‘ಜೋಡಿ ನಂ 1’ಗೆ ತೀರ್ಪುಗಾರರಾಗಿ ಕಿರುತೆರೆಯ ಜನ ಮೆಚ್ಚಿದ ಜೋಡಿ ಗೌತಮ್ ದಿವಾನ್-ಭೂಮಿಕಾ ಎಂಟ್ರಿ!

Published : Apr 01, 2026, 01:00 PM IST

Jodi No 1: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ 1 ಗೆ ಮಾಳವಿಕಾ ಅವಿನಾಶ್ ಹಾಗೂ ಪ್ರೇಮ್ ಜೊತೆ ತೀರ್ಪುಗಾರರಾಗಿ ಕಿರುತೆರೆಯ ಜನಪ್ರಿಯ ಜೋಡಿಗಳಾದ ಭೂಮಿಕಾ ಮತ್ತು ಗೌತಮ್ ದಿವಾನ್ ಸೇರಿಕೊಂಡಿದ್ದಾರೆ.. ವೀಕ್ಷಕರು ಫುಲ್ ಖುಷ್. 

PREV
16
ಜೋಡಿ ನಂಬರ್ 1

ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ‘ಜೋಡಿ ನಂಬರ್ 1’ ಎನ್ನುವ ಜೋಡಿಗಳ ಸಂಬಂಧವನ್ನು ಸಂಭ್ರಮಿಸುವ ರಿಯಾಲಿಟಿ ಶೋ ಶುರುವಾಗಲಿದೆ. ಈ ಕಾರ್ಯಕ್ರಮಕ್ಕೆ ಹಳೆ ತೀರ್ಪುಗಾರರ ಜೊತೆಗೆ ಹೊಸ ಜಡ್ಜ್ ಗಳು ಕೂಡ ಸೇರಿದ್ದು. ಇದು ಕಿರುತೆರೆ ವೀಕ್ಷಕರ ಸಂಭ್ರಮವನ್ನು ಡಬಲ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಜೋಡಿ ನಂ 1 ಪ್ರೊಮೊ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

26
ಮಾಳವಿಕಾ-ಪ್ರೇಮ್ ಜೊತೆ ಕಿರುತೆರೆ ಜೋಡಿ

ಅಂದಹಾಗೆ ಇದೆ ಶನಿವಾರದಿಂದ ಅಂದರೆ ಏಪ್ರಿಲ್ 4ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ‘ಜೋಡಿ ನಂಬರ್ 1’ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ನಟ ನೆನಪಿರಲಿ ಪ್ರೇಮ್ ಹಾಗೂ ಜನಪ್ರಿಯ ನಟಿ ಮಾಳವಿಕಾ ಈ ಹಿಂದೆ ತೀರ್ಪುಗಾರರಾಗಿದ್ದರು. ಅವರು ಈ ಬಾರಿಯೂ ತೀರ್ಪುಗಾರರಾಗಿ ಮುಂದುವರೆದಿದ್ದಾರೆ. ಇವರ ಜೊತೆ ಕನ್ನಡ ಕಿರುತೆರೆಯ ಜನಪ್ರಿಯ ತಾರಾ ಜೋಡಿ ತೀರ್ಪುಗಾರರಾಗಿ ಸೇರಿಕೊಂಡಿದ್ದಾರೆ.

36
ಅಮೃತಧಾರೆಯ ಭೂಮಿ- ಗೌತಮ್

ಜೀ ಕನ್ನಡ ವಾಹಿನಿಯ ಬ್ಲಾಕ್ ಬಸ್ಟರ್ ಸೀರಿಯಲ್ ‘ಅಮೃತಧಾರೆ’ ಯಲ್ಲಿ ಗೌತಮ್ ದಿವಾನ್ ಹಾಗೂ ಭೂಮಿಕಾ ಪಾತ್ರದ ಮೂಲಕ ಕನ್ನಡಿಗರ ಮನ ಹಾಗೂ ಪ್ರತಿ ಮನೆಯನ್ನು ಗೆದ್ದಿರುವ ಕಿರುತೆರೆಯ ಬೆಸ್ಟ್ ಜೋಡಿಗಳಾದ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ನಟರಂಗ ಅವರು ಈ ಬಾರಿ ‘ಜೋಡಿ ನಂಬರ್ 1’ ಜಡ್ಜ್ ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಅಭಿಮಾನಿಗಳಲ್ಲೂ ಕೂಡ ಕುತೂಹಲ ಹೆಚ್ಚಾಗಿದೆ.

