ಜಾನು ನೆನಪಲ್ಲಿ ದೇವದಾಸ್ ಆಗಿರೋ ಲಕ್ಷ್ಮೀ ನಿವಾಸ ವಿಶ್ವನ ಕುರಿತು ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

Published : Jun 05, 2024, 05:35 PM IST

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಜಾಹ್ನವಿಯನ್ನು ಪ್ರೀತಿಸಿ, ಸದ್ಯ ಪ್ರೀತಿಯನ್ನು ಕಳೆದುಕೊಂಡು ದೇವದಾಸ್ ಆಗಿರೋ ವಿಶ್ವನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.   

PREV
17
ಜಾನು ನೆನಪಲ್ಲಿ ದೇವದಾಸ್ ಆಗಿರೋ ಲಕ್ಷ್ಮೀ ನಿವಾಸ ವಿಶ್ವನ ಕುರಿತು ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದ ವಿಶ್ವನ ಪಾತ್ರ ನಿಮಗೆಲ್ಲರಿಗೂ ಗೊತ್ತಿದೆ. ಬೆಸ್ಟ್ ಫ್ರೆಂಡ್ ಆಗಿದ್ದ ಜಾಹ್ನವಿಯನ್ನು ಬೆಟ್ಟದಷ್ಟು ಪ್ರೀತಿಸಿ, ಆಕೆಗೆ ಹೇಳೋದಕ್ಕೂ ಸಾಧ್ಯವಾಗದೇ, ಆಕೆಗೆ ಬೇರೆ ಮದುವೆಯಾದ ನೆನಪಿನಲ್ಲಿಯೇ ನೋವನ್ನುಂಡು ಕುಡಿತಕ್ಕೆ ದಾಸನಾಗಿರೋ ವಿಶ್ವನ ನಿಜವಾದ ಹೆಸರು ಭವಿಶ್ ಗೌಡ. 
 

27

ಭವಿಶ್ ಗೌಡ (Bhavish Gowda) ಪ್ರೀತಿ ಕಳೆದುಕೊಂಡು ಒದ್ದಾಡುತ್ತಿರುವ ವಿಶ್ವನ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಜಾನು ಮತ್ತು ವಿಶ್ವನ ಜೋಡಿ ವೀಕ್ಷಕರಿಗೆ ಇಷ್ಟವಾಗಿತ್ತು, ಇನ್ನೇನು ವಿಶ್ವ ಜಾಹ್ನವಿಗೆ ಪ್ರೀತಿ ಹೇಳಿಕೊಳ್ಳುತ್ತಾನೆ ಎನ್ನುವಾಗಲೇ, ಜಯಂತ್ ಎಂಟ್ರಿ ಕೊಟ್ಟು ಕಥೆಗೆ ಟ್ವಿಸ್ಟ್ ಸಿಕ್ಕಿತ್ತು. ಇದಾದ ನಂತರ ವಿಶ್ವನಿಗಾಗಿ ವೀಕ್ಷಕರು ಕೊರಗಿದ್ದೂ ಸಹ ಇದೆ. 
 

37

ವಿಶ್ವ ಪಾತ್ರದ ಮೂಲಕ ಗಮನ ಸೆಳೆದ ಭವಿಶ್ ಗೌಡ ಇವರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. ಇವರು ನಟನೆಗೇನು ಹೊಸಬರಲ್ಲ, ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಭವಿಶ್ , ಓದಿದ್ದು ಇಂಜಿನಿಯರಿಂಗ್, ಆದ್ರೆ ನಟನೆಯ ಮೇಲಿನ ಒಲವಿನಿಂದಾಗಿ ಆಗಿದ್ದು ನಟ. 
 

