ಪತಿ ಜೊತೆ ವಿದೇಶಕ್ಕೆ ಹಾರಿದ ರಾಮಚಾರಿ ವೈಶಾಖ; ಸೀರಿಯಲ್‌ ಬಿಟ್ಬಿಟ್ರಾ ಅಂತ ಕೇಳ್ತಿದ್ದಾರೆ ನೆಟ್ಟಿಗರು!

First Published | Nov 7, 2024, 10:08 AM IST

ಫುಲ್ ಜಾಲಿ ಜಾಲಿ ಮೂಡಿನಲ್ಲಿ ಐಶ್ವರ್ಯ ವಿನಯ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಫೋಟೋಗಳು.....
 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನಲ್ಲಿ ನಟಿ ಐಶ್ವರ್ಯ ವಿನಯ್‌ ಅತ್ತಿಗೆ 'ವೈಶಾಖ' ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ಐಶ್ವರ್ಯ ತಮ್ಮ ರಿಯಲ್ ಪತಿ ಜೊತೆ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. 

Tap to resize

ಐಶ್ವರ್ಯ ಅವರ ಪತಿ ವಿನಯ್ ಕೂಡ ಕಿರುತೆರೆ ನಟನಾಗಿದ್ದು ಸದ್ಯ ಬೆಳ್ಳಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೊಸ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಸದ್ಯ ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಂಡ್ ಫ್ಯಾಮಿಲಿ ಜೊತೆ ಐಶ್ವರ್ಯ ಫ್ಯಾಮಿಲಿ ವಿದೇಶ ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಫೋಟೋಶೂಟ್ ಮಾಡಿದ್ದಾರೆ.

'ಮೊದಲು ಇಂಟರ್‌ನ್ಯಾಷನಲ್ ಟ್ರಿಪ್. ಇದು ನಮ್ಮ ಏರ್‌ಪೋರ್ಟ್‌ ಲುಕ್‌. ಅದ್ಭುತವಾಗಿರುವ ಫೋಟೋಗಳು ಶೀಘ್ರದಲ್ಲಿ ಬರಲಿದೆ' ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ. 

ಅಯ್ಯೋ ವೈಶಾಖ ನಿನ್ನು ಜಾಲಿ ಮಾಡಲು ಟ್ರಿಪ್ ಹೊರಟಿರುವುದಾ ಅಥವಾ ಸೀರಿಯಲ್ ಬಿಟ್ಟು ಸಾಕಪ್ಪಾ ಅಂತ ಹೊರಟಿರುವುದು...ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೀವಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!