳು ಎಷ್ಟು ಸ್ಟೈಲಿಷ್ ನೋಡಿ...

First Published | Mar 5, 2022, 4:04 PM IST

ಶ್ವೇತಾ ಮುಂಗೋಪಿ ಆದರೂ ಅವಳು ಮುದ್ದು ಮುದ್ದು ಎಂದು ವೀಕ್ಷಕರು ಆಗಾಗ ಕಾಮೆಂಟ್ ಮಾಡುತಲೇ ಇರುತ್ತಾರೆ. ಹೆಣ್ಣು ಮಕ್ಕಳ ಕಣ್ಣು ಆಕೆ ಧರಿಸುವ ಡಿಸೈನರ್ ಉಡುಪುಗಳ ಮೇಲಿರುತ್ತದೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜರ್ನಿ ಆರಂಭಿಸಿದ ಸುಕೃತಾ ಸದಾ ಮನೆ ಮಗಳು ಎಂಬ ಭಾವನೆ ನೀಡುತ್ತಾರೆ. ಸದಾ ಚೂಡಿದಾರ ಧರಿಸಿ ಪಟಪಟ ಅಂತ ಮಾತನಾಡುತ್ತಿದ್ದರು.

Tap to resize

ಒಳ್ಳೆ ಹುಡುಗಿ ಅಂಜಲಿ ಆಗಿ ನೋಡಿದವರಿಗೆ ವಿಲನ್ ಶ್ವೇತಾ ಪಾತ್ರದಲ್ಲಿ ನೋಡುತ್ತಿರುವುದಕ್ಕೆ ತುಂಬಾನೇ ಡಿಫರೆನ್ಸ್‌ ಫೀಲ್ ಆಗುತ್ತಿದೆ. ಸುಕೃತಾ ಅವರ ಅಭಿನಯ ತುಂಬಾನೇ ಇಮ್ರೂವ್ ಆಗಿ ಎನ್ನುತ್ತಾರೆ ವೀಕ್ಷಕರು.

ಶ್ವೇತಾ ಸಿರಿವಂತ ಹುಡುಗಿ, ಹೀಗಾಗಿ ತುಂಬಾನೇ ಮಾಡರ್ನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದು ದಿನ ಸೂಟ್ ಆಂಡ್ ಬ್ಲೇಜರ್ ಆದರೆ ಮತ್ತೊಂದು ದಿನ ಸಣ್ಣ ಗೌನ್ ಧರಿಸಿರುತ್ತಾರೆ. 

ಶ್ವೇತಾ ಚಂದ್ರುಶೇಖರ್ ಮಗಳು ಅಲ್ಲ ಅನ್ನುವ ಸತ್ಯ ಗೊತ್ತಾದ ದಿನದಿಂದಲೂ ಭೂಪತಿನ ಬೇಗ ಮದುವೆ ಆಗಬೇಕು ಎನ್ನುವ ಪ್ಲ್ಯಾನ್ ಮಾಡುತ್ತಿದ್ದಾಳೆ. 

ನಕ್ಷತ್ರ ನಿಜವಾದ ಮಗಳು ಎಂದು ತಿಳಿಯುತ್ತಿದ್ದಂತೆ ಶ್ವೇತಾ ತಂದೆಯನ್ನು ಕೊಲ್ಲು ಪ್ರಯತ್ನ ಮಾಡುತ್ತಾರೆ. ಆದರೆ ಭೂಪತಿ ಮೇಲೆ ನಕ್ಷತ್ರಾಗೆ ಪ್ರೀತಿಯಿದೆ ಎನ್ನುವ ಸತ್ಯ ತಿಳಿದುಕೊಂಡು ಆಟ ಆಡುವುದಕ್ಕೆ ಶುರು ಮಾಡಿದ್ದಾರೆ.

Latest Videos

click me!