ಇಂಗ್ಲಿಷ್ ಬರಲ್ಲ ಅಂತ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆಗಿದ್ದ ಇವರು ಈಗ ಕನ್ನಡ ಪ್ರೇಕ್ಷಕರ ಫೇವರಿಟ್ ನಟ!

Published : Dec 14, 2024, 04:39 PM ISTUpdated : Dec 14, 2024, 07:23 PM IST

ಕನ್ನಡ ಕಿರುತೆರೆಯ ಜನಪ್ರಿಯ ನಟ ಗಗನ್ ಚಿನ್ನಪ್ಪ, ಹಿಂದೆ ಇಂಗ್ಲಿಷ್ ಬಾರದೆ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆಗಿದ್ದರಂತೆ. ಅಲ್ಲಿಂದ ಇದೀಗ ಜನಪ್ರಿಯ ನಟನಾಗುವವರೆಗೆ ಗಗನ್ ನಡೆದು ಬಂದ ಹಾದಿ ದೊಡ್ಡದು.   

PREV
17
ಇಂಗ್ಲಿಷ್ ಬರಲ್ಲ ಅಂತ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆಗಿದ್ದ ಇವರು ಈಗ ಕನ್ನಡ ಪ್ರೇಕ್ಷಕರ ಫೇವರಿಟ್ ನಟ!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸೀತಾರಾಮದಲ್ಲಿ ರಾಮನ ಪಾತ್ರದ ಮೂಲಕ ಕನ್ನಡ ವೀಕ್ಷಕರ ಮನ ಗೆದ್ದ ನಟ ಗಗನ್ ಚಿನ್ನಪ್ಪ (Gagan Chinnappa). ತಮ್ಮ ನ್ಯಾಚುರಲ್ ಅಭಿನಯದಿಂದ ಕನ್ನಡಿಗರ ಪ್ರೀತಿಯ ರಾಮ ಆಗಿ ಮಿಂಚುತ್ತಿರುವ ಗಗನ್ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಗಗನ್ ಕುರಿತಾದ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. 

27

ಗಗನ್ ಚಿನ್ನಪ್ಪ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟದ್ದು ಮಂಗಳ ಗೌರಿ ಮದುವೆ ಸೀರಿಯಲ್ (Mangala Gowri Madwe) ಮೂಲಕ. ಈ ಧಾರಾವಾಹಿಯಲ್ಲಿ ರಾಜೀವ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ವೀಕ್ಷಕರ ಮನ ಗೆದ್ದಿದ್ದ ನಟ ಇವರು. ಮಂಗಳ ಗೌರಿಯಲ್ಲಿನ ಪೊಲೀಸ್ ಪಾತ್ರ ಗಗನ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಆದರೆ ಅದಕ್ಕೂ ಮುನ್ನ ಗಗನ್ ಏನ್ ಮಾಡುತ್ತಿದ್ದರು ಗೊತ್ತಾ? 
 

37

ಗಗನ್ ವಿದ್ಯಾಭ್ಯಾಸ ಮುಗಿಸಿ, ಕರಿಯರ್ ಆರಂಭಿಸುವಾಗ ಅಷ್ಟೊಂದು ಇಂಗ್ಲಿಷ್ ಬರುತ್ತಿರಲಿಲ್ಲವಂತೆ. ಹಾಗಾಗಿ ಇಂಟರ್ವ್ಯೂನಲ್ಲಿ ಗಗನ್ ರಿಜೆಕ್ಟ್ ಆಗಿದ್ದರು. ಹಾಗಂತ ಸುಮ್ಮನೆ ಕೂರಲಿಲ್ಲ ಗಗನ್, ಎರಡು ತಿಂಗಳಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತು ಅದೇ ಕೆಲಸವನ್ನು ಗಿಟ್ಟಿಸಿಕೊಂಡಿದ್ದರು ಇವರು. 
 

