Srirasthu Shubhamasthu: ದತ್ತಣ್ಣ -ಅಜ್ಜಿಯ ಕಾಂಬಿನೇಶನ್ ಹೇಗಿದೆ?.... ಹೊಸ ಲವ್ ಸ್ಟೋರಿ ಶುರುವಾಗ್ತಿದೆಯಾ?

Published : Feb 23, 2024, 06:03 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ತುಳಸಿ ಮಾವ ಜನರ ಫೇವರಿಟ್ ದತ್ತಣ್ಣನಿಗೆ ಒಬ್ಬರು ಹೊಸ ಫ್ರೆಂಡ್ ಸಿಕ್ಕಿದ್ದಾರೆ. ಪ್ರೇಕ್ಷಕರು ಸೊಸೆ ಮದ್ವೆ ಆಯ್ತು, ಇನ್ನು ಮಾವಂದು ಅಂತಿದ್ದಾರೆ.   

PREV
17
Srirasthu Shubhamasthu: ದತ್ತಣ್ಣ -ಅಜ್ಜಿಯ ಕಾಂಬಿನೇಶನ್ ಹೇಗಿದೆ?.... ಹೊಸ ಲವ್ ಸ್ಟೋರಿ ಶುರುವಾಗ್ತಿದೆಯಾ?

ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಶ್ರೀರಸ್ತು ಶುಭಮಸ್ತು (Srirasthu Shubhamasthu) ಹೊಸ ಹೊಸ ಎಳೆಯೊಂದಿಗೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಇದೀಗ ಕಥೆಗೆ ಹೊಸ ಎಂಟ್ರಿಯಾಗಿದೆ. ಈ ಎಂಟ್ರಿ ಬಗ್ಗೆ ಪ್ರೇಕ್ಷಕರಲ್ಲೂ ಕುತೂಹಲ ಹೆಚ್ಚಿದೆ. 

27

ಸೀರಿಯಲ್ ಕಥೆ ಇದ್ದಿದ್ದೇ ಆರಂಭದಲ್ಲಿ ಗಂಡ ತೀರಿಕೊಂಡು ವಿಧವೆಯಾಗಿದ್ದ ತುಳಸಿ ಮತ್ತು ಮಾಧವರ ಮದುವೆ ಬಂಧ ಬೆಸೆಯುವ ಮೂಲಕ. ಇಬ್ಬರನ್ನೂ ಸೇರಿಸಿ, ಇಬ್ಬರು ಒಳ್ಳೆಯ ಜೋಡಿಯಾಗುತ್ತಾರೆಂದು ಮದುವೆ ಮಾಡಿಸಿರೋದು ತುಳಸಿ ಮಾವ ದತ್ತ. 
 

37

ಇದೀಗ ದತ್ತಣ್ಣನು ಮದುವೆ ಮಾಡ್ಕೊಳ್ತಾರೇನೋ ಎಂದು ಹೇಳ್ತಿದ್ದಾರೆ ಪ್ರೇಕ್ಷಕರು. ಅದು ಯಾಕೆ ಅಂದ್ರೆ ಪಾರ್ಕ್ ಗೆ ವಾಕಿಂಗ್ ಹೋಗುವ ತುಳಸಿ ಮಾವ ದತ್ತಣ್ಣನಿಗೆ ಅಲ್ಲೊಬ್ಬ ಅಜ್ಜಿಯ ಪರಿಚಯ ಆಗುತ್ತೆ. ಪರಿಚಯ ಅಂದ್ರೆ ಜಗಳದಿಂದಲೇ ಇಬ್ಬರ ಮಾತು ಕತೆ ಆರಂಭವಾಗುತ್ತೆ. 
 

47

ಸಿಟ್ಟು ಹೆಚ್ಚಿರೋ ಅಜ್ಜಿ ದತ್ತಣ್ಣನಿಗೆ ಸರಿಯಾಗಿ ಬೈಯೋದ್ರಿಂದಲೇ ಪರಿಚಯ ಆರಂಭ. ಮರುದಿನವೂ ದತ್ತಣ್ಣನ ವಾಕಿಂಗ್ ಸ್ಟಿಕ್, ಅಜ್ಜಿಯ ಹಣೆಗೆ ತಾಗಿ ಮತ್ತೊಮ್ಮೆ ಗಲಾಟೆ, ಹೀಗೆ ಅಜ್ಜಿ ಮತ್ತು ದತ್ತಣ್ಣನ ಭೇಟಿ ಪದೇ ಪದೇ ಆಗುತ್ತಲೇ ಇದೆ. ಸದ್ಯಕ್ಕೆ ಸೀರಿಯಲ್ ನಲ್ಲಿ(serial) ಅದನ್ನೇ ಹೈಲೈಟ್ ಮಾಡ್ತಿದ್ದಾರೆ. 
 

57

ಇದನ್ನ ನೋಡಿದ ಪ್ರೇಕ್ಷಕರು ಅಜ್ಜಿ ಮತ್ತು ತಾತನ ಲವ್ ಸ್ಟೋರಿ (lovestory)ಆರಂಭವಾಗುತ್ತೆ. ಹೋ ತಾತನಿಗೆ ಒಂದು ಜೋಡಿ ಸಿಕ್ಕಿತು. ಮಾಧವ ತುಳಸಿ ಆಯ್ತು, ಇನ್ನು ಇವರದ್ದೆ ಮದುವೆ ಇರಬೇಕು ಎಂದೆಲ್ಲಾ ಹೇಳುತ್ತಿದ್ದಾರೆ. 
 

67

ಇನ್ನೂ ಕೆಲವರು ದತ್ತಣ್ಣನಿಗೆ ಸರಿಯಾದ ಜೋಡಿ ಇವರೇನೆ… ಶುರುವಾಗಲಿ ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ, ಸೂಪರ್ ಲವ್ ಸ್ಟೋರಿ, ಎಂದರೆ, ಕೆಲವರು ಇಬ್ಬರನ್ನು ಜೋಡಿ ಮಾಡಬೇಡಿ, ಇಬ್ಬರಿಗೆ ಮದುವೆ ಮಾಡಬೇಡಿ ಪ್ಲೀಸ್ ಅಂದ್ರೆ, ಇನ್ನೂ ಕೆಲವರು ಇಬ್ಬರಿಗೆ ಮದುವೆ ಮಾಡಿ ಬಿಡಿ ಅಂತಿದ್ದಾರೆ. 
 

77

ಅಷ್ಟೇ ಅಲ್ಲ ಮತ್ತೆ ಕೆಲವರು ಸ್ಟೋರಿ ಎಲ್ಲೆಲ್ಲೋ ಹೋಗ್ತಿದೆ. ಈವಾಗ ಈ ತರ ಸ್ಟೋರಿ ಬೇಕಿತ್ತಾ? ಇದನ್ನೆಲ್ಲಾ ತೋರಿಸೋ ಮೂಲಕ ಜನರಿಗೆ ಏನು ಸಂದೇಶ ಕೊಡ್ತಿದ್ದೀರಾ? ಅಂತೆಲ್ಲಾ ಕೇಳಿದ್ದಾರೆ? ಸಂಗಾತಿ ಇಲ್ಲದೇ ಒಂಟಿ ಆಗಿರುವ ಅಜ್ಜ- ಅಜ್ಜಿ ಮದ್ವೆ ಆದ್ರೆ ಅದರಲ್ಲೇನಿದೆ ತಪ್ಪು? ನೀವೇನಂತೀರಾ?
 

Read more Photos on
click me!

Recommended Stories