Namratha Gowda: ‘ಕರ್ಣ’ ಧಾರಾವಾಹಿಯಲ್ಲಿ ನಮ್ರತಾ ಗೌಡ ಪಾತ್ರದ ಕುರಿತು ವೀಕ್ಷಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ರತಾ ಗೌಡಾಗೆ ಸೀರಿಯಲ್ ತಂಡದಿಂದ ಮೋಸ ಆಗಿದೆ, ನಮ್ರತಾರನ್ನು ಸೈಡ್ ಲೈನ್ ಮಾಡಿ, ಉಳಿದ ಪಾತ್ರಗಳನ್ನು ಮಾತ್ರ ಹೈಲೈಟ್ ಮಾಡುತ್ತಿದ್ದಾರೆ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ , ನಮ್ರತಾ ಪಾತ್ರದ ಕುರಿತು ವೀಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಮ್ರತಾ ಗೌಡ ಅವರಿಗೆ, ಅವರ ಜನಪ್ರಿಯತೆಗೆ ತಕ್ಕಂತಹ ಪಾತ್ರವನ್ನು ನೀಡುತ್ತಿಲ್ಲ, ಉಳಿದ ಪಾತ್ರಧಾರಿಗಳ ಮಧ್ಯೆ, ನಿತ್ಯಾ ಪಾತ್ರವನ್ನು ಸೈಡ್ ಲೈನ್ ಮಾಡಲಾಗುತ್ತಿದೆ, ನಮ್ರತಾಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಅಷ್ಟಕ್ಕೂ ವೀಕ್ಷಕರು ಈ ಕುರಿತು ಏನು ಹೇಳಿದ್ದಾರೆ, ನಮ್ರತಾ ಗೌಡ ಫೋಟೋಗಳಿಗೆ ಫ್ಯಾನ್ಸ್ ಏನು ಕಾಮೆಂಟ್ ಮಾಡಿದ್ದಾರೆ ಅನ್ನೋದನ್ನು ನೋಡೋಣ.
25
ನಮ್ರತಾ ಗೌಡ ಫೋಟೊಗೆ ಜನರ ಕಾಮೆಂಟ್
ಯಾಕೆ ನೀವು ಇಷ್ಟೊಂದು ಚೆನ್ನಾಗಿದ್ದೀರಾ? ಆದ್ರೆ ಕರ್ಣ ಸೀರಿಯಲ್ ನಲ್ಲಿ ಯಾಕೆ ನಿಮಗೆ ನಿಮ್ಮದೇ ಆದ ಸ್ಪೆಷಲ್ ಪ್ರೊಮೋಗಳನ್ನು ಕೊಟ್ಟಿಲ್ಲ. ಹೀರೋ ಕರ್ಣನ ಜೊತೆ ಬರೀ ಬೇರೆ ಪಾತ್ರಗಳನ್ನು ಹೈಲೈಟ್ ಮಾಡಿ, ನಿಮ್ಮ ಪಾತ್ರವನ್ನು ಡ್ಯಾಮೇಜ್ ಮಾಡುತ್ತಿದ್ದಾರೆ. ಒಂದು ಸೀರಿಯಲ್ ಅಂದಮೇಲೆ ಹೀರೋ ಜೊತೆ ಜಾಸ್ತಿ ಸೀನ್ ಇರಬೇಕು ಅಲ್ವಾ? ಮೊದಲಿಂದನೂ ನಿಮ್ಮನ್ನು ಹೀರೋ ಬಿಟ್ಟು ಬೇರೆಯವರ ಜೊತೆ ತೋರಿಸುತ್ತಿದ್ದಾರೆ. ತೇಜಸ್ ಜೊತೆ ಪೇರ್ ಆಗ್ಬೇಡಿ, ನಿಮ್ಮ ಕರ್ಣ ಲವ್ ಸ್ಟೋರಿ ಯಾವಾಗ ಶುರುವಾಗುತ್ತೆ ಎಂದು ಕಾಯುತ್ತಿದ್ದೇವೆ. ಆದರೆ ಬೇರೆಯವರ ಪಾತ್ರವನ್ನು ಪಾಸಿಟಿವ್ ಮಾಡಲು ನಿಮ್ಮನ್ನು ನೆಗೆಟಿವ್ ಆಗಿ ತೋರಿಸುವುದು ನಮಗೆ ಇಷ್ಟ ಆಗ್ತಿಲ್ಲ ಎಂದಿದ್ದಾರೆ.