47

ನಟನೆ ಬಗ್ಗೆ ತುಂಬಾನೆ ಆಸಕ್ತಿ ಬೆಳೆಸಿಕೊಂಡಿದ್ದ ಭವಿಶ್, ತಮ್ಮ ಇಂಜಿನಿಯರಿಂಗ್ (engineering) ಮುಗಿದ ತಕ್ಷಣ ಆಕ್ಟಿಂಗ್ ಕೋರ್ಸ್ ಗೆ ಸೇರಿದ್ದಾರೆ. ಈ ಮೊದಲು ಭವಿಶ್ ಹೂಮಳೆ ಸೀರಿಯಲ್‌ನಲ್ಲಿ ನಟಿಸಿದ್ದರು. ಇದು ಅವರ ಮೊದಲ ಸೀರಿಯಲ್. ಇದಾದ ಬಳಿಕ ಇವರು ಮಧುಮಗಳು ಸೀರಿಯಲ್ ನಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. 
 

57

ಜನಪ್ರಿಯ ಸೀರಿಯಲ್ ಆಗಿರುವ ಕನ್ನಡತಿಯಲ್ಲೂ ಭವಿಶ್ ನಟಿಸಿದ್ದರು. ಕಥೆಯೊಂದು ಶುರುವಾಗಿದೆ ಸೀರಿಯಲ್ ನಲ್ಲಿ ಸಾಮ್ರಾಟ್ ಎನ್ನುವ ನೆಗೆಟಿವ್ ಪಾತ್ರದಲ್ಲೂ ಇವರು ಬಣ್ಣ ಹಚ್ಚಿದ್ದರು. ಸದ್ಯ ಜನನಿ ಸೀರಿಯಲ್‌ನಲ್ಲೂ ನಾಯಕನಾಗಿ ನಟಿಸುತ್ತಿದ್ದಾರೆ. ಲಕ್ಷ್ಮೀ ನಿವಾಸ ಮತ್ತು ಜನನಿ ಸೀರಿಯಲ್ ಎರಡರಲ್ಲೂ ಭವಿಶ್ ಜೊತೆಯಾಗಿ ನಟಿಸುತ್ತಿದ್ದಾರೆ. 
 

67

ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿತ್ತಂತೆ ಇವರಿಗೆ ಆದರೆ, ಹೀರೋಗಿಂತ ಚೆನ್ನಾಗಿದ್ದಾರೆಂದು ರಿಜೆಕ್ಟ್ ಆಗಿದ್ರಂತೆ. ಇನ್ನು ಅತ್ಯುತ್ತಮ ನಟನಾಗಿ ಹೆಸರು ಮಾಡಬೇಕೆಂದು ಇವರ ಬಹು ದೊಡ್ಡ ಕನಸು, ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೀನಿ ಎನ್ನುತ್ತಾರೆ ಭವಿಶ್. 
 

77

ಇತ್ತೀಚೆಗೆ ಭವಿಶ್ ಝೀಕನ್ನಡದ ರಿಯಾಲಿಟಿ ಶೋ ಮಹಾನಟಿಯಲ್ಲೂ (Mahanati) ನಟಿಸಿ ಬಂದಿದ್ದರು, ಅಲ್ಲಿ ಅದ್ಭುತವಾಗಿ ನಟಿಸುವ ಮೂಲಕ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದರು. ಮಹಾನಟಿಯಲ್ಲಿ ಅವಕಾಶ ಕೊಟ್ಟಿದ್ದಕ್ಕಾಗಿ ಹಾಗೂ ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು, ತರುಣ್ ಸುದೀರ್ ಮತ್ತು ಅನುಶ್ರೀಯವರ ಹಾರೈಕೆ ಹಾಗೂ ಅವರ ಜೊತೆಗೆ ಇರಲು ಅವಕಾಶ ಕಲ್ಪಿಸಿದ್ದಕ್ಕೆ ಥ್ಯಾಂಕ್ಯೂ ಎಂದು ಹೇಳಿ ದೊಡ್ಡದಾಗಿ ನೋಟ್ ಕೂಡ ಬರೆದು ಹಂಚಿಕೊಂಡಿದ್ದರು ಭವಿಶ್. 
 

click me!

Recommended Stories