47

ಡಿಗ್ರಿ ಪಡೆದ ನಂತರ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಮಾಡುತ್ತಿದ್ದ ಗಗನ್ ಗೆ, ಹಣ ಇದ್ದರೂ ಸಂತೋಷ ಇರಲಿಲ್ಲವಂತೆ. ನಟನೆ ಮೇಲೆ ಸಿಕ್ಕಾಪಟ್ಟೆ ಒಲವು ಬೆಳೆಸಿಕೊಂಡಿದ್ದ ಗಗನ್, ಕನ್ನಡ ಸೀರಿಯಲ್ ಗಾಗಿ ಹಲವಾರು ಆಡಿಶನ್ ಗಳನ್ನು ಕೊಟ್ಟಿದ್ದರು, ಅಷ್ಟೇ ಅಲ್ಲ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದರು ಈ ಚೆಲುವ. 
 

57

ನಂತರ ಅವರಿಗೆ ಮಂಗಳ ಗೌರಿಯ ಮದುವೆ ಸೀರಿಯಲ್ ನಲ್ಲಿ ಅವಕಾಶ ಸಿಕ್ಕಿತು, ಅದಾದ ಬಳಿಕ ಗಗನ್ ತೆಲುಗಿನಲ್ಲೂ ಗುರುತಿಸಿಕೊಂಡರು. ಕೃಷ್ಣ ಮುಕುಂದ ಮುರಾರಿ ಸೀರಿಯಲ್ ನಲ್ಲಿ (Telugu Serial) ನಾಯಕನಾಗಿ ನಟಿಸಿದ್ದರು ಇವರು. ಇದಲ್ಲದೇ ಕನ್ನಡದ ಮಿನಿ ಬಿಗ್ ಬಾಸ್ ನಲ್ಲೂ ಗಗನ್ ಕಾಣಿಸಿಕೊಂಡಿದ್ದರು. 
 

67

ಇನ್ನು ಗಗನ್ ಚಿನ್ನಪ್ಪ, ತಮ್ಮ ಫಿಟ್ನೆಸ್ ಬಗ್ಗೆ ತುಂಬಾನೆ ಗಮನ ಕೊಡುತ್ತಾರೆ. ತಮ್ಮ ಆರೋಗ್ಯ ಹಾಗೂ ಫಿಟ್ನೆಸ್ ಸರಿಯಾಗಿಟ್ಟುಕೊಳ್ಳಲು, ನಿರಂತರವಾಗಿ ವ್ಯಾಯಾಮ, ವರ್ಕೌಟ್ ಮಾಡ್ತಾರೆ. ಅಷ್ಟೇ ಅಲ್ಲ ಆಹಾರದಲ್ಲೂ ಜಾಗರೂಕತೆ ವಹಿಸುವ ಇವರು ಎಣ್ಣೆ, ಉಪ್ಪು, ಸಕ್ಕರೆಯನ್ನು ತಮ್ಮ ಆಹಾರದಲ್ಲಿ ಸಾಕಷ್ಟು ಅವಾಯ್ಡ್ ಮಾಡ್ತಾರೆ. 
 

77

ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿರುವ ಹ್ಯಾಂಡ್ಸಮ್  ಗಗನ್ ತಮ್ಮ ಲವ್ ಲೈಫ್(love life) ಮೂಲಕವೂ ಸುದ್ದಿಯಾಗಿದ್ದರು. ಇವರು ತಮ್ಮ ಗರ್ಲ್ ಫ್ರೆಂಡ್ ಜೊತೆಗಿರುವ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಷಯದ ಬಗ್ಗೆ ಕೆಲವು ತಿಂಗಳ ಹಿಂದೆ ಇಂಟರ್ವ್ಯೂ ಒಂದರಲ್ಲಿ ಮಾತನಾಡಿ ಅದು ಹಳೆಯ ಫೋಟೊ, ಈಗ ಬ್ರೇಕಪ್ ಆಗಿದೆ. ನಾನೀಗ ಸಿಂಗಲ್ , ರೆಡಿ ಟು ಮಿಂಗಲ್ ಅಂದಿದ್ದಾರೆ. 
 

Read more Photos on
click me!

Recommended Stories