35
ನಿತ್ಯಾ ಪಾತ್ರಕ್ಕೆ ಹೆಚ್ಚಿನ ಪ್ರೊಮೋಗಳೇ ಇಲ್ಲ
ನಿತ್ಯಾ ಪಾತ್ರಕ್ಕೆ ಮೊದಲಿನಿಂದಲೂ ಸ್ಪೆಷಲ್ ಪ್ರೊಮೋ ಇಲ್ಲ. ನಿಧಿ ಪಾತ್ರಕ್ಕೆ ಮಾತ್ರ ಸ್ಪೆಷಲ್ ಪ್ರೊಮೋ ಕೊಟ್ಟು, ಕಿರಣ್ ರಾಜ್ ನಂತಹ ಟ್ಯಾಲೆಂಟ್ ಹೀರೋ ಜೊತೆ ಜಾಸ್ತಿ ಸೀನ್ ಹೈಲೈಟ್ ಮಾಡಿ, ಕರ್ಣ-ನಿತ್ಯಾ ಮ್ಯಾರೇಜ್ ಸೀನಲ್ಲೂ ನಿಧಿನ ಹೈಲೈಟ್ ಮಾಡಿ, ನಿಧಿನ ಸಿಂಪತಿ ಕಾರ್ಡ್ ಆಗಿ ಮಾಡಿ, ನಿತ್ಯಾ ಪಾತ್ರವನ್ನು ಸೈಡ್ ಕ್ಯಾರೆಕ್ಟರ್ ಮಾಡಿ, ಲವ್ -ಪ್ರೆಗ್ನೆನ್ಸಿ ಡ್ರಾಮಾ ಮಾಡಿ, ನೆಗೆಟಿವ್ ಮಾಡಿದ್ದೀರಿ. ನಮ್ರತಾ ಟ್ಯಾಲೆಂಟೆಡ್ ನಟಿ, ಒಂದ ನಿತ್ಯಾ ಮತ್ತು ಕರ್ಣ ಮದುವೆ ಮಾಡಿ, ಇಲ್ಲಾಂದ್ರೆ ನಿತ್ಯಾಗೆ ಹೊಸ ಹೀರೋನಾದ್ರು ಕೊಡಿ ಎನ್ನುತ್ತಿದ್ದಾರೆ ಒಂದಷ್ಟು ಜನ.
ಇನ್ನೂ ಕೆಲವರು ಕಾಮೆಂಟ್ ಮಾಡಿ ನೀವು ಬಹುಮುಖ ಪ್ರತಿಭೆ. ಆದರೆ ಕರ್ಣ ಧಾರಾವಾಹಿಯಲ್ಲಿ ನಿಮಗೆ ಮೋಸ ಆಗಿದೆ. ಮುಂಚೆ ನಿಮ್ಮನ್ನೇ ನಾಯಕಿ ಎಂದು ತೆಗೆದುಕೊಂಡು, ಪ್ರೊಮೋಗೆ ನೆಗೆಟಿವ್ ಬಂಟು ಅಂತ, ಎರಡು ಬಾರಿ ನಾಯಕ ಕರ್ಣ ಜೊತೆ ಫೇಕ್ ಮ್ಯಾರೇಜ್ ಮಾಡಿ, ನಿಮ್ಮನ್ನು ಬಳಸಿಕೊಂಡಿದ್ದಾರೆ. ನಿಮಗೋಸ್ಕರ ಯಾವುದೇ ಪ್ರೊಮೋ ವಿಡಿಯೋ ಇಲ್ಲ. ನಿಮ್ಮನ್ನು ಈ ರೀತಿ ನೋಡಿ ಬೇಜಾರಾಗುತ್ತೆ, ದಯವಿಟ್ಟು ನಿಮ್ಮ ಸೀನ್ ಬಗ್ಗೆ ಕ್ಲಾರಿಟಿ ಕೊಡಿ ಎಂದಿದ್ದಾರೆ.
55
ಅಭಿಮಾನಿಗಳ ನಿರಾಶೆ
ನಮ್ರತಾ ಗೌಡ ಅಭಿಮಾನಿಗಳಿಗೆ ನಟಿಯನ್ನು ಸೀರಿಯಲ್ ನಾಯಕಿಯಾಗಿ ನೋಡುವ ಆಸೆ, ಆದರೆ ಅವರನ್ನು ಸೈಡ್ ರೋಲ್ ಮಾಡ್ತಿರೋದು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಧಾರಾವಾಹಿಗೆ ಏನು ಬೇಕು? ಏನು ಬೇಡ ಅನ್ನೋದು ಸೀರಿಯಲ್ ತಂಡಕ್ಕೆ ಗೊತ್ತಿರುತ್ತೆ. ಹಾಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನು ಸೀರಿಯಲ್ ನೋಡಿಯೇ ತಿಳಿದುಕೊಳ್ಳಬೇಕು. ಅಲ್ಲಿವರೆಗೂ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.