ತುತ್ತು ಅನ್ನಕ್ಕಾಗಿ ಮಾತಿಗೆ ಮಾತು ಬೆಳೆಸಿದ ಐಶ್ವರ್ಯ - ಸುರೇಶ್… ಇಬ್ಬರಲ್ಲಿ ಸರಿ ಯಾರು? ತಪ್ಪು ಯಾರು?

Published : Nov 11, 2024, 07:24 PM ISTUpdated : Nov 12, 2024, 07:25 AM IST

ಬಿಗ್ ಬಾಸ್ ಮನೆಯಲ್ಲಿ ಇದೀಗ ತುತ್ತು ಅನ್ನಕ್ಕಾಗಿ ಕಾದಾಟ ನಡೆದಿದೆ. ಐಶ್ವರ್ಯ ಮತ್ತು ಗೋಲ್ಡ್ ಸುರೇಶ್ ಅನ್ನಕ್ಕಾಗಿ ಜಗಳ ಮಾಡಿದ್ದಾರೆ.   

PREV
16
ತುತ್ತು ಅನ್ನಕ್ಕಾಗಿ ಮಾತಿಗೆ ಮಾತು ಬೆಳೆಸಿದ ಐಶ್ವರ್ಯ - ಸುರೇಶ್… ಇಬ್ಬರಲ್ಲಿ ಸರಿ ಯಾರು? ತಪ್ಪು ಯಾರು?

ದೊಡ್ಮನೆಯಲ್ಲಿ (Bigg Boss Season 11) ಯಾವ ವಿಷ್ಯಕ್ಕೆ ಜಗಳ ನಡೆಯೋದಿಲ್ಲ ಹೇಳಿ. ಸಣ್ಣ ಪುಟ್ಟ ವಿಷಯಗಳನ್ನೆ ದೊಡ್ಡದು ಮಾಡಿ, ಅದಕ್ಕೆ ಜಗಳಕ್ಕೆ ಕಾರಣವನ್ನಾಗಿಸಿ, ಪ್ರತಿಯೊಬ್ಬರು ಜಗಳ ಮಾಡೋದೆ ಆಯ್ತು, ಯಾರೂ ಕೂಡ ಯಾರ್ ಯಾಕೆ ಹೀಗೆ ಹೇಳ್ತಿದ್ದಾರೆ ಅಂತ ಅರ್ಥ ಮಾಡ್ಕೊಳ್ಳೋಕೆ ಹೋಗಲ್ಲ. ಅಂತಹುದೇ ಒಂದು ಘಟನೆ ಇದೀಗ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. 
 

26

ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದಾಗಲೆಲ್ಲಾ, ಮನೆಯವರಿಂದ ಒಂದೊಂದು ವಸ್ತುಗಳನ್ನು ಬಿಗ್ ಬಾಸ್ ಕಿತ್ತುಕೊಳ್ಳುತ್ತೆ. ಹಿಂದೊಮ್ಮೆ ತರಕಾರಿಯನ್ನು ಕಿತ್ತುಕೊಂಡಿತ್ತು, ಮೊನ್ನೆ ತಿನ್ನೋ ಪ್ಲೇಟ್ ಅನ್ನೆ ತೆಗೆದುಕೊಂಡಿತ್ತು. ಅಲ್ಲಿ ತಿನ್ನೋದಕ್ಕೂ ಇಷ್ಟು ಅಂತ ಲಿಮಿಟ್ ಇರುತ್ತೆ, ಅದಕ್ಕಿಂತ ಜಾಸ್ತಿ ತೆಗೆದ್ರೆ ಗಲಾಟೆ ಗ್ಯಾರಂಟಿ. ಇದು ಎಲ್ಲಾ ಸೀಸನ್ ಗಳಲ್ಲೂ ನಡೆಯುತ್ತೆ. 
 