46
ಕಿರುತೆರೆಯ ಜನಪ್ರಿಯ ಜೋಡಿ

ಕನ್ನಡ ಕಿರುತೆರೆಯಲ್ಲಿ ಪ್ರಬುದ್ಧ ಪ್ರೇಮ ಕಾವ್ಯಕ್ಕೆ ಹೆಸರಾದಂತಹ ಜೋಡಿ ಭೂಮಿ ಹಾಗೂ ಗೌತಮ್ ಅವರದ್ದು. ಇವರಿಬ್ಬರ ನಟನೆ ಕೂಡ ಅಷ್ಟೇ ಅದ್ಭುತ. ಹಾಗಾಗಿ ಪ್ರತಿ ಮನಸ್ಸನ್ನು ಕೂಡ ಈ ಜೋಡಿಯ ನಟನೆ ಗೆದ್ದಿದೆ. ಗಂಡ -ಹೆಂಡತಿ ಎಂದರೆ ಹೀಗೆ ಇರಬೇಕು, ಎನ್ನುವಷ್ಟು ಅದ್ಭುತವಾದ ಜೋಡಿ ಇವರದ್ದು. ಹಾಗಾಗಿಯೇ ಜನಪ್ರಿಯ ಜೋಡಿ ಈ ಬಾರಿ ‘ಜೋಡಿ ನಂಬರ್ 1’ತೀರ್ಪುಗಾರರಾಗಿ ಮಾಳವಿಕಾ ಹಾಗೂ ಪ್ರೇಮ್ ಜೊತೆ ಸೇರಿಕೊಂಡಿದ್ದಾರೆ.

56
ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ?

ಈ ಬಾರಿಯೂ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡಲಿದ್ದಾರೆ. ಜೋಡಿಗಳಾದ ಧನರಾಜ್ ಆಚಾರ್ -ಪ್ರಜ್ಞಾ, ರಜಿನಿ -ಅರುಣ್ ಗೌಡ, ರುದ್ರ ಮಾಸ್ಟರ್ -ನಿರೀಕ್ಷಾ,ಕೋಟೆ ಪ್ರಭಾಕರ್ -ಮಾಲತಿ , ಗೀತಾ ಭಾರತಿ - ಜಯರಾಮ್, ಮಿಮಿಕ್ರಿ ಗೋಪಿ- ಉಷಾ ರಾಣಿ, ಬಾಳು ಬೆಳಗುಂದಿ-ಮಾಲಾಶ್ರೀ, ಅಭಿಲಾಷ್- ಅಪೂರ್ವ, ಜಗ್ಗಪ್ಪ -ಸುಷ್ಮಿತಾ, ನಯನಾ ನಾಗರಾಜ್ -ಸುಹಾಸ್ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

66
ವೀಕ್ಷಕರು ಏನಂತಾರೆ?

ಈ ಬಾರಿ ರಿಯಾಲಿಟಿ ಶೋನಲ್ಲಿ ತಮ್ಮ ಮೆಚ್ಚಿನ ಗುಂಡು-ಭೂಮಿನಾ ನೋಡಿ ಖುಷಿ ಪಟ್ಟಿರುವ ವೀಕ್ಷಕರು, ಈ ಸಾರಿ ನಮ್ ಭೂಮಿ ಗೌತಮ್ ಇದಾರೆ ಅಂತ ಶೋ ನೋಡ್ತಿವಿ. ಯಾವ್ ಪ್ರೋಗ್ರಾಮ್ ಮಾಡಿದ್ರು ಭೂಮಿ ಗುಂಡು ನಾ ಮಿಸ್ ಮಾಡ್ತಿದ್ವಿ. ತುಂಬಾ ಬೇಜಾರ್ ಆಗ್ತಿತ್ತು. ಆದ್ರೆ ಈ ಶೋಗಾದ್ರು ಜಡ್ಜಸ್ ಆಗಿ ಕರ್ಸಿದೀರಾ ಖುಷಿ ಆಗ್ತಿದೆ. ನಾವ್ ಅಂತು ಮಿಸ್ ಮಾಡ್ದೆ ಶೋ ನೋಡ್ತಿವಿ ಎಂದಿದ್ದಾರೆ ಜನ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories