ಇತ್ತೀಚಿನ ದಿನಗಳಲ್ಲಿ ಮಕ್ಕಳು ಹುಟ್ಟುತ್ತಿದ್ದಂತೆ ಪೋಷಕರು ಇನ್‌ಸ್ಟಾಗ್ರಾಂ ಅಕೌಂಟ್ ಮತ್ತು ಯೂಟ್ಯೂಬ್ ಅಕೌಂಟ್ ಓಪನ್ ಮಾಡಿ ಪ್ರಚಾರ ಮಾಡುತ್ತಾರೆ.
ಹುಟ್ಟಿದ ದಿನದಿಂದ ಇದವರೆಗೂ ಮಕ್ಕಳನ್ನು ಹಂತ ಹಂತವಾಗಿ ತೋರಿಸುತ್ತಾರೆ. ಫಾಲೋವರ್ಸ್ ಹೆಚ್ಚಿದ್ದರೆ ಕೆಲವೊಂದು ಪ್ರಾಡೆಕ್ಟ್ ಪ್ರಚಾರ ಕೂಡ ಮಾಡುತ್ತಾರೆ.
ಮಲಯಾಳಂ ದಂಪತಿಗಳ ಮುದ್ದಿನ ಅವಳಿ ಮಕ್ಕಳಾಗಿರುವ ನೈಲಾ ಮತ್ತು ನೀಲವ್ ಇನ್‌ಸ್ಟಾಗ್ರಾಂನಲ್ಲಿ 15 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿದ್ದಾರೆ.
ಮನೆಯಲ್ಲಿ ಅಡುಗೆ ಮಾಡಲು ತಂದಿರುವ ಜೀವಂತ ಏಡಿಯನ್ನು ಒಂದು ಬಟ್ಟಿಲಿನಲ್ಲಿ ಹಾಕಿ ಮಕ್ಕಳ ಮುಂದೆ ಆಟವಾಡಲು ಪೋಷಕರು ಇಟ್ಟಿದ್ದಾರೆ.
ತಮಾಷೆ ಮಾಡಿರುವ ಉದ್ದೇಶದಿಂದ 'ಜನರ ಕಾಮೆಂಟ್ಸ್ ಬರಲಿ ಎಂದು ಕಾಯುತ್ತಿದ್ದೀವಿ' ಎಂದು ಬರೆದುಕೊಂಡಿದ್ದಾರೆ. ಆದರೆ ನೆಟ್ಟಿಗರು ಗರಂ ಆಗಿದ್ದಾರೆ.
ಮಕ್ಕಳ ಹುಟ್ಟುತ್ತಿಲ್ಲ ಎಂದು ದೇವರ ಮೊರೆ ಹೋಗುತ್ತಾರೆ ಆದರೆ ನೀವು ಅಂದ ಚಂದ ಇರುವ ಮಕ್ಕಳ ಕೈಗೆ ಏಡಿ ಕೊಟ್ಟಿರುವುದು ತಪ್ಪು. ಬೆರಳು ಕಟ್ ಮಾಡಿದರೆ ಏನು ಮಾಡುತ್ತೀರಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ.