ಸೈಕೋ ಜಯಂತ್‌ನ ನಿಜಬಣ್ಣ ಜಾಹ್ನವಿ ಮುಂದೆ ಬಯಲು…. ಚಿನ್ನುಮರಿಗೆ ಮುಂದೇನ್ ಗ್ರಹಚಾರ ಕಾದಿದ್ಯೋ?!

First Published | Nov 7, 2024, 5:13 PM IST

ಕೊನೆಗೂ ಜಾಹ್ನವಿ ಮುಂದೆ ಜಯಂತ್ ನ ನಿಜ ಬಣ್ಣ ಬಯಲಾಗಿದೆ. ಇನ್ನು ಏನ್ ಮಾಡ್ತಾಳೆ ಜಾಹ್ನವಿ. ಅಥವಾ ಮುದ್ದಿನ ಚಿನ್ನುಮರಿಗೆ ಜಯಂತ್ ಏನಾದ್ರು ಮಾಡಬಹುದಾ? 
 

ಲಕ್ಷ್ಮೀ ನಿವಾಸ  (Lakshmi Nivasa) ಧಾರಾವಾಹಿಯಲ್ಲಿ ಭಾರಿ ಟ್ವಿಸ್ಟ್ ಸಿಕ್ಕಿದ್ದು, ವೀಕ್ಷಕರು ಕಾಯುತ್ತಿದ್ದ ಗಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಅದೇನಂದ್ರೆ ಜಾಹ್ನವಿ ಮುಂದೆ ಜಯಂತ್ ಕುರಿತಾದ ಎಲ್ಲಾ ಸತ್ಯಗಳು ಒಂದೊಂದಾಗಿ ಬಯಲಾಗಿದೆ. ಗಂಡ ಅಂದ್ರೆ ದೇವರಂಥವನು ಎಂದು ನಂಬಿಕೊಂಡಿದ್ದ ಜಾಹ್ನವಿಗೆ, ಇದೀಗ ತನ್ನ ಗಂಡ ಎಂಥವನು ಅನ್ನೋ ಕ್ಲಾರಿಟಿ ಸಿಕ್ಕಿದೆ. 
 

ಜಾಹ್ನವಿ ಮುಂದೆ ಜಯಂತ್ ಒಂದಲ್ಲ ಒಂದು ರೀತಿಯಲ್ಲಿ ತನ್ನ ಪ್ರೀತಿಯ ಹುಚ್ಚನ್ನು ಪ್ರದರ್ಶಿಸಿದ್ರೂ ಸಹ ಆಕೆಗೆ ತನ್ನ ಗಂಡನಿಗೆ ತನ್ನ ಮೇಲಿರುವ ಅಪಾರ ಪ್ರೀತಿ ಕಂಡಿತೇ ವಿನಃ, ಆತನ ಗುಣಗಳ ಬಗ್ಗೆ ಒಂದಷ್ಟು ಕೆಟ್ಟ ಅಭಿಪ್ರಾಯ ಮೂಡಿರಲೇ ಇಲ್ಲ. ಇದೀಗ ವಾಚ್ ಮ್ಯಾನ್ ಸಿಕ್ಕಿ, ಜಯಂತ್ ಬಗ್ಗೆ ಸಂಪೂರ್ಣವಾಗಿ ಹೇಳಿದ ಮೇಲೆ ಜಾಹ್ನವಿಗೆ ಜಯಂತ್ ಎಂಥವನು ಅನ್ನೋದು ತಿಳಿದು ಹೋಗಿದೆ. 
 

Tap to resize

ಮದುವೆಯಾಗಿ ಸ್ವಲ್ಪ ಸಮಯದಲ್ಲೇ ಜಾಹ್ನವಿಯ ಮೈಮೇಲೆ ಜಿರಳೆ ಓಡಾಡಿದ್ದಕ್ಕೆ, ಕೋಪದಿಂದ ನನ್ನ ಮತ್ತು ಜಾಹ್ನವಿ ಮಧ್ಯೆ ಬೇರೆ ಯಾರೂ ಬರಬಾರದು ಎಂದು ಜಿರಳೆಯನ್ನು ಹಾಲಿಗೆ ಹಾಕಿ, ಅದನ್ನ ಕುಡಿದಂತಹ ಭೂಪ ಜಯಂತ್, ಜಾಹ್ನವಿ ತನ್ನ ಮುಂದೆ ಅಲ್ಲದೇ ಬೇರೆ ಯಾರ ಮುಂದೆಯೂ ಹಾಡಬಾರದು ಅಂತ ಷರತ್ತು ಕೂಡ ಹಾಕಿದ್ದ. ಅಷ್ಟೇ ಅಲ್ಲ ಮನೆಯಲ್ಲಿ ಯಾರೂ ಕೆಲಸದವರು ಇರದ ಹಾಗೆ ನೋಡಿಕೊಳ್ಳುತ್ತಿದ್ದ, ಜಾಹ್ನವಿ ನಿದ್ರೆ ಮಾಡುವಾಗಲೇ ಎದ್ದು ಮನೆಯಿಡಿ ಕ್ಲೀನ್ ಮಾಡಿ, ಕೆಲಸದವರು ಬಂದು ಮಾಡಿ ಹೋದರು ಅಂತಾನೂ ಹೇಳಿದ್ದ ಜಯಂತ್. 
 

