ತೆಲುಗು ಸೀರಿಯಲ್‌ನಲ್ಲೂ ಜೋಡಿಯಾಗಿ‌ ಮಿಂಚುತ್ತಿದ್ದಾರೆ ಶ್ರೀರಸ್ತು ಶುಭಮಸ್ತು ಜೋಡಿ

Published : Feb 28, 2025, 06:01 PM ISTUpdated : Feb 28, 2025, 07:10 PM IST

ಒಂದು ಧಾರಾವಾಹಿಯಲ್ಲಿ ಜೋಡಿಯಾಗಿದ್ದವರು ಮತ್ತೊಂದು ಧಾರಾವಾಹಿಯಲ್ಲಿ ಜೋಡಿಯಾಗೋದು ತುಂಬಾನೆ ಅಪರೂಪ, ಅಂತಾದ್ರಲ್ಲಿ ಶ್ರೀರಸ್ತು ಶುಭಮಸ್ತುವಿನ ಈ ಜೋಡಿ ತೆಲುಗಿನಲ್ಲೂ ಜೋಡಿಯಾಗಿದ್ದಾರೆ.   

PREV
17
ತೆಲುಗು ಸೀರಿಯಲ್‌ನಲ್ಲೂ ಜೋಡಿಯಾಗಿ‌ ಮಿಂಚುತ್ತಿದ್ದಾರೆ ಶ್ರೀರಸ್ತು ಶುಭಮಸ್ತು ಜೋಡಿ

ಶ್ರೀರಸ್ತು ಶುಭಮಸ್ತು ಧಾರಾವಾಹಿ (Shrirastu Shubhamastu serial) ವಿಭಿನ್ನ ಕಥೆಯ ಮೂಲಕ ಗಮನ ಸೆಳೆಯುತ್ತಿದೆ. ಧಾರಾವಾಹಿಯಲ್ಲಿ ತುಳಸಿಯ ವಿರುದ್ಧ ಇದ್ದವರೆಲ್ಲಾ, ಬದಲಾಗಿ ತುಳಸಿಯ ಪರ ನಿಲ್ಲುತ್ತಿದ್ದಾರೆ. ಆದರೆ ಶಾರ್ವರಿ ಮತ್ತು ಅಭಿ ಪತ್ನಿ ದೀಪಿಕಾ ಮಾತ್ರ ಇನ್ನೂ ವಿಲನ್ ಗಳೇ ಆಗಿದ್ದಾರೆ. 
 

27

ಸೀರಿಯಲ್ ಕಥೆ ಸೈಡಿಗಿರಲಿ, ಈವಾಗ ಹೇಳೋದಕ್ಕೆ ಬಂದ ವಿಷ್ಯ ಅಂದ್ರೆ, ಶ್ರೀರಸ್ತು ಶುಭಮಸ್ತುವಿನ ಹಲವು ಜೋಡಿಗಳಲ್ಲಿ ಒಂದು ಜೋಡಿ ಅಭಿ ಮತ್ತು ದೀಪಿಕಾ. ದೀಪಿಕಾ ಕೆಟ್ಟವಳಾದರೂ ಗಂಡನನ್ನು ತುಂಬಾ ಪ್ರೀತಿಸುತ್ತಾಳೆ. ಆದರೆ ಶಾರ್ವರಿ ಕುತಂತ್ರಕ್ಕೆ ಸಾಥ್ ನೀಡುತ್ತಾಳೆ. ಆದರೂ ಜನರಿಗೆ ಅಭಿ ಮತ್ತು ದೀಪಿಕಾ ಜೋಡಿ ಅಂದ್ರೆ ಇಷ್ಟ. 
 

37

ಶ್ರೀರಸ್ತು ಶುಭಮಸ್ತುವಿನಲ್ಲಿ ಅಭಿ ಪಾತ್ರದಲ್ಲಿ ನಕುಲ್ ಶರ್ಮಾ (Nakula Sharma) ಹಾಗೂ ದೀಪಿಕಾ ಪಾತ್ರದಲ್ಲಿ ದರ್ಶಿನಿ ಡೆಲ್ಟಾ ನಟಿಸುತ್ತಿದ್ದಾರೆ. ಇವರಿಬ್ಬರು ಜೊತೆಯಾಗಿ ರೀಲ್ಸ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಕೂಡ ಶೇರ್ ಮಾಡುತ್ತಲಿರುತ್ತಾರೆ. 
 

47

ಇದೀಗ ಇದೇ ಜೋಡಿ ತೆಲುಗು ಸೀರಿಯಲ್ ನಲ್ಲೂ ಜೋಡಿಯಾಗಿ ನಟಿಸುತ್ತಿದ್ದಾರೆ. ಹೌದು, ಧಾರಾವಾಹಿಗಳಲ್ಲಿ ಒಂದು ಸಲ ಜೋಡಿಯಾದವರು ಮತ್ತೊಮ್ಮೆ ಜೋಡಿಯಾಗೋದು ತುಂಬಾನೆ ಅಪರೂಪ, ಅಂತದರಲ್ಲಿ ಈ ಜೋಡಿ ಮತ್ತೆ ಗಂಡ -ಹೆಂಡತಿಯಾಗಿ ನಟಿಸುತ್ತಿದ್ದಾರೆ. 
 

57

ತೆಲುಗಿನ ಸ್ಟಾ ಮಾದಲ್ಲಿ ಪ್ರಸಾರವಾಗುತ್ತಿರುವ ಪಾಪೆ ಮಾ ಜೀವನ ಜ್ಯೋತಿ ಧಾರಾವಾಹಿಯಲ್ಲಿ ನಕುಲ್ ಶರ್ಮಾ ಹಾಗೂ ದರ್ಶಿನಿ ಡೆಲ್ಟಾ (Darhsini Delta) ಜೋಡಿಯಾಗಿ ನಟಿಸುತ್ತಿದ್ದಾರೆ. ಆ ಧಾರಾವಾಹಿಯಲ್ಲೂ ದರ್ಶಿನಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 
 

67

ಇನ್ನು ನಕುಲ್ ಶರ್ಮಾ ವಿಚಾರಕ್ಕೆ ಬರೋದಾದ್ರೆ, ಕೆಲವು ವರ್ಷಗಳಿಂದ ಇವರು ಕನ್ನಡ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. ಈ ಹಿಂದೆ ಇವರು ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ತಮ್ಮನಾಗಿ ನಟಿಸುತ್ತಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
 

77

ಇನ್ನು ಮೂಲತಃ ಡ್ಯಾನ್ಸ್ ಕೊರಿಯೋಗ್ರಾಫರ್ (Dance Choreographer) ಆಗಿರುವ ದರ್ಶಿನಿ, ತಮ್ಮ ಡ್ಯಾನ್ಸ್ ಕೊರೊಯೋಗ್ರಾಫಿ ಹಾಗೂ ನಟನೆ ಎರಡನ್ನೂ ಜೊತೆಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ದರ್ಶಿನಿ ತಮಿಳು, ತೆಲುಗು ಸ್ಟಾರ್ ಗಳಿಗೂ ನೃತ್ಯ ಸಂಯೋಜನೆ ಮಾಡಿದ್ದು, ಇದೀಗ ಪೂರ್ಣ ಪ್ರಮಾಣದ ಕೊರಿಯೋಗ್ರಾಫರ್ ಆಗಿ ಉಪಾಧ್ಯಕ್ಷ ಸಿನಿಮಾ ಮೂಲಕ ತಮ್ಮ ಕರಿಯರ್ ಆರಂಭಿಸಿದ್ದರು. 
 

click me!

Recommended Stories