36

ಇದೀಗ  ಐಶ್ವರ್ಯ (Aishwarya Sindhogi) ತಮ್ಮ ಪ್ಲೇಟ್ ಗೆ ಸ್ವಲ್ಪ ಹೆಚ್ಚು ಆಹಾರ ಹಾಕಿಸಿಕೊಂಡಿದ್ದಾರೆ. ಇದನ್ನ ನೋಡಿದ ಸುರೇಶ್, ಇನ್ನೂ ಏಳು ಜನ ಇದ್ದಾರೆ ಎಂದಿದ್ದಾರೆ. ಅದಕ್ಕೆ ಐಶ್ವರ್ಯ ಪ್ಲೇಟ್ ಗೆ ಹಾಕಿದ ಅನ್ನವನ್ನು ವಾಪಾಸ್ ಪಾತ್ರೆಗೆ ಹಾಕಿದ್ದಾರೆ. ಇದೇ ವಿಷ್ಯದಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ. 
 

46

ಸ್ವಲ್ಪ ರೈಸ್ ಹಾಕಿಕೊಂಡಿದ್ದೇನೆ.  ಯಾಕೆ ಇಷ್ಟು ಮಾತಾಡ್ಬೇಕು. ನನ್ನ ಪಾಲಿನ ರೈಸ್ ನಾನು ಹಾಕಿಕೊಂಡಿದ್ದೇನೆ. ಅದು ಬಿಟ್ರೆ, ಸ್ವಲ್ಪ ಅನ್ನ ಹಾಕಿಕೊಂಡಿದ್ದೇನೆ, ಯಾವತ್ತೂ ನಂಗೆ ಯಾರೂ ವಾಪಾಸ್ ಹೀಗೆ ಕಳಿಸಿಲ್ಲ ಎನ್ನುತ್ತಾರೆ ಐಶ್ವರ್ಯ. ಉಗ್ರಂ ಮಂಜು ಸಹ ಇವರ ಪರ ಮಾತನಾಡಿದ್ದಾರೆ. 
 

56

ಯಾರಾದ್ರೂ ಸ್ವಲ್ಪ ಅನ್ನ ಬೇಕು ಅಂದ್ರೆ ಒಂದು ತುತ್ತು ಹಾಕು, ಹಾಕೋಕೆ ಏನ್ ಪ್ರಾಬ್ಲಂ ಇದೆ. ಹಾಗೇನೆ ಯಾರಾದ್ರೂ ಬಂದ್ರೆ ಸ್ವಲ್ಪ ಅನ್ನ ಹಾಕು ಎನ್ನುತ್ತಾರೆ ಉಗ್ರಂ ಮಂಜು (Ugram Manju). ಅದಕ್ಕೆ ಸುರೇಶ್ ಇನ್ನು ಎಂಟು ಜನ ತಿನ್ನೋದಕ್ಕೆ ಬಾಕಿ ಇದ್ದಾರೆ, ನಿನ್ನಿಂದ ನಾನು ಏನು ಕಲಿಬೇಕಾಗಿ ಇಲ್ಲ ಎಂದಿದ್ದಾರೆ. 
 

66

ಇಬ್ಬರ ನಡುವಿನ ಜಗಳದಲ್ಲಿ ಉಳಿದ ಸ್ಪರ್ಧಿಗಳು ಮೌನ ಪ್ರೇಕ್ಷಕರಾಗಿದ್ದಾರೆ. ಇದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂದು ಹೇಳೋ ಹಾಗಿಲ್ಲ, ಯಾಕಂದ್ರೆ, ರೇಶನ್ ಕೊಟ್ಟಿದ್ದೆ ಸ್ವಲ್ಪ ಆಗಿದ್ರೆ, ಇದ್ದದ್ರಲ್ಲಿ ಎಲ್ಲರೂ ಅಡ್ಜಸ್ಟ್ ಮಾಡಿ ತಿನ್ನಲೇಬೇಕು, ಒಬ್ರು ಸ್ವಲ್ಪ ಜಾಸ್ತಿ ತೆಗೋಂಡ್ರೂ ಉಳಿದವರಿಗೆ ಕಡಿಮೆಯಾಗುತ್ತೆ. ಅದೇ ರೀತಿ ಅನ್ನ ಜಾಸ್ತಿ ಇದ್ರೆ, ಹಸಿದವರಿಗೆ ಕೊಡೋದ್ರಲ್ಲೂ ತಪ್ಪಿಲ್ಲ. 
 

Read more Photos on
click me!

Recommended Stories