ಲಾಯರ್ ಜಗದೀಶ್ ಬಿಗ್ ಬಾಸ್ 11 ವಿನ್ನರ್... ಈಗ ರನ್ನರ್ ಅಪ್ ಗಾಗಿ ಶೋ ನಡಿತಿದೆ ಅಂತಿದ್ದಾರೆ ಜನ!

Published : Oct 23, 2024, 10:08 PM ISTUpdated : Oct 25, 2024, 12:26 PM IST

ಬಿಗ್ ಬಾಸ್ ಸೀಸನ್ 11 ರಿಂದ ಲಾಯರ್ ಜಗದೀಶ್ ಹೊರಗೆ ಹೋದಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದ್ದು, ನಿಜವಾದ ವಿನ್ನರ್ ಜಗದೀಶ್ ಎಂದಿದ್ದಾರೆ.   

PREV
17
ಲಾಯರ್ ಜಗದೀಶ್ ಬಿಗ್ ಬಾಸ್ 11 ವಿನ್ನರ್... ಈಗ ರನ್ನರ್ ಅಪ್ ಗಾಗಿ ಶೋ ನಡಿತಿದೆ ಅಂತಿದ್ದಾರೆ ಜನ!

ಬಿಗ್ ಬಾಸ್ ಸೀಸನ್ 11 (Bigg Boss Season 11) ಬರೀ ಗಲಾಟೆ, ಜಗಳ, ಒಬ್ಬರಿಗೊಬ್ಬರು ದೂರೋದು, ಹೊಡೆಯೋದು, ಬಡೆಯೋದ್ರಲ್ಲಿ ಮುಗ್ದೋಗುತ್ತಾ ಅಂತ ಅನಿಸುತ್ತೆ, ಕಂಟೆಸ್ಟಂಟ್ ಗಳನ್ನು ನೋಡುವಾಗ. ಈಗಾಗಲೇ ಅವ್ಯಾಚ ಶಬ್ಧಗಳ ಬಳಕೆ ಮಾಡಿದ್ದಕ್ಕೆ ಜಗದೀಶ್ ಅವರನ್ನು ಹಾಗೂ ಜಗದೀಶ್ ಅವರನ್ನ ನೂಕಿದ್ದಕ್ಕೆ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ. 
 

27

ಆದರೆ ಕರ್ನಾಟಕದ ಕ್ರಶ್ (Karnataka crush) ಎಂದು ಜನಪ್ರಿಯತೆ ಪಡೆದಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಮೇಲೆ ಮಾತ್ರ ಜನ ಸೋಶಿಯಲ್ ಮಿಡಿಯಾದ್ಯಂತ, ಜಗದೀಶ್ ವಾಪಾಸ್ ಬಿಗ್ ಬಾಸ್ ಮನೆಗೆ ಬರಬೇಕು, ಜಗದೀಶ್ ಇದ್ರೇನೆ ಬಿಗ್ ಬಾಸ್ ನೋಡೋದಕ್ಕೆ ಸಾಧ್ಯ ಆಗೋದು ಅಂತಿದ್ದಾರೆ. 
 

37

ಬಿಗ್ ಬಾಸ್ ಆರಂಭವಾದಾಗ, ಜಗದೀಶ್ ಮಾಡುವ ಆಟಗಳನ್ನು, ಬಳಸುವ ಭಾಷೆ ನೋಡಿ ಜನ ಸಿಕ್ಕಾಪಟ್ಟೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು, ಅವರನ್ನು ದೊಡ್ಮನೆಯಿಂದ ಹೊರ ಹಾಕಬೇಕು ಅಂತಾನೂ ಹೇಳಿದ್ರು. ಆದರೆ ದಿನ ಕಳೆಯುತ್ತಿದ್ದಂತೆ, ಜಗದೀಶ್ ಬಿಗ್ ಬಾಸ್ ಮನೆಯ ಪ್ರಮುಖ ಆಕರ್ಷಣೆ ಆಗೋಗಿದ್ರು. ಅದು ಜಗಳ ಮಾಡೋದಕ್ಕಾದ್ರೂ ಸೈ, ಡ್ಯಾನ್ಸ್ ಮಾಡೋದಕ್ಕೂ ಸೈ, ಮನರಂಜನೆ ನೀಡೋದಕ್ಕೂ ಸೈ ಎನ್ನುವಂತೆ, ಹೆಚ್ಚಾಗಿ ಜಗದೀಶ್ ಕಡೆಯಿಂದ ಮಾತ್ರ ಕಂಟೆಂಟ್ ಸಿಕ್ಕಿದ್ದಂತೂ ನಿಜಾ. 

