ಕೆಂಡ ಸಂಪಿಗೆ ಸೀರಿಯಲ್ (Kendasampige Serial) ಮೂಲಕ ಗುರುತಿಸಿಕೊಂಡ ನಟಿ ಕಾವ್ಯಾ ಶೈವ. ಈ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಕಾವ್ಯ ಮಿಂಚಿದ್ದರು. ಆದರೆ ಅಚಾನಕ್ ಆಗಿ ಸೀರಿಯಲ್ ತೊರಿದಿದ್ದರು. ಸುಮನಾ ಪಾತ್ರದಲ್ಲಿ ಕಾವ್ಯಾರನ್ನು ನೋಡಿ ಇಷ್ಟಪಟ್ಟಿದ್ದ ವೀಕ್ಷಕರಿಗೆ ಬೇರೆ ವ್ಯಕ್ತಿಯನ್ನು ಆ ಪಾತ್ರದಲ್ಲಿ ನೋಡಲು ಇಷ್ಟವಾಗಿರಲೇ ಇಲ್ಲ. ಕೊನೆಗೆ ಸೀರಿಯಲ್ ಕೂಡ ಬೇಗನೆ ಕೊನೆಗೊಂದಿತ್ತು.
ಸೀರಿಯಲ್ ನಿಂದ ಹೊರ ಬಂದ ಬಳಿಕ ಮುಂದೇನು ಮಾಡೋದು ಎಂದು ಗೊಂದಲದಲ್ಲಿದ್ದಾಗ, ಕಾವ್ಯಾ (Kavya Shaiva)ಡ್ಯಾನ್ಸ್ ಕ್ಲಾಸ್ ಸೇರುವ ಪ್ಲ್ಯಾನ್ ಮಾಡಿದ್ದರಂತೆ, ಅದೇ ಸಮಯದಲ್ಲಿ ಕಾವ್ಯಾಗೆ ಡಿಕೆಡಿಯಿಂದ ಕರೆ ಬಂದಿತ್ತು. ಬಯಸಿದ ಬಾಗಿಲು ತೆರೆಯಿತು ಅನ್ನೋದು ಇದ್ದಕ್ಕೇನೆ. ಆದರೆ ಕರೆ ಬಂದಾಗ ಡ್ಯಾನ್ಸ್ ಅಷ್ಟೇನು ಗೊತ್ತಿಲ್ಲ ಎಂದಿದ್ದರಂತೆ, ಆದರೆ ಅವರು ಈ ಸಲ ನಾವು ನಾನ್ ಡ್ಯಾನ್ಸರ್ ಗಳನ್ನು ಇಟ್ಟುಕೊಂಡು ಡ್ಯಾನ್ಸ್ ಶೋ ನಡೆಸೋದು ಎಂದುಕೊಂಡು, ಕಾವ್ಯರನ್ನು ಕಾರ್ಯಕ್ರಮದ ಸ್ಪರ್ಧಿಯಾಗಿ ಆಯ್ಕೆ ಮಾಡಿದ್ದರು.
ಅಲ್ಲಿಂದ ಇಲ್ಲಿವರೆಗೆ ಭರ್ಜರಿ ಡ್ಯಾನ್ಸ್ ಪ್ರದರ್ಶನ ಕೊಟ್ಟ ಕಾವ್ಯಾ ಶೈವ ಇದೀಗ ಅಪ್ಪು ಟ್ರೋಫಿಯನ್ನು ಗೆದ್ದ ಸಂಭ್ರಮದಲ್ಲಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ವಿಜೇತರಾದ ಶಶಾಂಕ್ ಮತ್ತು ಕಾವ್ಯಾಗೆ ಪುನೀತ್ ರಾಜ್‌ಕುಮಾರ್ ಅವರ ಟ್ರೋಫಿ (Punith Rajkumar Trophy) ಜೊತೆಗೆ 15 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಸಿಕ್ಕಿದೆ. ಈ ಸಂಭ್ರಮದಲ್ಲಿ ತೇಲಾಡುತ್ತಿರುವ ಕಾವ್ಯಾ ಶೈವ ಇದೀಗ, ಡಿಕೆಡಿಯ ಸಹ ಸ್ಪರ್ಧಿ ಜೊತೆ ಗೋಕರ್ಣ, ಯಾನ ಟ್ರಾವೆಲ್ ಮಾಡುತ್ತಿದ್ದಾರೆ.
ಹೌದು, ಕಾವ್ಯಾ ಶೈವ ತಮ್ಮ ಸಹ ಸ್ಪರ್ಧಿ ಮೇಘನಾ ಶಂಕರಪ್ಪ (Meghana Shankarappa) ಜೊತೆ ಜಾಲಿ ಮೂಡ್ ನಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ತಾಣವಾದ ಯಾಣ ಹಾಗೂ ಗೋಕರ್ಣಕ್ಕೆ ತೆರಳಿದ್ದು, ಅಲ್ಲಿನ ಬೀಚ್ ನಲ್ಲಿ ಎಂಜಾಯ್ ಮಾಡುತ್ತಾ, ಸೂರ್ಯಸ್ತಮಾನವನ್ನು ವೀಕ್ಷಿಸುತ್ತಾ, ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಕಾವ್ಯಾ ಹಾಗೂ ಮೇಘನಾ ಇಬ್ಬರೂ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಮೇಘನಾ ಶಂಕ್ರಪ್ಪ ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ (Seetha Rama Serial) ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಸದ್ಯ ಡಿಕೆಡಿ ಡ್ಯಾನ್ಸ್ ನಲ್ಲೇ ಬ್ಯುಸಿಯಾಗಿದ್ದರು. ಎಲ್ಲಾ ರೀತಿಯ ಡ್ಯಾನ್ಸ್ ಗಳನ್ನು ಸಹ ಅದ್ಭುತವಾಗಿ ಮಾಡುವ ಮೂಲಕ ತೀರ್ಪುಗಾರರಿಂದಲೂ ಭೇಷ್ ಅನಿಸಿಕೊಂಡಿದ್ದರು ಮೇಘನಾ. ಇದೀಗ ಡ್ಯಾನ್ಸ್ ನಿಂದ ವಿರಾಮ ಸಿಕ್ಕಿದ್ದು, ಗೆಳತಿ ಜೊತೆ ಎಂಜಾಯ್ ಮಾಡ್ತಿದ್ದಾರೆ.
ಇನ್ನು ಮೇಘನಾ ಶಂಕರಪ್ಪ ಸ್ಲೀವ್ ಲೆಸ್ ಟಾಪ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಲುಕ್ ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಮ್ಮನ್ನ ನೋಡಿದ್ರೆ ಯೋಗರಾಜ್ ಭಟ್ಟರ ಮೂವಿ ಹೀರೋಯಿನ್ ಥರ ಕಾಣಿಸ್ತೀರಿ ಎಂದಿದ್ದಾರೆ. ಅಷ್ಟೇ ಅಲ್ಲ ಸೀತಾ ರಾಮ ಧಾರಾವಾಹಿಯಲ್ಲಿ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತಾನೂ ಹೇಳಿದ್ದಾರೆ.