ಕೊನೆಗೂ ಕೀರ್ತಿಯನ್ನು ಕೊಂದ ಸತ್ಯ ಒಪ್ಕೊಂಡ ಕಾವೇರಿ… ಇದು ಸುಳ್ಳಾದ್ರೆ ಡೈರೆಕ್ಟರನ್ನೇ ಪರ್ವತದಿಂದ ತಳ್ತೀವಿ ಎಂದ ಜನ !

First Published | Oct 11, 2024, 2:56 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೊನೆಗೂ ಕಾವೇರಿ, ತನ್ನ ಮಗನ ಎದುರೇ ಕಾವೇರಿಯನ್ನು ಕೊಂದಿದ್ದು ತಾನೇ ಎನ್ನುವ ಸತ್ಯ ಒಪ್ಪಿಕೊಂಡಿದ್ದಾಳೆ. ಆದ್ರೆ ಇಷ್ಟು ಸುಲಭವಾಗಿ ಕಾವೇರಿ ಸತ್ಯ ಒಪ್ಪಿಕೊಂಡಿರೋದು ನೋಡಿ ಇದು ಕನಸು ಅಂತಿದ್ದಾರೆ ನೆಟ್ಟಿಗರು,.
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕಾವೇರಿಯ ಸತ್ಯ ಇವತ್ತು ರಿವೀಲ್, ಇವತ್ತು ಆಗುತ್ತೆ ಅಂತ ಕಳೆದ ಒಂದು ತಿಂಗಳುಗಳಿಂದ ಕಾಯುತ್ತಾ ಕುಳಿತ ವೀಕ್ಷಕರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ ಯಾಕಂದ್ರೆ ಕೊನೆಗೂ ಕಾವೇರಿ ಕೀರ್ತಿನ ಕೊಂದಿದ್ದು ತಾನೆ ಎಂದು ಒಪ್ಕೊಂಡಿದ್ದಾಳೆ. 
 

ಲಕ್ಷ್ಮೀ ಮತ್ತು ವೈಷ್ಣವ್ ನ (Lakshmi and Vaishnav) ಹನಿಮೂನ್ ಗೆ ಕಳುಹಿಸಿ, ಇನ್ನೊಂದು ಕಡೆ ತಾನು ಎಲ್ಲಾ ಸಾಕ್ಷಿಗಳನ್ನು ಮುಗಿಸೋಕೆ ಹೊರಟು ನಿಂತು ಮಹಾದೇವಯ್ಯನನ್ನು ಹುಡುಕಿ ಮಂದಾರಬೆಟ್ಟದ ಕಡೆಗೆ ಹೊರಟ ಕಾವೇರಿ, ಅಲ್ಲಿ ಮಾದೇವಯ್ಯನನ್ನು ಮುಗಿಸೋದಕ್ಕೆ ಪ್ಲ್ಯಾನ್ ಮಾಡೊವಷ್ಟರಲ್ಲಿ ಲಕ್ಷ್ಮೀ, ವೈಷ್ಣವ್ ನನ್ನು ಕರೆದುಕೊಂಡು ಬೆಟ್ಟಕ್ಕೆ ಬಂದಾಗಿದೆ. 
 

Tap to resize

ವೈಷ್ಣವ್ ಗೆ ಅಮ್ಮನ ಅಸಲಿ ಮುಖದ ಒಂದೊಂದು ಗುರುತುಗಳು ಕಾಣಿಸೋದಕ್ಕೆ ಶುರುವಾಗಿದೆ. ಇದೀಗ ರಿವೀಲ್ ಆಗಿರುವ ಪ್ರೊಮೋ ನೋಡಿ ನೆಟ್ಟಿಗರಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಲಕ್ಷ್ಮೀಯನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋಗಿರುವ ಕಾವೇರಿಗೆ, ಲಕ್ಷ್ಮೀ ನಿಜ ಹೇಳಿ ಕೀರ್ತಿಗೆ ಏನ್ ಮಾಡಿದ್ರಿ ಅನ್ನೋದನ್ನ ಪದೇ ಪದೇ ಕೇಳುವ ಮೂಲಕ, ಕೋಪಗೊಂಡ ಕಾವೇರಿ, ಹೌದು ನಾನೇ ಕೀರ್ತಿಯನ್ನು ಕೊಂದಿದ್ದು ಎನ್ನುತ್ತಾಳೆ. 
 

ಅಷ್ಟರಲ್ಲಿ ಅಲ್ಲಿಗೆ ವೈಷ್ಣವ್ ಬಂದಾಗ ತಕ್ಷಣ ಲಕ್ಷ್ಮೀ ರೀ ನಾನು ನಿಮಗೆ ಹೇಳಿಲ್ವಾ ಅತ್ತೇನೆ ಕೀರ್ತಿಗೆ ಏನೋ ಮಾಡಿದ್ದಾರೆ ಅಂತ, ಈವಾಗ ಅತ್ತೆ ಬಾಯಿಂದಾನೆ ನಿಜ ಬಂದಿದೆ ಅಂತಾಳೆ. ಇದನ್ನ ಕೇಳಿ ವೈಷ್ಣವ್ ಗೂ ಶಾಖ್ ಆಗುತ್ತೆ. ಆದ್ರೆ ಅಲ್ಲಿ ಮಗನನ್ನು ನಿರೀಕ್ಷಿಸಿರದ ಕಾವೇರಿಗೆ ಮಗನನ್ನು ನೋಡಿ ಶಾಕ್ ಆಗಿ ಚಡಪಡಿಸುತ್ತಾಳೆ, ಆದರೆ ಮತ್ತೆ ಎಲ್ಲಾ ಬದಲಾಗುತ್ತೆ. 
 

ಹೌದು ಎಲ್ಲಾ ಮಾಡಿದ್ದು ನಾನು, ಕೀರ್ತಿನ ಸಾಯಿಸಿದ್ದು ನಾನು, ವೈಷ್ಣವ್ ನಿಂದ ಕೀರ್ತಿನ ದೂರ ಮಾಡಿದ್ದು ನಾನೇ ಎನ್ನುತ್ತಾಳೆ. ಅಷ್ಟೇ ಅಲ್ಲ ಏನ್ ಮಾಡ್ತೀರಾ ನೀವು ಜೈಲಿಗೆ ಕಳುಹಿಸ್ತೀರಾ ಕಳಿಸಿ, ಶಿಕ್ಷೆ ಕೊಡಿಸ್ತೀರಾ ಕೊಡಿಸಿ ಅಂತಾಳೆ. ಇದನ್ನೆಲ್ಲಾ ನೋಡ್ತಿದ್ರೆ, ಕಾವೇರಿ ಯಾವತ್ತೂ ಮಗನ ಮುಂದೆ ತನ್ನ ಬಂಡವಾಳವನ್ನು ಬಿಟ್ಟು ಕೊಡುವವಳೇ ಅಲ್ಲ, ಆದ್ರೆ ಇದನ್ನೆಲ್ಲಾ ಇಷ್ಟು ಸುಲಭವಾಗಿ ಹೇಳ್ತಿದ್ದಾಳೆ ಅಂದ್ರೆ ಇದು ಕನಸಾ ಅಂತ ಕೇಳ್ತಿದ್ದಾರೆ ಜನ. 
 

ಇಷ್ಟೇಲ್ಲಾ ಮಾಡಿ, ಇದು ಕನಸು ಅಂತ ಮಾತ್ರ ಹೇಳ್ಬೇಡಿ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಒಬ್ಬರು ಕಾಮೆಂಟ್ ಮಾಡಿ ಮತ್ತೆ ಈವಾಗ ಇನ್ನೇನಾದರೂ ಹೇಳಿ ಕಾವೇರಿ ಮತ್ತೆ ಬಚಾವ್ ಆಗ್ತಾಳೆ, ಅಷ್ಟೇ ಆಗೋದು.  ಇಲ್ಲಿ ಕಾವೇರಿಗಿಂತ ಈ ಕಥೆ ಬರೀತಾ ಇರೋರ್ದು ಇನ್ನೆಂತ ಕ್ರಿಮಿನಲ್ ಮೈಂಡ್ ಇರ್ಬೋದು ಅನ್ನಿಸ್ತು ನೆನ್ನೆ ಎಪಿಸೋಡ್ ನೋಡಿ . ಅದು ಹೆಂಗ್ ಫ್ರಾಕ್ಷನ್ ಆಫ್ ಸೆಕೆಂಡ್ ಅಲ್ಲಿ ಕಾವೇರಿ ಪ್ಲೇಟ್ ಚೇಂಜ್ ಮಾಡಿಬಿಟ್ಟಳು. ಇದನ್ನು ಕೂಡ ಕನಸು ಅಥವಾ ಕಾವೇರಿ ಮಾತು ಬದಲಾಯಿಸಿಬಿಟ್ರೆ ನಾವೇ ಡೈರೆಕ್ಟರನ್ನ ಆ ಬೆಟ್ಟದಿಂದ ಕೆಳಗೆ ನೂಕ್ತೀವಿ ಅಷ್ಟೇ ಎಂದಿದ್ದಾರೆ. 
 

ಸುಮ್ನೆ ಎಲ್ಲಾ ನಿಜ ಗೊತ್ತಾಗುತ್ತೆ ಅನ್ನೋ ತರ ಬಿಲ್ಡಪ್ ಕೊಡೋದು ಆದ್ರೆ ಕೊನೆಗೆ ಯಾರಿಗೆ ಸತ್ಯ ಗೊತ್ತಾಗ್ಬೇಕೋ ಅವರಿಗೆ ಗೊತ್ತಾಗಿರಲ್ಲ ಅಂತಾನೂ ಹೇಳಿದ್ದಾರೆ ಜನ. ಇನ್ನೂ ಕೆಲವರು, ಏನ್ ಬೇಕಾದ್ರೂ ಆಗ್ಲಿ ಮೊದಲು ಕೀರ್ತಿಯನ್ನ ಕರೆಯಿಸಿ, ಕೀರ್ತಿಯನ್ನು ಸೀರಿಯಲ್ ನಲ್ಲಿ ನೋಡದೇ ತುಂಬಾನೆ ದಿನ ಆಗಿದೆ.  ಬೇಗ ಅವರನ್ನ ಕರೆಯಿಸಿ ಬಿಡಿ ಸಾಕು ಅಂತಿದ್ದಾರೆ. ಏನಾಗುತ್ತೆ ಅನ್ನೋದನ್ನ ಕಾದು ನೋಡೋಣ. 
 

Latest Videos

click me!