47

ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನಗಳ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎಲ್ಲಾ ಪ್ರೊಮೋಗಳಲ್ಲೂ ಹೈಲೈಟ್ ಆಗಿದ್ದೆ ಜಗದೀಶ್. ವೀಕ್ಷಕರಿಗೂ ಜಗದೀಶ್ ಎಂಟರ್ಟೇನ್ ಮೆಂಟ್ ನೀಡಿದ್ದು, ಜನ ಅವರನ್ನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಕೇವಲ ಸ್ಪರ್ಧಿಗಳಿಗೆ ಮಾತ್ರವಲ್ಲ ಬಿಗ್ ಬಾಸ್ ಗೆ ಅವಾಜ್ ಹಾಕುವ ಮೂಲಕ ಕೂಡ ಭಾರಿ ಸದ್ದು ಮಾಡಿದ್ದರು ಜಗದೀಶ್. 
 

57
BBK jagadish

ಬಿಗ್ ಬಾಸ್ ಸೀಸನ್ 11 ರ ಪ್ರಮುಖ ಆಕರ್ಷಣೆಯಾಗಿದ್ದ ಜಗದೀಶ್ (Lawyer Jagadish) ಅವರನ್ನೇ ಆದರೆ ಕಳೆದ ವಾರ ನಡೆದ ಮಾತಿನ ಚಕಮಕಿಯಲ್ಲಿ ಅವ್ಯಾಚ ಪದಗಳ ಬಳಕೆ ಮಾಡಿದ್ದಕ್ಕಾಗಿ ಮನೆಯಿಂದ ಹೊರಗೆ ಹಾಕಲಾಗಿತ್ತು. ಹಾಗಾಗಿ ಜಗದೀಶ್ ಇಲ್ಲದೇ ಇದ್ರೆ ಬಿಗ್ ಬಾಸ್ ಆಟನೇ ಮುಗಿದು ಹೋಯ್ತು, ಇನ್ನು ಬಿಗ್ ಬಾಸ್ ನೋಡೋದು ವೇಸ್ಟ್ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಎಲ್ಲಾ ಜಾಲಿ ಜಾಲಿ ಜಗದೀಶ್ ಇಲ್ಲದ ಮನೆ ಖಾಲಿ ಖಾಲಿ ಅಂತಾನೂ ಹೇಳ್ತಿದ್ದಾರೆ. 
 

67

ಇನ್ನೂ ಹೆಚ್ಚಿನ ಜನರು ಜಗದೀಶ್ ಅವರೇ ಬಿಗ್ ಬಾಸ್ ಸೀಸನ್ 11ರ ನಿಜವಾದ ವಿನ್ನರ್ ಎಂದಿದ್ದಾರೆ. ಮತ್ತೆ ಕೆಲವರು ಈಗಾಗಲೇ ಜಗದೀಶ್ ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಆಗಿ ಹೊರ ಹೋಗಿ ಆಗಿದೆ. ಇನ್ನೇನಿದ್ದರೂ ರನ್ನರ್ ಅಪ್ ಗಾಗಿ ಒಳಗಡೆ ಆಟ ನಡಿತಿದೆ ಅಷ್ಟೇ ಅಂತಿದ್ದಾರೆ. 
 

77

ಅಷ್ಟೇ ಅಲ್ಲ ಜಗ್ಗು ಸರ್ ಮತ್ತೆ ಬನ್ನಿ ಸರ್ ಬಿಗ್ ಬಾಸ್ ಗೆ , ಜಗದೀಶ್ ಮನೆಗೆ ಮತ್ತೆ ಎಂಟ್ರಿ ಕೊಟ್ರೆ ಮಾತ್ರ ಮಜಾ ಇರುತ್ತೆ ಎಂದಿದ್ದಾರೆ. ನೇರ ದಿಟ್ಟ ನಿರಂತರ, ಪ್ರಮಾಣಿಕತೆಯ ಐಕಾನ್, ಕರ್ನಾಟಕದ ಆಸ್ತಿ, ಘರ್ಜಿಸುವ ಸಿಂಹ, ಕೋಟ್ಯಂತರ ಮನಸ್ಸು ಗೆದ್ದ ಕರ್ನಾಟಕದ CRUSH,  ಅಂತಾನೂ ಹೇಳಿದ್ದಾರೆ ಜನ. ಅಲ್ಲದೇ ಜಗದೀಶ್ ಇಲ್ಲದೇ ಬಿಗ್ ಬಾಸ್ ನೋಡೋದೆ ಇಲ್ಲ ಅಂತಾನೂ ಹೇಳಿದ್ದಾರೆ. 
 

Read more Photos on
click me!

Recommended Stories