ಪ್ರೊಮೋ ಮೂಲಕ ಸದ್ದು ಮಾಡ್ತಿರೋ ‘ಶ್ರೀದೇವಿ ಮಹಾತ್ಮೆ’ ಸೀರಿಯಲ್ ಪಾರ್ವತಿ ಇವರೇ!

First Published | May 30, 2024, 5:40 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾದಲಿರುವ ಶ್ರೀದೇವಿ ಮಹಾತ್ಮೆ ಸೀರಿಯಲ್ ನಲ್ಲಿ ಪಾರ್ವತಿಯಾಗಿ ನಟಿಸಲಿದ್ದಾರೆ ‘ಅಪ್ಪ ಐ ಲವ್ ಯೂ’ ಸಿನಿಮಾ ಖ್ಯಾತಿಯ ಜೀವಿತಾ ವಸಿಷ್ಠ. 
 

ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಸದ್ಯದಲ್ಲೇ ಶುರುವಾಗುತ್ತಿರುವ ಶ್ರೀದೇವಿ ಮಹಾತ್ಮೆ ಧಾರಾವಾಹಿಯ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಪಾರ್ವತಿ ಜಗನ್ಮಾತೆಯಾದ ಕತೆಯನ್ನು ಪ್ರೊಮೋ ಮೂಲಕ ಅದ್ಬುತವಾಗಿ ತೋರಿಸಿಕೊಟ್ಟಿದ್ದು, ಸೀರಿಯಲ್ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ. 
 

ಈ ಹೊಸ ಸೀರಿಯಲ್‌ನಲ್ಲಿ ಕಾಣಿಸಿಕೊಂಡ ಪಾರ್ವತಿಯ ರೂಪ ಲಾವಣ್ಯ ಮತ್ತುನಟನೆ ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಜಗನ್ಮಾತೆ ಪಾರ್ವತಿ ಪಾತ್ರದಲ್ಲಿ "ಅಪ್ಪ ಐ ಲವ್ ಯೂ" ಸಿನಿಮಾ ಖ್ಯಾತಿಯ ಜೀವಿತಾ ವಸಿಷ್ಠ (Jeevitha Vashitha) ರವರು ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸೀರಿಯಲ್ ಪ್ರೋಮೋ ಸಖತ್ ಸೌಂಡ್ ಮಾಡ್ತಿದೆ. 
 

Tap to resize

ಯಾರು ಈ ಜೀವಿತಾ ವಸಿಷ್ಠ? ಇವರು ನಟನೆಗೆ ಹೊಸಬರೇನಲ್ಲ. ಜೀವಿತ ಹಿರಿತೆರೆಯಲ್ಲಿ ಮಿಂಚಿದಂತಹ ನಟಿ, ಇದೀಗ ಪಾರ್ವತಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ (Sandalwood) ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

ಸಾಯಿ ಕುಮಾರ್, ಸುಧಾರಾಣಿ ಮತ್ತು ಸಾಧು ಕೋಕಿಲ ಜೊತೆಗೆ ಹೊಸ ಹುಡುಗರೇ ತುಂಬಿರುವ ಸಿನಿಮಾದ ವಾಸಂತಿ ನಲಿದಾಗ (Vasanthi Nalidaga) ಸಿನಿಮಾದಲ್ಲಿ ಜೀವಿತಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ, ಈ ಸಿನಿಮಾ ಕೊಂಚ ಜನಪ್ರಿಯತೆಯನ್ನೂ ಪಡೆದಿತ್ತು. ಅಲ್ಲದೇ ಇವರು ಫಸ್ಟ್ ಡೇ ಫಸ್ಟ್ ಶೋ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. ಇನ್ನು ನಟಿ ನಟ ಪ್ರೇಮ್ ಮತ್ತು ಮಾನ್ವಿತಾ ಕಾಮತ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ, ಕಳೆದ ತಿಂಗಳು ತೆರೆ ಕಂಡಂತಹ ಅಪ್ಪ ಐ ಲವ್ ಯೂ (Appa I Love You) ಸಿನಿಮಾದಲ್ಲಿ ನಟಿಸಿದ್ದರು. ಇವರು ಅತ್ಯುತ್ತಮ ನಟಿ ಅನ್ನೋದನ್ನು ಸಹ ನಟರು ಕೂಡ ಹೇಳಿದ್ದಾರೆ. 
 

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಜೀವಿತಾ ತುಂಬಾ ಮಾಡರ್ನ್ ಹುಡುಗಿ. ಹೆಚ್ಚಾಗಿ ಟ್ರೆಡಿಶನಲ್ ಮತ್ತು ಮಾಡರ್ನ್ ಡ್ರೆಸಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಅಷ್ಟೇ ಅಲ್ಲ ಸಖತ್ತಾಗಿ ಡ್ಯಾನ್ಸ್ ಮಾಡೋ ಇವರು, ಡ್ಯಾನ್ಸ್ ರೀಲ್ಸ್ ಗಳನ್ನು ಕೂಡ ಇವರ ಖಾತೆಯಲ್ಲಿ ಕಾಣಬಹುದು. 
 

ಇನ್ನು ಡ್ಯಾನ್ಸರ್ ಆಗಿರುವಂತಹ ಜೀವಿತಾಗೆ ಭಾವನೆಗಳನ್ನು ವ್ಯಕ್ತಪಡಿಸಲು, ಕಣ್ಣಲ್ಲೇ ಎಲ್ಲವನ್ನೂ ಹೇಳೋದನ್ನು ವಿಶೇಷವಾಗಿ ಹೇಳಿಕೊಡಬೇಕಾಗಿಲ್ಲ. ಹಾಗಾಗಿ ಇವರಿಗೆ ನಟನೆ ಕೂಡ ತುಂಬಾನೆ ಸುಲಭವಾಗಿ ಒಲಿದು ಬಂದಿದೆ. ಇದೀಗ ದೈವೀಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

ದೇವಿ ಮಹಾತ್ಮೆಯಲ್ಲಿ ಪಾರ್ವತಿಯಾಗಿ ಜೀವಿತಾ ಪ್ರತಿ ಫ್ರೇಮಲ್ಲೂ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ನಟಿ ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದ್ಲಲಿ ಶೇರ್ ಮಾಡಿದ್ದು, ನನ್ನ ಹೊಸ ಅಧ್ಯಾಯಕ್ಕೆ ನಿಮ್ಮ ಆಶೀರ್ವಾದ ಮುಖ್ಯ. ಈ ಅವಕಾಶ ಕೊಟ್ಟದ್ದಕ್ಕಾಗಿ ಥ್ಯಾಂಕ್ಯೂ ಸ್ಟಾರ್ ಸುವರ್ಣ, ನಂದಿ ಫಿಲಂ ಎಂದು ಬರೆದುಕೊಂಡಿದ್ದಾರೆ. 
 

Latest Videos

click me!