ಅಪ್ಪು ಅಭಿಮಾನಿ ಎನ್ನುತ್ತಲೇ ಶಿವಣ್ಣನ ಭೈರತಿ ರಣಗಲ್ ಸ್ಟೈಲಲ್ಲಿ ಪೋಸ್ ಕೊಟ್ಟ ಆಂಕರ್ ಅನುಶ್ರೀ..!

Published : Feb 28, 2025, 08:47 PM ISTUpdated : Mar 01, 2025, 12:45 PM IST

ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ, ಶಿವಣ್ಣನ ಭೈರತಿ ರಣಗಲ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.  ಇವರ ಸ್ಟೈಲ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ...

PREV
16
ಅಪ್ಪು ಅಭಿಮಾನಿ ಎನ್ನುತ್ತಲೇ ಶಿವಣ್ಣನ ಭೈರತಿ ರಣಗಲ್ ಸ್ಟೈಲಲ್ಲಿ ಪೋಸ್ ಕೊಟ್ಟ ಆಂಕರ್ ಅನುಶ್ರೀ..!

ಕನ್ನಡ ಕಿರುತೆರೆಯ ಆಂಕರ್ ಅನುಶ್ರೀ ತಾನು ನಡೆಸಿಕೊಡುವ ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ಹರಳು ಹುರಿದಂತೆ ಪಟಪಟನೇ ಮಾತನಾಡುವ ಮೂಲಕ ನಾಡಿನ ಜನತೆಗೆ ಮಾತಿನ ಮಲ್ಲಿ ಎಂಬಂತೆಯೇ ಮನದೊಳಗೆ ಹೊಕ್ಕಿದ್ದಾರೆ. ಇದೀಗ ಶಿವಣ್ಣ ಅವರ ಭೈರತಿ ರಣಗಲ್ ಲುಕ್ಕಿನಲ್ಲಿ ಪೋಸ್ ಕೊಟ್ಟಿದ್ದಾರೆ.

26

ಅನುಶ್ರೀಯನ್ನು ವೇದಿಕೆ ಮೇಲೆ ನಿರೂಪಕಿಯಾಗಿ ನೋಡುವಾಗ ಅವರು ಧರಿಸುವ ತರಹೇವಾರಿ ಡ್ರೆಸ್‌ಗಳು ಮಾತ್ರ ಕಣ್ಣು ಕುಕ್ಕದೇ ಇರುವುದಿಲ್ಲ. ಹೆಣ್ಣು ಮಕ್ಕಳು ಧರಿಸುವ ಎಲ್ಲ ಮಾದರಿಯ ಡ್ರೆಸ್‌ಗಳನ್ನು ಧರಿಸಿ ಪೂರ್ಣಗೊಳಿಸಿದ ನಂತರ ಇದೀಗ ಪುರುಷರ ಡ್ರೆಸ್ ಹಾಕಿಕೊಂಡು ವೇದಿಕೆ ಮೇಲೆ ನಿರೂಪಣೆಗೆ ಬಂದಿದ್ದಾರೆ.

36

ಅನುಶ್ರೀ ಯಾವಾಗಲೂ ನಾನು ನಗುಮುಖದ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಇದೀಗ ಶಿವಣ್ಣ ಅವರ ಭೈರತಿ ರಣಗಲ್ ಸ್ಟೈಲ್‌ನಲ್ಲಿ ಮೇಲೊಂದು ಅಂಗಿ, ಕೆಳಗೊಂದು ಲುಂಗಿ ಧರಿಸಿಕೊಂಡು ವೇದಿಕೆಗೆ ಬಂದಿದ್ದಾರೆ. ಶಿವಣ್ಣ ಅವರ ಭೈರತಿ ರಣಗಲ್‌ ಸ್ಟೈಲ್‌ನಲ್ಲಿ ಕಟ್ಟಿಗೆ ಚೇರಿನ ಮೇಲೆ ಕಾಲು ಮೇಲೆ ಕಾಲು ಹಾಕಿ ಕುಳಿತು ಪೋಸ್ ಕೊಟ್ಟಿದ್ದಾರೆ.

46

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಅನುಶ್ರೀ ತಮ್ಮ ಬೈರತಿ ರಣಗಲ್ ಸ್ಟೈಲ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಪ್ರೀತಿಯ ಶಿವಣ್ಣ ಯಾವುದೇ ಪಾತ್ರ ಮಾಡಿದ್ರು ಅದು ಮೈಲಿಗಲ್ಲು ..
ಅದರಲ್ಲು ... ವಿಶೇಷ ಈ ಭೈರತಿ ರಣಗಲ್ಲು
ಇವ್ರ್ ಮುಂದೆ ನಾನು ಬರೀ ಜಲ್ಲಿಕಲ್ಲು ....
ಅಣ್ಣನ ಮೇಲಿನ ಪ್ರೀತಿಗೆ ಮಾಡಿದ ಈ ಪ್ರಯತ್ನಕ್ಕೆ ...
ಇರಲಿ ನಿಮ್ಮೆಲ್ಲರ ಪ್ರೀತಿ ನನ್ನ ಮೇಲು like ಬಿಳಿ ಎಳ್ಳು !!!  ಎಂದು ಬರೆದುಕೊಂಡಿದ್ದಾರೆ.

56

ಅನುಶ್ರೀ ಅವರ ಪೋಸ್ಟ್‌ಗೆ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳು ಆಗಿದ್ದು, 66 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ಹತ್ತಾರು ಕಾಮೆಂಟ್‌ಗಳು ಕೂಡ ಬಂದಿವೆ. ಅದರಲ್ಲಿ ಒಬ್ಬರು ನೀವು ಭೈರತಿ ರಣಗಲ್ಲು ಅಲ್ಲ, ಭೈರತಿ ಅನುಗಲ್ಲು ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಬೆಂಕಿ ಅಕ್ಕಾ ನೀನು ನೆಕ್ಸ್ಟ್‌ ಕನ್ನಡ ಇಂಡಸ್ಟ್ರಿ ಕ್ಯೂ ಟ್ ವಿಲನ್ ಎಂದು ಹೇಳಿದ್ದಾರೆ.

66

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ವೇದಿಕೆಯ ವಿಶೇಷ ಸಂಚಿಕೆಗೆ ಅನುಶ್ರೀ ಈ ಡ್ರೆಸ್ ಧರಿಸಿಕೊಂಡು ವೇದಿಕೆಗೆ ಆಗಮಿಸಿದ್ದಾರೆ. ಇನ್ನು ಕಾರ್ಯಕ್ರಮದ ಜಡ್ಜಸ್‌ಗಳಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಅವರು ವಿವಿಧ ನಾಯಕರ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories