ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನಸ ಮನೋಹರ್… ಎರಡನೇ ಮದ್ವೆ ಬಗ್ಗೆ ನಟಿ ಹೇಳಿದ್ದೇನು?

Published : Nov 07, 2024, 03:42 PM ISTUpdated : Nov 07, 2024, 03:46 PM IST

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಆಗಿ ನಟಿಸಿ ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇ ಗೌಡ್ರ ಅತ್ತಿಗೆಯಾಗಿ ನಟಿಸುತ್ತಿರುವ ಮಾನಸ ಮನೋಹರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾನಸ ಮದುವೆ ಸಂಭ್ರಮದ ಫೋಟೊಗಳು ವೈರಲ್ ಆಗ್ತಿವೆ.   

PREV
17
ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನಸ ಮನೋಹರ್… ಎರಡನೇ ಮದ್ವೆ ಬಗ್ಗೆ ನಟಿ ಹೇಳಿದ್ದೇನು?

ಇತ್ತೀಚೆಗಷ್ಟೇ ನಟಿ ಮಾನಸ ಮನೋಹರ್ (Manasa Manohar) ನಿಶ್ಚಿತಾರ್ಥ ಸಮಾರಂಭದ ಫೋಟೊಗಳನ್ನು ಹಂಚಿಕೊಂಡಿದ್ದರು. ಇದೀಗ ಮಾನಸ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಮದುವೆಯ ಫೋಟೊಗಳು, ಅರಶಿನ ಶಾಸ್ತ್ರದ ಫೋಟೊಗಳು ಇನ್’ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

27

ಮಾನಸ ಮದುವೆಯಾಗಿರುವ ಹುಡುಗನ ಹೆಸರು ಪ್ರೀತಂ ಚಂದ್ರ. ಇವರು ಫುಟ್ ಬಾಲ್ ಪ್ಲೇಯರ್ ಆಗಿದ್ದು, ಫುಟ್ ಬಾಲ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ ಅನ್ನೋದು ಇವರ ಸೋಶಿಯಲ್ ಮೀಡಿಯಾ ನೋಡಿದ್ರೆ ಗೊತ್ತಾಗುತ್ತೆ. ಇದೀಗ ನಟಿ ಅದ್ಧೂರಿಯಾಗಿ ಮದುವೆಯಾಗಿದ್ದು, ನನಗೆ ನನ್ನ ಸೋಲ್ ಮೆಟ್ ಸಿಕ್ಕಿದ್ದಾರೆ ಎಂದು ಈ ಹಿಂದೆ ಮಾನಸ ಹೇಳಿಕೊಂಡಿದ್ದರು. 

37

ಮದುವೆ ಶಾಸ್ತ್ರದಲ್ಲಿ ಮಾನಸ ಮನೋಹರ್ ಹಸಿರು ಬಾರ್ಡರ್ ಇರುವ ಬಿಳಿ ಬಣ್ಣದ ರೇಷ್ಮೇ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ್ರೆ, ಹಳದಿ ಶಾಸ್ತ್ರದಲ್ಲಿ ಕೆಂಪು ಬಾರ್ಡರ್ ಮತ್ತು ಬ್ಲೌಸ್ ಇರೋ ಹಳದಿ ಸೀರೆ ಧರಿಸಿದ್ದಾರೆ. ಇನ್ನು ರಿಸೆಪ್ಶನ್ ಗೆ ನಟಿ ಕೆಂಪು ಬಣ್ಣದ ಲೆಹೆಂಗಾ ಧರಿಸಿ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಇದು ಮಾನಸ ಮನೋಹರ್ ಅವರ ಎರಡನೆ ಮದುವೆಯಾಗಿದೆ. 
 