ಅದು ಮಾತ್ರ ಅಲ್ಲ, ಜಾಹ್ನವಿ ತನ್ನನ್ನು ಬಿಟ್ಟು, ತನ್ನ ಅಮ್ಮನ ಜೊತೆ ಹೆಚ್ಚು ಮಾತಾಡ್ತಾಳೆ ಅಂತ, ಮನೆಯಲ್ಲಿ ಫೋನ್ ನೆಟ್ ವರ್ಕ್ ಸಿಗದ ಹಾಗೆ ಮಾಡಿದ, ಫೋನಿನ ವೈರ್ ಕನೆಕ್ಷನ್, ಟಿವಿ ಕನೆಕ್ಷನ್ ಎಲ್ಲಾನೂ ತೆಗೆಸಿದ, ಜಾನು ಪ್ರೀತಿಸಿದ ಹುಡುಗ ಅವನೇ ಇರಬೇಕು ಎಂದುಕೊಂಡು, ಜಾನು ಕ್ಲಾಸ್ ಮೆಟ್ ಒಬ್ಬನನ್ನು ಮತ್ತೆ ಎದ್ದೇಳಂತೆ, ಮಾತನಾಡದಂತೆ ಹೊಡೆದಿದ್ದಾರೆ, ಜಾಹ್ನವಿಗೆ ಕಿಂಡಲ್ ಮಾಡಿದ ಹುಡುಗರ ಕಾರಿನ ಮೇಲೆ ಲಾರಿ ಹತ್ತಿಸಿ ಆಕ್ಸಿಡೆಂಟ್ ಮಾಡಿದ್ದು ಹೌದು. 
 

ಜಾಹ್ನವಿಗೆ ಒಬ್ಬಂಟಿಯಾಗಿರೋದಕ್ಕೆ ಬೋರ್ ಆಗುತ್ತೆ ಎಂದು ಮೊಲವನ್ನು ತಂದುಕೊಟ್ಟು, ನಂತ್ರ ಆಕೆ ಅದರ ಜೊತೆಗೆ ಹೆಚ್ಚು ಸಮಯ ಕಳಿತಾಳೆ ಅಂತ, ಅದನ್ನು ಎಲ್ಲೋ ಬಿಟ್ಟು ಬಂದಿದ್ದು ಆಗಿದೆ. ಜಾಹ್ನವಿ ವಾಚ್ ಮ್ಯಾನ್ ಜೊತೆ ಮಾತಾಡ್ತಾಳೆ, ಊಟ ಕೊಡ್ತಾಳೆ ಅನ್ನೋದು ಗೊತ್ತಾದಮೇಲೆ, ಆತನನ್ನು ಮನೆಯಿಂದ ಎತ್ತಂಗಡಿ ಮಾಡಿಸಿದ್ದ ಸೈಕೋ ಜಯಂತ್. ಇದೀಗ ಜಾಹ್ನವಿಗೆ ವಾಚ್ ಮ್ಯಾನ್ ದಾರಿಯಲ್ಲಿ ಸಿಕ್ಕಿದ್ದು, ಆತನಿಂದಾಗಿ ಆಕೆಗೆ ನಡೆದ ಎಲ್ಲಾ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. 

ನನ್ನ ಗಂಡ ಅಂತವರಲ್ಲ ಅಂತಿದ್ದ ಜಾಹ್ನವಿಗೆ ಈಗ ಎಲ್ಲವೂ ಒಂದೊಂದಾಗಿ ಕಣ್ಣೆದುರು ಬರ್ತಾ ಇದೆ. ಯಾಕ ತನ್ನ ಗಂಡ ಹೀಗೆಲ್ಲಾ ಮಾಡ್ತಿದ್ದಾನೆ ಎಂದು ಒಂದೂ ಅರ್ಥವಾಗದ ಜಾನು, ಮನೆಯವರತ್ರ ಹೇಳೋದಕ್ಕೆ ಆಗೋದಿಲ್ಲ, ಇದೆನ್ನೆಲ್ಲಾ ಯಾರಲ್ಲಿ ಹೇಳೋದು ಅಂತ ಬೇಜಾರಲ್ಲಿ ಕಣ್ಣೀರು ಹಾಕ್ತಾಳೆ. ಮುಂದೆ ಜಾಹ್ನವಿ ಏನ್ ಮಾಡ್ತಾಳೆ? ಅಥವಾ ಜಯಂತ್ ತನ್ನ ಮುದ್ದಿನ ಚಿನ್ನುಮರಿಗೆ ಏನ್ ಮಾಡ್ತಾನೆ ಅನ್ನೋದನ್ನ ಕಾದು ನೋಡಬೇಕು. 
 

ಕೊನೆಗೂ ಚಿನ್ನುಮರಿಗೆ ಸೈಕೋ ಜಯಂತ್ (psycho Jayanth) ಬಗ್ಗೆ ಎಲ್ಲಾ ವಿಷಯ ಗೊತ್ತಾಯ್ತು ಅನ್ನೋ ಸಂತಸದಲ್ಲಿದ್ದಾರೆ ಜನರು. ಅಷ್ಟೇ ಅಲ್ಲ ಕೆಲವರು ಜಾನು ನೀನು ಅವರ ಹಿಂದಿನ ಜೀವನದ ಬಗ್ಗೆ ತಿಳಿದುಕೋ, ಅಲ್ಲಿಂದಲೇ ಎಲ್ಲಾ ಶುರುವಾಗಿದ್ದು, ಆದ್ರೆ ಜಯಂತ್ ನನ್ನು ಬಿಡೋ ಮಾತನಾಡಬೇಡ, ಅವನಿಗೆ ನಿನ್ನನ್ನು ಬಿಟ್ರೆ ಬೇರೆ ಯಾರೂ ಇಲ್ಲ ಅಂತಾನೂ ಹೇಳಿದ್ದಾರೆ. 
 

Latest Videos

click me!