ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿದಂಬರ ಪೂಜಾರಿ

First Published | Mar 4, 2024, 10:30 AM IST

ಕಾಮಿಡಿ ಕಿಲಾಡಿಗಳು ಮೂಲಕ ಜನರನ್ನು ರಂಜಿಸಿದ್ದ ಚಿದಂಬರ ಪೂಜಾರಿ ಇದೀಗ ತಮ್ಮ ಗೆಳತಿ ಸುಕನ್ಯಾ ಗೌಡ ಜೊತೆಗೆ ಸಪ್ತಪದಿ ತುಳಿದಿದ್ದಾರೆ. 
 

ಕಾಮಿಡಿ ಕಿಲಾಡಿಗಳು ಸೀಸನ್ 2 (Comedy Khiladigalu) ರಲ್ಲಿ ಮಿಂಚಿದ್ದ ಚಿದಂಬರ ಪೂಜಾರಿ ಇದೀಗ ತಮ್ಮ ಬಹುಕಾಲದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ಚಿಂದಂಬರ (Chidambara Poojary) ಅವರ ನಿಶ್ಚಿತಾರ್ಥ  ಕಳೆದ ವರ್ಷ ಮೇ ತಿಂಗಳಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು, ಇದೀಗ ತಮ್ಮ ಗೆಳತಿಯಾಗಿರುವ ಸುಕನ್ಯ ಗೌಡ ಜೊತೆ ಸಪ್ತಪದಿ ತುಳಿದಿದ್ದಾರೆ. 
 

Tap to resize

ಕಳೆದ ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಜನರನ್ನು ನಗಿಸುವ ಮತ್ತು ಮನರಂಜನೆ ನೀಡುತ್ತಿರುವ  ಮೆಚ್ಚಿನ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳಲ್ಲಿ ಚಿದಂಬರ ಅವ್ರು ಪ್ರೇಕ್ಷಕರಿಂದ ಅಪಾಯ ಮೆಚ್ಚುಗೆ ಪಡೆದಿದ್ದರು.
 

ತಮ್ಮ ಕಾಮಿಡಿಯಿಂದ ಜನರನ್ನು ಮೆಚ್ಚಿಸಿದ ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಳಗವೂ ಇದೆ.. ರಿಯಾಲಿಟಿ ಶೋ ಮಾತ್ರವಲ್ಲ ಕನಸ್ಸು ಮಾರಾಟಕ್ಕಿದೆ ಅನ್ನೋ ಕನ್ನಡ ಸಿನಿಮಾದಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದರು. 
 

ಇದೀಗ ತಮ್ಮ ಬಹುಕಾಲದ ಗೆಳತಿ ಸುಕನ್ಯ ಗೌಡSukanya Gowda) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ  ಚಿದಂಬರ್ ಮದುವೆ ಯಾವುದೋ ರೆಸಾರ್ಟ್ ನಲ್ಲಿ ನಡೆದಂತೆ ಕಾಣುತ್ತದೆ. ಮದುವೆ ಮತ್ತು ರಿಸೆಪ್ಷನ್ ಅದ್ಧೂರಿಯಾಗಿ ನಡೆದಿತ್ತು. 

ಕಿರುತೆರೆಯಲಿ ನಗುವಿನ ಹೊಳೆ ಹರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಚಿದಂಬರ ಪೂಜಾರಿ, ಹಿರಿತೆರೆಯಲ್ಲೂ ಸಹ ನಟಿಸುವ ಮೂಲಕ ಜನರನ್ನು ರಂಜಿಸಿದ್ದರು. ಇದೀಗ ವಯಕ್ತಿಕ ಜೀವನದ ಮೂಲಕ ಸುದ್ದಿಯಾಗಿದ್ದಾರೆ. 
 

ಚಿದಂಬರ ಪೂಜಾರಿ ಮದುವೆ, ಆರತಕ್ಷತೆಗೆ ಕಾಮಿಡಿ ಕಿಲಾಡಿಗಳಲ್ಲಿ ಜೊತೆಯಿದ್ದ ಸಹ ಕಲಾವಿದರು, ಜೊತೆಗೆ ನೀನಾಸಂ ವಿದ್ಯಾರ್ಥಿಯಾಗಿರುವ ಚಿದಂಬರ್ ಗೆ ಹರಸಲು ನೀನಾಸಂ ಗ್ಯಾಂಗ್ ಕೂಡ ಬಂದಿತ್ತು.
 

Latest Videos

click me!