ಕನ್ನಡ ಸೀರಿಯಲ್ ಗಳಾದ ಜೋಗುಳ, ಕಿನ್ನರಿ, ಜೋಕಾಲಿ ಸೀರಿಯಲ್ ಗಳಲ್ಲಿ ಸಿಂಪಲ್ ಹುಡುಗಿಯಾಗಿ ನಟಿಸಿದ್ದ ಜ್ಯೋತಿ ರೈ , ಕನ್ನಡ ಸಿನಿಮಾದಲ್ಲೂ ಮಿಂಚಿದ್ದರು, ನಂತರ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟು, ಅಲ್ಲಿಯೂ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಇದೀಗ ತೆಲುಗು ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ಬೋಲ್ಡ್ ಅವತಾರಗಳಲ್ಲಿ ಕಾಣಿಸುತ್ತಿದ್ದಾರೆ ಎನ್ನಲಾಗಿದೆ.