ದರ್ಶನ್ ಪತ್ನಿ ಬರ್ತ್ ಡೇ… ಮುದ್ದಿನ ಅಕ್ಕನಿಗೆ ವಿಶ್ ಮಾಡಿ, ಸ್ಟ್ರಾಂಗ್ ಲೇಡಿ ಲವ್ ಯೂ ಜಾಸ್ತಿ... ಎಂದ ನಟಿ ಕಾವ್ಯಾ ಗೌಡ

First Published | Nov 11, 2024, 5:50 PM IST

ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಮುದ್ದಾಗಿ ವಿಶ್ ಮಾಡಿದ್ದಾರೆ. 

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ (Kavya Gowda) ಹಾಗೂ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ದರ್ಶನ್ ಎಷ್ಟೊಂದು ಕ್ಲೋಸ್ ಆಗಿರ್ತಾರೆ ಅನ್ನೋದು ಗೊತ್ತೆ ಇದೆ. ಕಾವ್ಯಾ ಮನೆಯ ಪ್ರತಿಯೊಂದು ಸಮಾರಂಭದಲ್ಲೂ ವಿಜಯಲಕ್ಷ್ಮೀ ಭಾಗವಹಿಸುತ್ತಾರೆ. ಅಷ್ಟೊಂದು ಆಪ್ತರು ಇವರು. 
 

ಇಂದು ವಿಜಯಲಕ್ಷ್ಮೀ ದರ್ಶನ್ (Vijayalakshmi Darshan) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅವಳ ಗೆಳತಿಯಾಗಿರುವ ನಟಿ ಕಾವ್ಯಾ ಗೌಡ, ಅಕ್ಕನ ಸ್ಥಾನದಲ್ಲಿರುವ ವಿಜಯಲಕ್ಷ್ಮೀಯವರಿಗೆ ಪ್ರೀತಿಯಿಂದ ವಿಶ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ, ಫೋಟೊ ಹಂಚಿಕೊಂಡಿದ್ದಾರೆ. 
 

Tap to resize

ಕಾವ್ಯಾ ಗೌಡ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಮೊದಲಿಗೆ ತಮ್ಮ ಮಗಳು ಸಿಯಾಳೊಂಡಿಗೆ ವಿಜಯಲಕ್ಷ್ಮೀ ವಿಡಿಯೋ ನೋಡಿ, ಹಾಡು ಹಾಡುತ್ತಿರುವ ಮುದ್ದಾದ ವಿಡಿಯೋ ಶೇರ್ ಮಾಡಿ, ಹ್ಯಾಪಿ ಬರ್ತ್ ಡೇ ದೊಡ್ಡಮ್ಮ ಎಂದು ಬರೆದುಕೊಂಡಿದ್ದಾರೆ. 
 

ಮತ್ತೊಂದು ಸ್ಟೋರಿಯಲ್ಲಿ ಕಾವ್ಯಾ ವಿಜಯಲಕ್ಷ್ಮೀಯವರ ಜೊತೆಗಿನ ಕೆಲವು ವಿಶೇಷ ಕ್ಷಣಗಳ ಫೋಟೊ ಶೇರ್ ಮಾಡಿ, ಪ್ರೀತಿಯ ಅಕ್ಕನಿಗೆ ವಿಶೇಷವಾದ ಮೆಸೇಜ್ ಕೂಡ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಧಾರೆ ಎರೆದಿದ್ದಾರೆ ಕಾವ್ಯಾ ಗೌಡ. 
 

ನನ್ನ ಸುಂದರಿ ಅಕ್ಕನಿಗೆ ಹ್ಯಾಪಿ ಬರ್ತ್ ಡೇ, ಪದಗಳಲ್ಲಿ ಹೇಳೋದಕ್ಕಿಂತ ಜಾಸ್ತಿ ನಿಮ್ಮನ್ನ ಪ್ರೀತಿಸ್ತೇನೆ. ಯಾವಾಗ್ಲೂ ಖುಷಿಯಾಗಿರಿ, ಆ ದೇವರು ನಿಮಗೆ ಎಲ್ಲಾ ರೀತಿಯ ಸಂತೋಷ ಮತ್ತು ಯಶಸ್ಸನ್ನು ನೀಡಲಿ, ಯಾವಾಗ್ಲೂ ಶೈನ್ ಆಗ್ತಾನೆ ಇರಿ, ಯು ಆರ್ ಸ್ಟ್ರಾಂಗ್ ಲೇಡಿ, ಲವ್ ಯು ಜಾಸ್ತಿ ಎಂದಿದ್ದಾರೆ ಕಾವ್ಯಾ ಗೌಡ. 
 

ಕಾವ್ಯಾ ಗೌಡ ಮತ್ತು ವಿಜಯಲಕ್ಷ್ಮೀ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಕಳೆದ ವರ್ಷ, ಅದಕ್ಕೂ ಮೊದಲು ವಿಜಯಲಕ್ಷ್ಮೀಯವರ ಬರ್ತ್ ಡೇ ಪಾರ್ಟಿಯಲ್ಲಿ ಕಾವ್ಯಾ ಗೌಡ ಭಾಗಿಯಾಗಿ ಸಂಭ್ರಮಿಸಿದ್ದರು. ಈ ಬಾರಿ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೊಗಳನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ.. 

Latest Videos

click me!