7 ವರ್ಷ, 2200ಕ್ಕೂ ಅಧಿಕ ಎಪಿಸೋಡ್ಸ್… ಶೀಘ್ರದಲ್ಲಿ ಮುಕ್ತಾಯವಾಗುತ್ತಾ ಜನಪ್ರಿಯ ಸೀರಿಯಲ್ !

Published : Jun 20, 2026, 09:19 PM IST

ಸನ್ ಉದಯದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಸೇವಂತಿ’ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಭಾಗ್ಯವಂತರು ಧಾರಾವಾಹಿ ಶುರುವಾಗಲಿದ್ದು, ಅದಕ್ಕಾಗಿಯೇ ಸುಧೀರ್ಘ 7ವರ್ಷಗಳ ಪ್ರಯಾಣಕ್ಕೆ ‘ಸೇವಂತಿ’ ಅಂತ್ಯ ಹಾಡುತ್ತಾ ಕಾದು ನೋಡಬೇಕು. 

PREV
15
ಸೇವಂತಿ ಧಾರಾವಾಹಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಸೇವಂತಿ' ತನ್ನ ಯಶಸ್ವಿ ಪಯಣಕ್ಕೆ ತೆರೆ ಎಳೆಯುವ ಸಮಯ ಬಂದಿದ್ಯಾ? ಹಾಗಂತ ಗಾಳಿ ಸುದ್ದಿಯೊಂದು ಹರಿದಾಡುತ್ತಿದ್ದು, ಕಳೆದ ಏಳು ವರ್ಷಗಳಿಂದ ಮನರಂಜನೆ ನೀಡುತ್ತಾ ಬಂದಿರುವ ಧಾರಾವಾಹಿಯ ಅಂತ್ಯವಾಗುತ್ತಾ ಅಂತ ವೀಕ್ಷಕರು ಕೇಳುತ್ತಿದ್ದಾರೆ.

25
ಏಳು ವರ್ಷಗಳ ಪಯಣ ಅಂತ್ಯ ಆಗುತ್ತಾ?

‘ಸೇವಂತಿ’ ಧಾರಾವಾಹಿ ಏಳು ವರ್ಷಗಳ ಹಿಂದೆ ಅಂದರೆ 2019ರಲ್ಲಿ ಶುರುವಾದ ಧಾರಾವಾಹಿ. ಹಲವು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಈ ಧಾರಾವಾಹಿ ಇದೀಗ ಅಂತಿಮ ಹಂತ ತಲುಪಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡಿತ್ತು. ಆದರೆ ಈ ಬಗ್ಗೆ ಧಾರಾವಾಹಿ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

35
2019ರಲ್ಲಿ ಶುರುವಾದ ಧಾರಾವಾಹಿ

2019ರಲ್ಲಿ ಪ್ರಸಾರ ಆರಂಭಿಸಿದ್ದ 'ಸೇವಂತಿ' ಧಾರಾವಾಹಿ ತನ್ನ ವಿಭಿನ್ನ ಕಥಾಹಂದರ, ಭಾವನಾತ್ಮಕ ಸನ್ನಿವೇಶಗಳು ಮತ್ತು ಕಲಾವಿದರ ಅದ್ಭುತ ಅಭಿನಯದ ಮೂಲಕ ಮನೆಮಾತಾಗಿತ್ತು. ಸೇವಂತಿ ಮತ್ತು ಅರ್ಜುನ್ ಪಾತ್ರಗಳ ಸುತ್ತ ಸಾಗಿದ ಕಥೆ ಪ್ರೇಕ್ಷಕರ ಮನಗೆದ್ದಿತ್ತು. ಹಲವು ತಿರುವುಗಳು, ಕುತೂಹಲಕಾರಿ ಘಟ್ಟಗಳು ಮತ್ತು ಕುಟುಂಬ ಮೌಲ್ಯಗಳನ್ನು ಒಳಗೊಂಡ ಧಾರಾವಾಹಿ ಇದಾಗಿತ್ತು.

45
ಭಾಗ್ಯವಂತರು ಧಾರಾವಾಹಿ

ಇನ್ನು ಶೀಘ್ರದಲ್ಲೇ ಉದಯ ಟಿವಿಯಲ್ಲಿ ಭಾಗ್ಯವಂತರು ಧಾರಾವಾಹಿ ಪ್ರಸಾರವಾಗಲಿದೆ. ತನ್ವಿ ರಾವ್ ಮತ್ತು ಸುಚೇಂದ್ರ ಪ್ರಸಾದ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಧಾರಾವಾಹಿ ಜುಲೈ 6ರಿಂದ ಶುರುವಾಗಲಿದೆ. ಹಾಗಾಗಿ ‘ಸೇವಂತಿ’ ಧಾರಾವಾಹಿ ಮುಕ್ತಾಯವಾಗಲಿದೆಯೇ ಎನ್ನಲಾಗುತ್ತಿದೆ.

55
ಸೇವಂತಿ ಧಾರಾವಾಹಿ ನಟರು

‘ಸೇವಂತಿ’ ಧಾರಾವಾಹಿಯಲ್ಲಿ ಧನ್ಯದೀಪೀಕಾ, ಪ್ರಶಾಂತ್ ಭಾರಧ್ವಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಲ್ಲದೇ ಸಂಗೀತಾ ಅನಿಲ್, ವಿನಯ್ ಕಷ್ಯಪ್, ಆಶಲತಾ, ರೂಪಶ್ರೀ ಮೊದಲಾದ ನಟ-ನಟಿಯರು ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories