ಇಸ್ಮಾರ್ಟ್ ಜೋಡಿ ಮೌಲ್ಯ - ಪ್ರತೀಕ್ ಮಗುವಿನ‌ ನಾಮಕರಣ ಸಂಭ್ರಮ… ಮಗನಿಗೆ ವಿಶೇಷವಾದ ಹೆಸರಿಟ್ಟ ಜೋಡಿ

Published : Jun 29, 2024, 05:59 PM IST

ಸ್ಟಾರ್ ಸುವರ್ಣದಾಲ್ಲಿ ಪ್ರಸಾರವಾಗುತ್ತಿದ್ದ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಮಿಂಚಿದ್ದ ನಟಿ ಮೌಲ್ಯ ಮತ್ತು  ಪ್ರತೀಕ್ ಜೋಡಿ ಇದೀಗ ಪೋಷಕರಾದ ಸಂಭ್ರಮದಲ್ಲಿದ್ದಾರೆ.  

PREV
17
ಇಸ್ಮಾರ್ಟ್ ಜೋಡಿ ಮೌಲ್ಯ - ಪ್ರತೀಕ್ ಮಗುವಿನ‌ ನಾಮಕರಣ ಸಂಭ್ರಮ… ಮಗನಿಗೆ ವಿಶೇಷವಾದ ಹೆಸರಿಟ್ಟ ಜೋಡಿ

ಸೋಶಿಯಲ್ ಮೀಡಿಯಾದಲ್ಲಿ ವಿಡೀಯೋ ಮಾಡುವ ಮೂಲಕವೇ ಜೋಡಿಯಾಗಿ ಮತ್ತೆ ಮದುವೆಯಾಗಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೋಡಿ ಅಂದ್ರೆ ಮೌಲ್ಯ ಮತ್ತು ಪ್ರತೀಕ್ (Moulya and Pratheek). 
 

27

ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ನಡೆಸಿಕೊಡುತ್ತಿದ್ದ ಸೆಲೆಬ್ರಿಟಿ ಕಪಲ್ಸ್ ಕಾರ್ಯಕ್ರಮದಲ್ಲಿ ಈ ಜನಪ್ರಿಯ ರೀಲ್ಸ್ ಜೋಡಿ ಭಾಗಿಯಾಗಿ ಜನಮನ ಗೆದ್ದಿದ್ದರು. ಒಂದು ತಿಂಗಳ ಕಾಲ ಅದ್ಭುತವಾಗಿ ಆಟವಾಡಿದರೂ ಫಸ್ಟ್ ಎಲಿಮಿನೇಶನ್ ನಲ್ಲೇ ಔಟ್ ಆಗಿದ್ದರು. 
 

37

ಕಿರುತೆರೆಯಲ್ಲಿ ಮೋಡಿ ಮಾಡುವಲ್ಲಿ ಸೋತಿದ್ದರೂ ಸಹ ಈ ಜೋಡಿ, ಅದೆಷ್ಟೋ ಟ್ರೆಂಡಿಂಗ್ ರೀಲ್ಸ್, ಕಾಮಿಡಿ ವಿಡೀಯೋ ಮಾಡುವ ಮೂಲಕ ತಮ್ಮ ಫಾಲೋವರ್ಸ್ ಗಳನ್ನ ಸಿಕ್ಕಾಪಟ್ಟೆ ನಗಿಸಿದ್ದರು ಈ ಜೋಡಿ. 
 

47

ಸೋಶಿಯಲ್ ಮೀಡಿಯಾದ (Social media) ಈ ಜೋಡಿಗಳು ಸದ್ಯ ಪೋಷಕರಾಗಿ ಭರ್ತಿ ಪಡೆದ ಖುಷಿಯಲ್ಲಿದ್ದಾರೆ. ಗರ್ಭಿಣಿಯಾಗಿದ್ದಾಗಲೂ ಅಮೂಲ್ಯ ವಿಡಿಯೋ ಮೂಲಕ ಜನರನ್ನು ನಗಿಸುತ್ತಿದ್ದರು, ಇವರಿಬ್ಬರ ಮೆಟರ್ನಿಟಿ ಫೋಟೋ ಶೂಟ್ ಕೂಡ ಸಖತ್ ವೈರಲ್ ಆಗಿತ್ತು. 
 

57

ಕಳೆದ ತಿಂಗಳು ಈ ಮುದ್ದಾದ ಜೋಡಿಗೆ ಗಂಡು ಮಗು ಹುಟ್ಟಿದ್ದು, ಇತ್ತೀಚೆಗೆ ನಾಮಕರಣ ಸಮಾರಂಭವನ್ನು ಸಂಭ್ರಮದಿಂದ ನೆರವೇರಿಸಿದ್ದರು. ಇದೀಗ ನಾಮಕರಣದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

67

ತಮ್ಮ ಕುಟುಂಬದವರ ಸಮ್ಮುಖದಲ್ಲಿ ಮೌಲ್ಯ ಮತ್ತು ಪ್ರತೀಕ್ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಾಮಕರಣ ಸಮಾರಂಭ ನೆರವೇರಿಸಿದ್ದು, ಮಗುವಿಗೆ ಆನವ್ ಗಣೇಶ್ (Aanav Ganesh) ಎಂದು ಹೆಸರಿಟ್ಟಿದ್ದಾರೆ. 
 

77

ಆನವ್ ಎನ್ನುವ ವಿಶೇಷ ಪದದ ಅರ್ಥ ರಾಜ, ಸಾಗರ, ಶ್ರೀಮಂತ, ದಯಾಳು, ಮಾನವೀಯತೆ ಎಂದರ್ಥ. ನಾಮಕರಣ ಸಮಾರಂಭಕ್ಕೆ ನಿರಂಜನ್ ದೇಶ್ ಪಾಂಡೆ ಮತ್ತು ಯಶಸ್ವಿನಿ ದಂಪತಿಗಳು ಆಗಮಿಸಿ ಶುಭ ಕೋರಿದ್ದರು. 
 

click me!

Recommended Stories