ಟಿಕ್‌ಟಾಕ್, ರೀಲ್ಸ್, ಮತ್ತು ಯೂಟ್ಯೂಬ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಹೊಂದಿರುವ ವರ್ಷ ಕಾವೇರಿ ಬಿಗ್ ಬಾಸ್‌ಗೆ ಬರ್ತಾರಾ?
ಕಿರುತೆರೆ ನಟ ವರುಣ್ ಆರಾಧ್ಯ ಜೊತೆ ವರ್ಷ ಕಾವೇರಿ ಬ್ರೇಕಪ್ ಮಾಡಿಕೊಂಡ ನಂತರ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವುದು ಬಿಗ್ ಬಾಸ್ ಎಂಟ್ರಿಗೆ ಕಾರಣವಾಗುತ್ತದೆ.
ವರ್ಷ ಕಾವೇರಿಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ನಾಲ್ಕು ಸ್ನೇಹಿತರು ಕೂಡ ದೂರವಾಗಿದ್ದಾರೆ. ವರ್ಷ ಕಾವೇರಿ ಒಂಟಿ ಅಲ್ಲ ಎಂದು ನೆಟ್ಟಿಗರು ಧ್ವನಿ ಎತ್ತುತ್ತಿದ್ದಾರೆ.
ಹಲವಾರು ವಿಚಾರಗಳ ಬಗ್ಗೆ ವರ್ಷ ಕಾವೇರಿ ಸ್ಪಷ್ಟನೆ ನೀಡಬೇಕಿದೆ. ಈ ಕಾರಣಕ್ಕೆ ಆದರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿ ಅಂತಿದ್ದಾರೆ ಫ್ಯಾನ್ಸ್.
ಸುಮಾರು 1 ಮಿಲಿಯನ್ ಫಾಲೋವರ್ಸ್ ಹೊಂದಿರುವ ವರ್ಷ ಕಾವೇರಿ ಖಾಸಗಿ ಬ್ರ್ಯಾಂಡ್ ಮಾರ್ಕೆಟಿಂಗ್ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ನೋಡ್ರೋ ಮಾತಿಗೆ ಮುಂಚೆ ವರ್ಷ ಕಾವೇರಿನ ದೂರ ಮಾಡುವ ಜನರೇ....ಆಕೆ ಬೆಳವಣಿಗೆಯನ್ನು ನೋಡಿ ಚೆನ್ನಾಗಿ ಉರ್ಕೊಳ್ಳಿ ಫ್ರೆಂಡ್ಸ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.