47

ಹೌದು, ಈಗಾಗಲೇ ನಟಿಗೆ ಮದುವೆಯಾಗಿದ್ದು (second wedding), ಮೊದಲ ಪತಿಯಿಂದ ಡಿವೋರ್ಸ್ ಪಡೆದಿರುವ ಮಾನಸ ಮನೋಹರ್ ಇದೀಗ, ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಶ್ಚಿತಾರ್ಥದ ಫೋಟೊ ಹಂಚಿಕೊಂಡಾಗ ಅಭಿಮಾನಿಗಳು ಇದು ನಿಮ್ಮ ಎರಡನೇಯ ಮದುವೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ನಟಿ ಕೂಡ ಅಷ್ಟೇ ಪಾಸಿಟಿವ್ ಆಗಿ ಉತ್ತರಿಸಿ, ಎರಡನೇ ಮದುವೆ ಯಾಕೆ? ಮೊದಲನೇ ಮದುವೆ ಏನಾಯ್ತು ಎನ್ನುವ ಬಗ್ಗೆ ಕೂಡ ಮಾಹಿತಿ ನೀಡಿದ್ದರು. 
 

57

ಹೌದು ಇದು ನನ್ನ ಎರಡನೇ ಮದುವೆ. ಜೀವನದಲ್ಲಿ ಕೆಲವೊಮ್ಮೆ  ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಆದರೂ ಎಲ್ಲರ ಒಳಿತಿಗಾಗಿ ಆ ಸಂಬಂಧವನ್ನು ಮುಂದುವರೆಸಬೇಕಾಗುತ್ತೆ. ಆದರೆ ಈಗ ನಾನು ನನ್ನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಮತ್ತು ನಾನು ಮದುವೆಯಾಗುತ್ತಿದ್ದೇವೆ. ಇದು ನನಗೆ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ. ಪ್ರತಿಯೊಬ್ಬರ ಪ್ರೀತಿಗೆ ಧನ್ಯವಾದಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು' . ನಿಮ್ಮನ್ನ ನಾನು ನನ್ನ ಕುಟುಂಬ ಅಂದುಕೊಂಡಿದ್ದೇನೆ. ಹಾಗಾಗಿ ನಿಮ್ಮ ಪ್ರಶ್ನೆಗೆ ನಾನು ಸಂತೋಷದಿಂದ ಉತ್ತರಿಸುತ್ತೇನೆ ಎಂದಿದ್ದರು.
 

67

ಇದೀಗ ನಟಿ ತಮ್ಮ ಹೊಸ ಜೀವನದ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಹಾಗಾಗಿ ಸಂಭ್ರಮದಿಂದ ತಮ್ಮ ಮದುವೆಯ ಪ್ರತಿ ಕ್ಷಣಗಳನ್ನು ಶೇರ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟಿಯ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಸೇರಿ ದೊಡ್ಡದಾಗಿ ಬ್ರೈಡ್ ಟು ಬಿ ಪಾರ್ಟಿ (bride to be party) ಮಾಡಿದ್ದರು. ಆ ಸಂಭ್ರಮದ ಕ್ಷಣಗಳ ವಿಡಿಯೋ, ಫೋಟೊಗಳನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದರು. 
 

77

ಇನ್ನು ಮಾನಸ ಮನೋಹರ್ ನಟನೆ ಬಗ್ಗೆ ಹೇಳೋದಾದರೆ ಸದ್ಯ ನಟಿ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಿದ್ದೇಗೌಡ್ರ ಅತ್ತಿಗೆಯಾಗಿ ನಟಿಸುತ್ತಿದ್ದಾರೆ, ಇದು ನೆಗೆಟೀವ್ ಶೇಡ್ ನ ಪಾತ್ರವಾಗಿದೆ. ಅಷ್ಟೇ ಅಲ್ಲ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲಿ ಐಶ್ವರ್ಯ ಸಿಂಧೋಗಿ ನಿರ್ವಹಿಸುತ್ತಿದ್ದ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯ ಬಳಿಕ ಸೀರಿಯಲ್ ಗಳಲ್ಲಿ ಮುಂದುವರೆಯುತ್ತಾರೆಯೇ? ಕಾದು ನೋಡಬೇಕು. 
 

Read more Photos on
click me!

Recommended Stories