ಸೋನು ನೋಡಿ ಸೆಲ್ಫಿಗೆ ಮುಗ್ಗಿ ಬಿದ್ದ ಮೈಸೂರು ಮಂದಿ; ಪ್ರೈವಸಿಗೆ ಗೌರವ ಕೊಡಿ ಎಂದು ಗರಂ

First Published | Oct 23, 2024, 11:36 PM IST

ಮೈಸೂರಿನಲ್ಲಿ ಸೋನು ನೋಡುತ್ತಿದ್ದಂತೆ ಸೆಲ್ಫಿ ಹಿಂದೆ ಬಿದ್ದ ಫಾಲೋವರ್ಸ್. ಎಷ್ಟೇ ದೂರವಾದರೂ ಫಾಲೋ ಮಾಡಿದ ಜನರ ವಿರುದ್ಧ ನಟಿ ಗರಂ....

ಬಿಗ್ ಬಾಸ್ ಓಟಿಟಿ ಸೀಸನ್ 1ರ ಮೂಲಕ ಜನರಿಗೆ ಪರಿಚಯವಾದ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಸದ್ಯ ಸಖತ್ ಗರಂ ಆಗಿದ್ದಾರೆ. 

ಪ್ರತಿ ತಿಂಗಳು ತಪ್ಪದೆ ಮೈಸೂರು ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯುವ ಪದತಿ ಫಾಲೋ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ದಸರ ಲೈಟಿಂಗ್ ನೋಡಲು ಈ ತಿಂಗಳು ಮೈಸೂರ್‌ಗೆ ತೆರಳಿದ್ದಾರೆ.

Tap to resize

ಮೈಸೂರು ಲೈಟಿಂಗ್ ನೋಡಿಕೊಂಡು ದೇವರ ದರ್ಶನ ಪಡೆದುಕೊಂಡು ಶಾಪಿಂಗ್ ಮಾಡಿಕೊಂಡು ಬರಲು ಸ್ನೇಹಿತೆ ಜೊತೆ ಸೋನು ತೆರಳಿದ್ದಾರೆ. ಆದ ಅಭಿಮಾನಿಗಳು ಸೆಲ್ಫಿ ಕೇಳಲು ಮುಂದಾಗಿದ್ದಾರೆ. 

 ಇತ್ತೀಚಿನ ದಿನಗಳಲ್ಲಿ ಸೋನು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಸೋನು ಎಲ್ಲೇ ಕಂಡರೂ ಸೆಲ್ಫಿ ಪಡೆಯಲು ಮುಂದಾಗುತ್ತಾರೆ. ಹಾಗೆ ಮೈಸೂರಿನಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗ್ಗಿಬಿದ್ದಿದ್ದಾರೆ. 

 'ನಿಜಕ್ಕೂ ಬೇಸರ ಆಗುತ್ತದೆ...ಸೆಲ್ಫಿ ಕೇಳುತ್ತೀರಾ ನಾವು ಕೊಡುತ್ತೀವಿ...ಸೆಲ್ಫಿ ತೆಗೆದುಕೊಂಡು ಸುಮ್ಮನೆ ಹೋಗಬೇಕು ಪದೇ ಪದೇ ಹಿಂದೆ ಬಂದು ಸೆಲ್ಫಿ ತೆಗೆದುಕೊಂಡರೂ ಮತ್ತೆ ಬರಬಾರದು ನಿಜ ಬೇಸರ ಆಗಿದೆ' ಎಂದು ಸೋನು ಹೇಳಿದ್ದಾರೆ. 

ಯೂಟ್ಯೂಬ್ ಚಾನೆಲ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಜನರು ಪದೇ ಪದೇ ಹೆಸರು ಕೂಗಿ ಹಿಂದೆ ಬಿದ್ದಿದ್ದಕ್ಕೆ ಗರಂ ಆಗಿದ್ದಾರೆ.

Latest Videos

click me!